ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೀಡೆಯಿಂದ ಕ್ರಿಯಾಶೀಲತೆ ವೃದ್ಧಿ’

Last Updated 27 ಡಿಸೆಂಬರ್ 2016, 8:30 IST
ಅಕ್ಷರ ಗಾತ್ರ

ಗದಗ:  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ನಿರಂತರವಾಗಿ ಕರ್ತವ್ಯದಲ್ಲಿರುವ ಪೊಲೀಸರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಕ್ರೀಡೆಯಿಂದ ದೈಹಿಕ, ಮಾನಸಿಕ ನೆಮ್ಮದಿ ದೊರೆಯುತ್ತದೆ. ಜತೆಗೆ ಕ್ರಿಯಾಶೀಲತೆ ವೃದ್ಧಿಯಾಗುತ್ತದೆ. ಒತ್ತಡದ ಸನ್ನಿವೇಶಗಳನ್ನು ಸಲಭವಾಗಿ ನಿವಾರಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು, ಡಿವೈಎಸ್‌ಪಿ ವಿಜಯಕುಮಾರ ಟಿ. ಇದ್ದರು. 8 ತಂಡಗಳು ಭಾಗಿ: ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗದಗ ಶಹರ, ಬೆಟಗೇರಿ, ಗದಗ ಗ್ರಾಮೀಣ ವೃತ್ತ, ರೋಣ ಮತ್ತು ಮುಂಡರಗಿ ವೃತ್ತ ಹಾಗೂ ಶಿರಹಟ್ಟಿ ವೃತ್ತಗಳಿಂದ ಒಟ್ಟು 8 ತಂಡಗಳು ಪಾಲ್ಗೊಂಡಿವೆ. 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾವಹಿಸಿದ್ದಾರೆ.

ಮೂರು ದಿನಗಳವರೆಗೆ ನಡೆಯುವ ಕ್ರೀಡಾಕೂಟದಲ್ಲಿ 100 ಮೀ, 200 ಮೀ, 800 ಮೀ. ಹಾಗೂ 4x100 ರಿಲೆ ಓಟ, ಗುಂಡು ಎಸೆತ, ಡಿಸ್ಕಸ್ ಥ್ರೋ, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಕ್ರಿಕೆಟ್, ರೈಫಲ್ ಫೈರಿಂಗ್, ಶೆಟಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಲಿವೆ.

ಮೊದಲ ದಿನದ ಫಲಿತಾಂಶ
ಪುರುಷರ ವಿಭಾಗ– 200 ಮೀ. ಓಟ: ಸಂಜು ಕೊರಡೂರು (ಪ್ರಥಮ), ವೀರೇಶ ಬಿಚನಳ್ಳಿ (ದ್ವಿತೀಯ), ರಾಜೇಸಾಬ ಮುಲ್ಲಾ (ತೃತೀಯ). ಎತ್ತರ ಜಿಗಿತ: ಆರ್.ಎಚ್.ಮುಲ್ಲಾ (ಪ್ರಥಮ), ಬಿ.ವಿ.ಇನಾಮತಿ (ದ್ವಿತೀಯ), ಎಚ್.ಕೆ.ಹುಲ್ಲೂರ (ತೃತೀಯ). ಉದ್ದ ಜಿಗಿತ: ಬಸವರಾಜ ಬಿ. (ಪ್ರಥಮ), ಮಂಜುನಾಥ ಪಿ. (ದ್ವಿತೀಯ), ಮಲ್ಲಪ್ಪ ಎಚ್.ಪಿ. (ತೃತೀಯ). ನಿಸ್ತಂತು ಸಿಬ್ಬಂದಿ 100 ಮೀ. ಓಟ: ಆನಂದ ಚಿನಗುಡಿ (ಪ್ರಥಮ), ಸುರೇಶ ನವಲಗುಂದ (ದ್ವಿತೀಯ), ಎಸ್.ಎಸ್. ಕಟ್ಟಿಮನಿ (ತೃತೀಯ). ಗುಂಡು ಎಸೆತ: ವಿ.ಎಸ್.ಚೌಟ (ಪ್ರಥಮ), ಸುರೇಶ ನವಲಗುಂದ (ದ್ವಿತೀಯ), ಆನಂದ ಚಿನಗುಡಿ (ತೃತೀಯ).

ಲಿಪಿಕ ಸಿಬ್ಬಂದಿ ಗುಂಡು ಎಸೆತ: ಎಸ್.ಸಿ.ಕುಂಬಾರ (ಪ್ರಥಮ), ಪಿ.ಜಿ.ಶ್ರೀನಿವಾಸ (ದ್ವಿತೀಯ), ಕೆ.ಎಚ್.ಮಲ್ಲನಗೌಡ್ರ (ತೃತೀಯ)
100 ಮೀ. ಓಟ: ಎಸ್.ಸಿ.ಕುಂಬಾರ (ಪ್ರಥಮ), ಕೆ.ಎಚ್.ಮಲ್ಲನಗೌಡ್ರ (ದ್ವಿತೀಯ), ಬಿ.ಎಚ್.ಶಿರೋಳ (ತೃತೀಯ) ಅವರು ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗ– 100 ಮೀ. ಓಟ: ಎಸ್.ಎಸ್.ಶಿವನಗೌಡ್ರ (ಪ್ರಥಮ), ಕುಸುಮಾ ಎನ್.ಕೆ. (ದ್ವಿತೀಯ), ಶ್ರೀದೇವಿ ಶಿವನೆಂಪರ್ (ತೃತೀಯ). ಗುಂಡು ಎಸೆತ: ಪುಷ್ಪಾ ಮಣ್ಣೂರ (ಪ್ರಥಮ), ಎಸ್.ಬಿ. ಬೆನಕಲ್ (ದ್ವಿತೀಯ), ಮಹಮುದಾ ಬೇಗಂ (ತೃತೀಯ). ಚಕ್ರ ಎಸೆತ: ಪುಷ್ಪಾ ಮಣ್ಣೂರ (ಪ್ರಥಮ), ಎಸ್.ಬಿ.ಬೆನಕಲ್ (ದ್ವಿತೀಯ), ಕುಸುಮಾ ಎನ್.ಕೆ. (ತೃತೀಯ). ಉದ್ದ ಜಿಗಿತ: ಕುಸುಮಾ ಎನ್.ಕೆ. (ಪ್ರಥಮ), ಪುಷ್ಪಾ ಮಣ್ಣೂರ (ದ್ವಿತೀಯ), ಎಸ್.ಎಸ್. ಶಿವನಗೌಡ್ರ (ತೃತೀಯ). ಲಿಪಿಕ ಸಿಬ್ಬಂದಿ 50 ಮೀ. ಓಟ: ಕಾಲೇಜಾನ್ (ಪ್ರಥಮ), ಎಸ್.ಎಂ.ಕಿತ್ತೂರ (ದ್ವಿತೀಯ), ಎಸ್.ಸಿ.ಕರಂಡಿ (ತೃತೀಯ)
ಚಕ್ರ ಎಸೆತ: ಎಸ್.ಎಂ.ಕಿತ್ತೂರ (ಪ್ರಥಮ), ಆರ್.ಜಿ. ಸುಮಿತ್ರಾ (ದ್ವಿತೀಯ), ಟಿ.ಎಂ.ಅನಿತಾ (ತೃತೀಯ) ಅವರು ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT