ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಂಚರ್ ಆ್ಯಪ್‌ಗಳು

ಆ್ಯಪ್‌ ಮಾರುಕಟ್ಟೆ
Last Updated 27 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಲಾಂಚರ್ ಆ್ಯಪ್‌ಗಳು
ಈ ವರ್ಷದ ಜನಪ್ರಿಯ ಆ್ಯಪ್‌ಗಳಲ್ಲಿ ಆಂಡ್ರಾಯ್ಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳ ವಿನ್ಯಾಸಕ್ಕೆ ಹೊಸ ರೂಪ ಕೊಟ್ಟಿದ್ದು ಲಾಂಚರ್ ಆ್ಯಪ್‌ಗಳು. ಇವು ಟಚ್‌ಸ್ಕ್ರೀನ್‌ ತಂತ್ರಜ್ಞಾನದಲ್ಲಿ ಹೊಸ ಸಂಚಲನ ಮೂಡಿಸಿದವು. ಮೊಬೈಲ್, ಸ್ಮಾರ್ಟ್‌ಫೋನ್  ಪರದೆಗಳ ವಿನ್ಯಾಸವನ್ನು ಈ ಆ್ಯಪ್ಗಳ ಮೂಲಕ ಆಕರ್ಷಕವಾಗಿ ಬದಲಾವಣೆ ಮಾಡಿಕೊಳ್ಳಬಹುದು.

ಹೊಸ ಹೊಸ ಚಿತ್ರಗಳು, ಆಕರ್ಷಕ ವಿನ್ಯಾಸ, ಹೋಮ್ ಸ್ಕ್ರೀನ್ ಬದಲಾವಣೆ, ವಾಲ್ ಪೇಪರ್ ಮತ್ತು ಐಕಾನ್‌ಗಳನ್ನು ಬಳಕೆದಾರರು ತಮ್ಮ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಸೌಲಭ್ಯವು ಆ್ಯಕ್ಸನ್‌ ಲಾಂಚರ್ 3 (Action Launcher 3) ಮೂಲಕ ಗ್ರಾಹಕರಿಗೆ ಲಭ್ಯವಾಯಿತು. ವಿಶ್ವದಾದ್ಯಂತ ಹತ್ತು ಕೋಟಿಗೂ ಹೆಚ್ಚು ಬಳಕೆದಾರರು ಈ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡಿರುವುದು ವಿಶೇಷ. 2016ರ ಅತ್ಯುತ್ತಮ 15 ಲಾಂಚರ್‌ ಆ್ಯಪ್ಸ್‌ಗಳಲ್ಲಿ   ಆರೊ ಲಾಂಚರ್‌ (Arrow Launcher), ಅಪೆಕ್ಸ್‌ ಲಾಂಚರ್‌ (Apex Launcher), ಆಟಮ್‌ ಲಾಂಚರ್‌ (Atom Launcher), ಗೋ ಲಾಂಚರ್‌ ಎಕ್ಸ್‌ (GO Launcher EX), ನೆಕ್ಸ್‌ ಲಾಂಚರ್‌ 3ಡಿ ಷೆಲ್‌ (Next Launcher 3D Shell), ನೋವಾ ಲಾಂಚರ್‌ (Nova Launcher) ಪ್ರಮುಖವಾಗಿವೆ.

2016ರ  ಜನಪ್ರಿಯ ಆಂಡ್ರಾಯ್ಡ್‌ ಆ್ಯಪ್‌ಗಳು
ಮನೆಯಲ್ಲಿ 2016ನೇ ವರ್ಷದ ಕ್ಯಾಲೆಂಡರ್ ಬದಲಿಸಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ವರ್ಷದಲ್ಲಿ ಏನೆಲ್ಲ ಸಿಹಿ-ಕಹಿ ಘಟನೆಗಳು ಘಟಿಸಿರಬಹುದು.  ಜಾಗತಿಕ ಆ್ಯಪ್ ಮಾರುಕಟ್ಟೆಯಲ್ಲಂತೂ ಒಂದು ಕ್ರಾಂತಿಯೇ ನಡೆದು ಹೋಗಿದೆ! ಏಕೆಂದರೆ ಈ ವರ್ಷದಲ್ಲಿ ಆರೋಗ್ಯ, ವಿಜ್ಞಾನ, ಶಿಕ್ಷಣ, ಮನರಂಜನೆ, ವಾಣಿಜ್ಯ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾವಿರಾರು ಆ್ಯಪ್‌ಗಳು ಬಿಡುಗಡೆಯಾಗಿರುವುದು ವಿಶೇಷ. ಈ ವರ್ಷ ಬಿಡುಗಡೆಯಾದ ಜನಪ್ರಿಯ ಆಂಡ್ರಾಯ್ಡ್‌ ಆ್ಯಪ್‌ಗಳ ಸಂಕ್ಷಿಪ್ತ ಪರಿಚಯ ಈ ಬಾರಿ.
 

7 ಮಿನಿಟ್ ವರ್ಕ್ ಔಟ್ ಆ್ಯಪ್ 

ಆರೋಗ್ಯ ಕ್ಷೇತ್ರದಲ್ಲಿ 7 ಮಿನಿಟ್ ವರ್ಕ್ ಔಟ್ ಆ್ಯಪ್ (7 Minute Workout app) ಗಮನ ಸೆಳೆದ ಜನಪ್ರಿಯ ಆ್ಯಪ್. ಮುಂದುವರೆದ ದೇಶಗಳ ಲಕ್ಷಾಂತರ ಜನರು ಈ ಆ್ಯಪ್ ಡೌನ್‌ಲೋಡ್‌  ಮಾಡಿಕೊಂಡಿರುವುದು ವಿಶೇಷ.  ದೇಹದ ತೂಕ, ಎತ್ತರ ಹಾಗೂ ಮಾನಸಿಕ ಒತ್ತಡದ ಬಗ್ಗೆ ಈ ‘7 ಮಿನಿಟ್ ಆ್ಯಪ್’ ಸದಾ ಎಚ್ಚರಿಸುವ ಕೆಲಸ ಮಾಡುತ್ತದೆ.

ಇದನ್ನು ಡೌನ್‌ಲೋಡ್‌   ಮಾಡಿಕೊಂಡಿರುವ ಗ್ರಾಹಕರಿಗೆ ಇದು  ಬಳಕೆದಾರರ ಆರೋಗ್ಯ ಮತ್ತು ದೈಹಿಕ ಕಸರತ್ತಿನ ಬಗ್ಗೆ  ಸಕಾಲದಲ್ಲಿ ಎಚ್ಚರಿಸುತ್ತದೆ. ಉದಾಹರಣೆಗೆ ತೂಕದಲ್ಲಿ ಏರಿಕೆ ಕಂಡುಬಂದಲ್ಲಿ ತೂಕ ಇಳಿಸಿಕೊಳ್ಳುವಂತೆ ಸೂಚನೆ ನೀಡುತ್ತದೆ. ಬಳಕೆದಾರರು ಜೀಮ್‌ಗೆ ತೆರಳದೆ ಮನೆಯಲ್ಲೇ  7 ನಿಮಿಷಗಳಲ್ಲಿ ಸುಲಭವಾಗಿ ದೈಹಿಕ ಕಸರತ್ತು ಮಾಡುವಂತಹ ಕೆಲವು ಭಂಗಿಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ಸರಿಯಾದ ಸಮಯಕ್ಕೆ ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳುವಂತೆಯೂ 7 ಮಿನಿಟ್ ಆ್ಯಪ್ ಅಲಾರಂ ಕೊಡುತ್ತದೆ. ಒಟ್ಟಿನಲ್ಲಿ ಈ ಆ್ಯಪ್ ಆಪ್ತ ಸಹಾಯಕರು, ಕೇರ್ ಟೇಕರ್‌ಗಳು  ಮಾಡಬಹುದಾದ ಕೆಲಸವನ್ನು ಮಾಡುತ್ತದೆ.

ಅವಸ್ತ ಆ್ಯಂಟಿ ವೈರಸ್ ಆ್ಯಪ್

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಒಂದು ದೊಡ್ಡ ತಲೆ ನೋವು ಎಂದರೆ ಫೋನ್‌ಗಳಲ್ಲಿನ ವೈರಸ್ ಹಾವಳಿ.  ಒಮ್ಮೆ  ವೈರಸ್ ಸೇರಿ ಬಿಟ್ಟರೆ ಮೊಬೈಲ್‌ ಕೆಲಸದ ವೇಗ ನಿಧಾನವಾಗಿ ಬಿಡುತ್ತದೆ. ಹಾಗೆ ಪದೇ ಪದೇ ಹ್ಯಾಂಗ್ ಆಗುತ್ತದೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ನೂರಾರು ಆ್ಯಂಟಿ ವೈರಸ್ ಆ್ಯಪ್‌ಗಳು ಸಿಗುತ್ತವೆ.

ಆಂಡ್ರಾಯ್ಡ್‌ ಫೋನ್ ಸುರಕ್ಷತೆಗೆ ಆದ್ಯತೆ ನೀಡಿ ಅವಸ್ತ ಆ್ಯಪ್ (Avast app) ವಿನ್ಯಾಸಗೊಳಿಸಿರುವುದು ವಿಶೇಷ. ಮೊಬೈಲ್‌ನಲ್ಲಿರುವ ಚಿಪ್, ಮೆಮರಿ ಕಾರ್ಡ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ ಹಾಗೂ ಮಾಲ್‌ವೇರ್‌ಗಳಂತಹ ವೈರಸ್ ಬರುವುದನ್ನು ತಡೆಯುತ್ತದೆ. ಇದೇ ಕಾರಣಕ್ಕಾಗಿಯೇ ಈ ಆ್ಯಪ್ ಅನ್ನು ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿನ ಲಕ್ಷಾಂತರ ಜನರು ಬಳಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಈ ಆ್ಯಪ್ ಉಚಿತವಾಗಿ ಲಭ್ಯವಿತ್ತು. ಈಗ ಹಣ ಕೊಟ್ಟು ಖರೀದಿಸಬೇಕು.

ಪಾಡಕಾಸ್ಟ್ ಆ್ಯಪ್…

ಜನಪ್ರಿಯ ಪಾಡಕಾಸ್ಟ್ ಆ್ಯಪ್  (podcast app) ಫೈಲ್‌ಗಳನ್ನು  ವ್ಯವಸ್ಥಿತವಾಗಿ ಜೋಡಿಸಲು ಸಹಾಯ ಮಾಡುತ್ತದೆ. ಮೊಬೈಲ್‌ಗಳಲ್ಲಿ ನಾವು ಫೈಲ್‌ಗಳನ್ನು ವಿವಿಧ ಫೋಲ್ಡರ್‌ಗಳಲ್ಲಿ  ಇಟ್ಟಿರುತ್ತೇವೆ.  ತುರ್ತಾಗಿ ಆ ಫೈಲ್‌ಗಳು ಬೇಕಾದಾಗ ಅವುಗಳನ್ನು ಹುಡುಕುವುದೇ ಸಮಸ್ಯೆಯಾಗುತ್ತದೆ. ನಮಗೆ ಬೇಕಾದ ಕಡತಗಳು ಮೊಬೈಲ್‌ನಲ್ಲಿ ಇದ್ದರೂ ಕೆಲವೊಮ್ಮೆ ಸಿಗುವುದಿಲ್ಲ! ಇಂತಹ  ಸಮಸ್ಯೆಗಳ ಪರಿಹಾರಕ್ಕಾಗಿಯೇ ಪಾಡಕಾಸ್ಟ್ ಆ್ಯಪ್ ವಿನ್ಯಾಸ ಮಾಡಲಾಗಿದೆ.

ಈ ಆ್ಯಪ್ ಮೂಲಕ ಮೊಬೈಲ್‌ನಲ್ಲಿ  ಸಂಗ್ರಹಿಸಿರುವ ಫೈಲ್‌ಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ  ಹುಡುಕಬಹುದು.ಮೊಬೈಲ್‌ನಲ್ಲಿ ಶೇಖರಿಸುವ ಫೈಲ್‌ಗಳನ್ನು  ವ್ಯವಸ್ಥಿತವಾಗಿ ಅಂದರೆ ವರ್ಣಮಾಲೆಗೆ (alphabetical) ಅನುಗುಣವಾಗಿ    ಜೋಡಿಸುತ್ತದೆ.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್ ಉಚಿತವಾಗಿ ಲಭ್ಯವಿದೆ. ಎರಡು ಕೋಟಿಗೂ ಹೆಚ್ಚು ಜನರು ಈ ಆ್ಯಪ್ ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT