ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ದಾಳಿ: ಬೆಳೆ ನಷ್ಟ

Last Updated 28 ಡಿಸೆಂಬರ್ 2016, 5:09 IST
ಅಕ್ಷರ ಗಾತ್ರ

ಹೆತ್ತೂರು: ಯಸಳೂರು ಹಾಗೂ ಹೆತ್ತೂರು ಹೋಬಳಿಯ ಸುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ 12 ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿವೆ.     
ಐಗೂರು ಗ್ರಾಮದ ಐ.ಎಸ್ ಕುಮಾರ ಹಾಗೂ ಐ.ವೈ.ಕಾಂತ ಎಂಬುವವರು ವಾರದ ಹಿಂದೆ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಸಾವಿರಕ್ಕೂ ಹೆಚ್ಚು ಹಸಿರು ಮೆಣಸಿನಕಾಯಿಗಿಡವನ್ನು ಮಂಗಳವಾರ ಮುಂಜಾನೆ ಸಂಪೂರ್ಣ ತುಳಿದು ಹಾಕಿ ಸಾವಿರಾರು ರೂಪಾಯಿ ನಷ್ಟವಾಗಿದೆ.

ಬಹುಪಾಲು ಭತ್ತದ ಕೊಯ್ಲು ಮುಗಿ ದಿರುವುದರಿಂದ ಭತ್ತದ ಗುಡ್ಡೆಗಳನ್ನು ಕಿತ್ತು ಹಾಕುತ್ತಿವೆ.  ಕಣದಲ್ಲಿ ಇದ್ದ  ಭತ್ತದ ತೆನೆಯನ್ನು ತಿನ್ನಲು ಹುಲ್ಲನ್ನು ಎಳೆದಾಡಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿವೆ ಎಂದು ಗ್ರಾಮದ ಚನ್ನಯ್ಯ ಹೇಳಿದ್ದಾರೆ.

ಹಾಡ್ಲಹಳ್ಳಿ, ಹೂಸಹಳ್ಳಿ, ನಡನ ಹಳ್ಳಿ, ಕಿರ್ಕಹಳ್ಳಿ, ಬೂಬ್ಬನಹಳಿ, ಬಾಚ್ಚಿ ಹಳ್ಳಿ  ಗ್ರಾಮದಲ್ಲಿ ಭತ್ತದ ಗದ್ದೆ, ಕಾಫಿ ತೋಟ, ಏಲಕ್ಕಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿವೆ. ಈ ವಿಷಯವನ್ನು ಅರಣ್ಯ ಇಲಾಖೆ ಯವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು  ಗ್ರಾಮಸ್ಥರು ಅರೋಪಿಸಿದ್ದಾರೆ.

ಕಾಡಾನೆಗಳು ಗ್ರಾಮದ ಅಕ್ಕ–ಪಕ್ಕ ದಲ್ಲಿಯೇ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯವರು ಸಂಜೆ ವೇಳೆ ಪಟಾಕಿ ಸಿಡಿಸಿ ಓಡಿಸುತ್ತಾರೆ. ಪಟಾಕಿ ಶಬ್ದಕ್ಕೆ ಒಂದೆರಡು ಕಿ.ಮೀ. ದೂರ ಹೋಗುವ ಆನೆಗಳು. ಅಲ್ಲಿ ಬೇರೆಯವರ ಕಾಫಿ, ಏಲಕ್ಕಿ, ತೋಟ, ಗದ್ದೆಗಳಲ್ಲಿ ರಾತ್ರಿಯೆಲ್ಲ ದಾಂಧಲೆ ನಡೆಸುತ್ತವೆ.
45 ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ ಎಂದು ಜಿ.ಪಂ. ಸದಸ್ಯೆ ಉಜ್ಮರಿಜ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT