ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರಶೈವ ಸಮಾಜಕ್ಕೆ ಅಪಾರ ಕೊಡುಗೆ’

ಬಿದರಿ ಕಲ್ಮಠದ ಕುಮಾರ ಶಿವಯೋಗಿಗಳ 106ನೇ ಪುಣ್ಯಸ್ಮರಣೋತ್ಸವ: ಪುರಾಣ ಪ್ರವಚನ ಕಾರ್ಯಕ್ರಮ ಆರಂಭ
Last Updated 28 ಡಿಸೆಂಬರ್ 2016, 5:30 IST
ಅಕ್ಷರ ಗಾತ್ರ

ಸವದತ್ತಿ: ಬಿದರಿ ಕುಮಾರ ಸ್ವಾಮಿಗಳು, ಕುಮಾರ ಸ್ವಾಮಿಗಳನ್ನು ಹಾನಗಲ್ಲ ಮಠಕ್ಕೆ ಪಟ್ಟಕಟ್ಟಿಸಿದ ಗುರುಗಳಾಗಿದ್ದರು. ಆದರೂ ಸಹೋದರರಂತೆ ಬಾಳಿದ ವರು. ಇಡೀ ವೀರಶೈವ ಸಮಾಜವನ್ನು ಒದುಗೂಡಿಸುವಲ್ಲಿ ಹಗಲು ರಾತ್ರಿ ಎನ್ನದೆ ಶ್ರಮಿಸುವ ಮೂಲಕ ಅಮೂಘವಾದ ಕೊಡುಗೆ ನೀಡಿದ ಮಹನೀರಾಗಿದ್ದಾರೆ ಎಂದು ಪ್ರೊ. ಡಾ.ವೈ.ಎಂ ಯಾಕೊಳ್ಳಿ ಹೇಳಿದರು.

ಇಲ್ಲಿನ ಕಲ್ಮಠದಲ್ಲಿ ಲಿಂ.ಬಿದರಿ ಕುಮಾರಶಿವಯೋಗಿಗಳ 106ನೆಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಪುರಾಣ ಪ್ರವಚನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟ್ಟಾಧಿಕಾರವನ್ನು ವಹಿಸಿ ಕೊಂಡ ಕುಮಾರ ಶಿವಯೋಗಿಗಳು ಮಠಕ್ಕೆ ಸೀಮಿತವಾಗಿದೆ. ವೀರಶೈವ ಸಮಾಜ ಹಾಗೂ ಎಲ್ಲ ವರ್ಗದ ಜನರ ಹಿತಕ್ಕಾಗಿ ಶ್ರಮಿಸುವ ಮೂಲಕ ಪೂಜ್ಯರೆನಿಸಿಕೊಂಡರು ಎಂದರು.

ಸಮಾಜ ಸುಧಾರಣೆಯ ಗುರಿ ಹಿಂದಿದ ಉಭಯ ಶ್ರೀಗಳು ಸಮಾಜ ಜನರ ಏಳಿಗೆಯನ್ನು ಬಯಸಿದ ಶ್ರೀಗಳು ಶಿವಯೋಗ ಮಂದಿರ ಸ್ಥಾಪಿಸುವ ಮೂಲಕ ನೂರಾರು ಮಠಾಧೀಶರನ್ನು ತಯಾರಿಸುವ ವಿದ್ಯಾಕೇಂದ್ರವನ್ನು ತೆರೆದು. ಸಮಾಜ ಮುಖಿ ಕಾರ್ಯ ಮಾಡಿದ್ದು, ಇಡೀ ಮಾನವ ಕುಲ ಮರೆಯುವಂತಿಲ್ಲ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮುನವಳ್ಳಿಯ ಮುರುಘೇಂದ್ರ  ಸ್ವಾಮೀಜಿ ಮಾತನಾಡಿ, ಸವದತ್ತಿ ಕಲ್ಮಠಕ್ಕೂ ಹಾನಗಲ್ ಕುಮಾರ ಸ್ವಾಮಿಗಳಿಗೆ ಆತ್ಮೀಯವಾದ ಸಂಬಂಧ ವಿತ್ತು. ಹಾನಗಲ್ ಕುಮಾರಸ್ವಾಮಿಗಳು ನಮ್ಮೆಲ್ಲರಿಗೆ ಗುರುವಾದರೆ, ಬಿದರಿ ಕುಮಾರಸ್ವಾಮಿಗಳು ಹಾನಗಲ್ಲ ಶ್ರೀಗಳಿಗೆ ಗುರುವಾಗಿದ್ದರು ಎಂದರು.

ಗೊರವನಕೊಳ್ಳದ ಶಿವಾನಂದ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಕುಮಾರ ಸ್ವಾಮಿಗಳು ಶಿವಯೋಗ ಮಂದಿರ ಸ್ಥಾಪಿಸಿದ್ದರಿಂದ ನಮ್ಮಂತ ನೂರಾರು ಸ್ವಾಮೀಜಿಗಳ ತವರು ಮನೆ ಯಾದರೆ. ನಮ್ಮನ್ನು ಸಮಾಜಕ್ಕೆ ಕೊಡುಗೆ ಯಾಗಿ ನೀಡುವ ಮೂಲಕ ಅವರು ಮಹಾಗುರುಗಳಾಗಿದ್ದಾರೆ ಎಂದು ಹೇಳಿದರು.

ಕಲ್ಮಠದ ಪೀಠಾಧಿಕಾರಿ ಶಿವಲಿಂಗ ಸ್ವಾಮೀಜಿ ಮಾತನಾಡಿ, ಕಳೆದ ವರ್ಷ ಹಾನಗಲ್ಲ ಕುಮಾರ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಮಾಡಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ದುರ್ಗುಣ ಗಳನ್ನು ದೂರ ಮಾಡಿ ಸದ್ಗುಣ ಅಳವಡಿಸಿಕೊಳ್ಳುವ ಕಾರ್ಯಕ್ರಮ ಮಾಡಲಾಗಿತ್ತು.

ಈ ಬಾರಿ ಹಾನಗಲ್‌ ಕುಮಾರಪ್ಪನವರ ಪುಣ್ಯಸ್ಮರಣೋತ್ಸವ ವರ್ಷದ  365 ದಿನಗಳ ಕಾಲ ಎಲ್ಲ ಮಠಗಳಲ್ಲಿ ಆಚರಿಸುವಂತೆ ಮಠಾ ಧೀಶರು ನಿರ್ಧರಿಸಿದ್ದಾರೆ ಎಂದರು. ಅಡಿವೆಪ್ಪ ಸಿಂಗಾಡಿ ಅವರನ್ನು ಸನ್ಮಾನಿಸಲಾಯಿತು. ಸ್ವಾದಿಮಠದ ಶಿವಬಸವಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT