ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 25–12–1966

Last Updated 24 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಗರ ಕಾರ್ಪೊರೇಷನ್‌ ಮೂರು ವರ್ಷಕಾಲ ರದ್ದು– ಆಡಳಿತಾಧಿಕಾರಿಯಾಗಿ ಶ್ರೀ ಕೆ. ಬಾಲಸುಬ್ರಹ್ಮಣ್ಯಂ: ವಿಶೇಷ ಗೆಜೆಟ್‌ ಪ್ರಕಟಣೆ
ಬೆಂಗಳೂರು, ಡಿ. 24–
ಬೆಂಗಳೂರು ನಗರ ಪ್ರದೇಶ ಮತ್ತು ದಂಡಿನ ಪ್ರದೇಶಗಳ ಪೌರಸಭೆಗಳು ಒಂದುಗೂಡಿ 1949ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಕಾರ್ಪೊರೇಷನ್‌, ಹದಿನೇಳು ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ರದ್ದುಗೊಳಿಸಲ್ಪಟ್ಟು, ಇಂದಿನಿಂದ ಮೂರು ವರ್ಷಗಳ ಕಾಲ ಸರ್ಕಾರದ ಆಡಳಿತಕ್ಕೆ ಒಳಪಟ್ಟಿತು.

ಸರ್ಕಾರ ವಿಶೇಷ ಗೆಜೆಟ್‌ ಪ್ರಕಟಿಸುವುದರ ಮೂಲಕ, ಕಾರ್‍ಪೊರೇಷನ್‌ ರದ್ದುಗೊಳಿಸಬೇಕಾಗಿ ಬಂದ ಅನಿವಾರ್ಯ ಪರಿಸ್ಥಿತಿಗೆ ಹದಿನಾಲ್ಕು ಕಾರಣಗಳನ್ನು ಪಟ್ಟಿ ಮಾಡಿ ತಿಳಿಸಿದೆಯಲ್ಲದೆ, ಹಿರಿಯ ಐ.ಎ.ಎಸ್‌. ಅಧಿಕಾರಿ ಶ್ರೀ ಕೆ. ಬಾಲಸುಬ್ರಹ್ಮಣ್ಯಂ ಅವರನ್ನು ಕಾರ್ಪೊರೇಷನ್ನಿನ ಆಡಳಿತಾಧಿಕಾರಿಯಾಗಿ ನೇಮಿಸಿದೆ.

ಗೋಹತ್ಯೆಯನ್ನು ನಿಷೇಧಿಸಲು ಆಂಧ್ರದ ಒಪ್ಪಿಗೆ
ಹೈದರಾಬಾದ್‌, ಡಿ. 24–
ಹಸು ಮತ್ತು ಎಮ್ಮೆಗಳನ್ನು ಕೊಲ್ಲುವುದನ್ನು ನಿಷೇಧಿಸುವ ಮಸೂದೆಯೊಂದನ್ನು ತರಲು ಆಂಧ್ರ ಪ್ರದೇಶ ಸರಕಾರ ‘ತತ್ವಶಃ’ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT