ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡೆ ಬೆಳೆ

ಎಣಿಕೆ ಗಳಿಕೆ
Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಬೆಂಡೆ ಬೆಳೆಗೆ ಯೋಗ್ಯ

ನೆಲ ಹದಗೊಳಿಸಿದ ನಂತರ ಹೊಲದಲ್ಲಿ ಸಾಲಿನಿಂದ ಸಾಲಿಗೆ ಎರಡೂವರೆ ಅಡಿ ಅಂತರದಲ್ಲಿ ಸುಮಾರು ಒಂದು ಅಡಿ ಎತ್ತರದ ಪಟ್ಟೆಸಾಲು ನಿರ್ಮಿಸಬೇಕು. ಪ್ರತಿಯೊಂದು ಸಾಲು ಸುಮಾರು 80 ಅಡಿ ಉದ್ದ ಇದ್ದರೆ ಒಳಿತು. ಈ ಪಟ್ಟೆಗಳಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರದಂತೆ ಬೆಂಡೆ ಬೀಜ ಬಿತ್ತಿ ಗೊಬ್ಬರ ಹಾಕಬೇಕು.

**

ಎರಡು ದಿನಕ್ಕೊಮ್ಮೆ ನೀರು ಹಾಯಿಸಬೇಕು. ನಂತರ 25 ದಿನಕ್ಕೆ ಒಮ್ಮೆಯಂತೆ 2 ಸಲ ಗೊಬ್ಬರ ನೀಡಿ ಮಣ್ಣು ಏರಿಸಿಕೊಡಬೇಕು

**

ಹಟ್ಟಿ ಗೊಬ್ಬರ ಅಥವಾ ಸಾವಯವ ಗೊಬ್ಬರಗಳನ್ನು ಬಳಸುವುದೇ ಉತ್ತಮ. ಇದರಿಂದ ಬಹುಕಾಲ ಕೊಯ್ಲು ಸಾಧ್ಯ. ಇದಲ್ಲದೆ ಸುಡುಮಣ್ಣು ಅಥವಾ ಬೂದಿಯನ್ನು ಗೊಬ್ಬರವಾಗಿ ಬಳಸಬಹುದು. ನೆಲಗಡಲೆ, ಕಹಿಬೇವಿನ ಹಿಂಡಿಯನ್ನು ನೀರಿನಲ್ಲಿ ನೆನೆಸಿ ಬೂದಿಯೊಂದಿಗೆ ಮಿಶ್ರಮಾಡಿ ಹಾಕಬಹುದು.

**

ಗೋಮೂತ್ರದ ಔಷಧ ಹಾಕಿದರೆ ಬೆಂಡೆಕಾಯಿಯನ್ನು ಚೆನ್ನಾಗಿ ಬೆಳೆಯಬಹುದು. ಇದಕ್ಕಾಗಿ: ಒಂದು ಕೊಡ ನೀರಿಗೆ ಒಂದು ಕೆ.ಜಿ. ಹುಳಿ ಬೆಲ್ಲ, ಎರಡು ಲೀಟರ್ ಗೋಮೂತ್ರ ಮಿಶ್ರಮಾಡಿ ಒಂದು ದಿವಸ ಹಾಗೇ ಬಿಡಬೇಕು. ಮರುದಿನ ಗಿಡಗಳ ಮೇಲೆ, ಬುಡ ಹಾಗೂ ಸುತ್ತಲೂ ಸಿಂಪಡಿಸಬೇಕು. ತಿಂಗಳಲ್ಲಿ ಮೂರು ಬಾರಿ ಈ ರೀತಿ ಸಿಂಪಡಿಸುವುದರಿಂದ ಕೀಟ, ವಿವಿಧ ರೋಗಗಳಿಂದ ದೂರವಿರಬಹುದು.

**

ಬೆಂಡೆ ಗಿಡವಾಗಿ 40-45 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸಸಿ ಹೂ ಬಿಟ್ಟ ಅನಂತರ 3-7 ದಿನಗಳಲ್ಲಿ ಕಾಯಿಗಳು ಮೂಡುತ್ತವೆ. ನಾರಿಲ್ಲದ ಎಳೆಯ ಕಾಯಿಗಳನ್ನು 3-4 ದಿನಗಳಿಗೊಮ್ಮೆ ಕೊಯ್ಯಬಹುದು.

**

ಒಂದು ವೇಳೆ ಬೆಂಡೆ ವೈರಸ್‌ ಪೀಡಿತವಾದರೆ ಅಂತಹ ಗಿಡಗಳನ್ನು ಕಿತ್ತು ನಾಶಪಡಿಸಿ. ಅತಿಯಾಗಿ ಹುಳಿಯಿರುವ ಒಂದು ಲೀಟರ್‌ ಮಜ್ಜಿಗೆಯನ್ನು 10 ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಿ.

**

ಬೆಂಡೆ ಬೀಜಗಳನ್ನು ನಾಟಿ ಮಾಡುವ ಮೊದಲೇ 4  ಲೀಟರ್‌ ಗಂಜಲ ಹಾಗೂ 4 ಕೆ.ಜಿ. ಸೆಗಣಿಯನ್ನು 10 ಲೀಟರ್‌ ನೀರಿನಲ್ಲಿ ಕಲಸಿಡಬೇಕು. ಇದಕ್ಕೆ ನಾಲ್ಕು ದಿನಗಳ ನಂತರ ಸುಣ್ಣ ಬೆರೆಸಬೇಕು. ಸುಣ್ಣ ಬೆರೆಸಿದ ಒಂದು ಗಂಟೆಯ ನಂತರ ಬೆಂಡೆ ಬೀಜಗಳನ್ನು 6-8  ಗಂಟೆ ನೆನೆಸಬೇಕು. ನಂತರ ನೆರಳಿನಲ್ಲಿ ಆರಿಸಿ ನಾಟಿ ಮಾಡಿದರೆ ನಂಜು ಭಾದೆ ನಿಯಂತ್ರಿಸಬಹುದು.

**

ಗ್ರಾಫಿಕ್ಸ್‌: ವಿಜಯಕುಮಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT