ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ಹೆಸರಿನ ಆಹಾರೋತ್ಸವ

ರಸಾಸ್ವಾದ
Last Updated 30 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಅದು ಸಂಜೆ ಆರು ಮೂವತ್ತರ ಸಮಯ. ರಾಜಾಜಿನಗರದ, ನಾಲ್ಕನೇ ಎಂ ಬ್ಲಾಕ್‌ನ ಬಾರ್ಬೆಕ್ಯೂ ನೇಷನ್‌ ಮುಂದೆ ನಿಂತವರನ್ನು ಸ್ವಾಗತಿಸಿದ್ದು ಬಣ್ಣದ ಮಿನುಗುವ ದೀಪಗಳು ಹಾಗೂ ಕ್ರಿಸ್‌ಮಸ್‌ ಟ್ರೀ. ಒಳಗೆ ಅಡಿಯಿಟ್ಟಾಗ ಎದ್ದು ಕಂಡಿದ್ದು ಬಣ್ಣದ ಮಿನುಗುವ ದೀಪಗಳು ಹಾಗೂ ಸುಮಧುರ ಹಿಂದಿ ಹಾಡುಗಳು.
 
ಈ ಬಾರಿ ಬಾರ್ಬೆಕ್ಯೂ ನೇಷನ್‌ ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ‘ಬಾಲಿವುಡ್‌ ಬ್ಲಾಕ್‌ಬಸ್ಟರ್‌’ ಎಂಬ ಹೆಸರಿನಲ್ಲಿ ಆಹಾರೋತ್ಸವವನ್ನು ಆಯೋಜಿಸಿದೆ. ಪ್ರತಿ ಖಾದ್ಯಗಳಿಗೂ ಬಾಲಿವುಡ್‌ ಚಲನಚಿತ್ರ ಹಾಗೂ ಹಾಡಿನ ಸಾಲುಗಳ ಹೆಸರು ಇರಿಸಿರುವುದು ಈ ಆಹಾರೋತ್ಸವದ ವಿಶೇಷ.
 
ಗ್ರಿಲ್ ತಿನಿಸುಗಳಿಗೆ ಹೆಸರುವಾಸಿಯಾದ ಬಾರ್ಬೆಕ್ಯೂ ನೇಷನ್‌ನಲ್ಲಿ ಮಾಂಸಾಹಾರವಷ್ಟೇ ಅಲ್ಲ ಸಸ್ಯಾಹಾರವೂ ಆಹಾರ ಪ್ರಿಯರ ಜಿಹ್ವೆ ತಣಿಸಲು ಸಿದ್ಧವಾಗಿದ್ದವು.
 
ಬಾರ್ಬೆಕ್ಯೂ ಬ್ಲಾಕ್‌ಬಸ್ಟರ್‌
ಉದಯಗಿರಿ ಪನ್ನೀರ್‌ ಟಿಕ್ಕಾ, ಟೆಕ್ಸಾಸ್‌ ಬಾರ್ಬೆಕ್ಯೂ ಗ್ರಿಲ್‌ ವೆಜ್‌, ಬಾರ್ಬೆಕ್ಯೂ ಪೆಸ್ಟೋ ಮಶ್ರೂಮ್‌, ವೆಜ್‌ ಶಿಕಾಂಪುರಿ ಕಬಾಬ್‌, ಕಾಜುನ್‌ ಸ್ಪೈಡ್‌ ಪೋಟಾಟೋ ತಮ್ಮದೇ ಆದ ವಿಶೇಷ ರುಚಿಯಲ್ಲಿ ಸಸ್ಯಾಹಾರಿಗಳ ನಾಲಿಗೆ ಚಪಲವನ್ನು ತಣಿಸುತ್ತವೆ.
 
ಇನ್ನು ಮಾಂಸಾಹಾರಿಗಳಿಗಂತೂ ಬಾರ್ಬೆಕ್ಯೂ ನೇಷನ್‌ ಹೇಳಿ ಮಾಡಿಸಿದ ಜಾಗ. ಯಾ– ಮನ್‌ ಕೇರಬಿಯನ್‌ ಚಿಕನ್‌, ಪ್ರಾನ್‌ ಪ್ರೈ, ಗ್ರಿಲ್ಡ್‌   ಫಿಶ್‌ ವಿತ್‌ ಪೆಪ್ಪರ್‌ ಸಾಸ್‌, ಮುರ್ಗ್‌ ಥಂಡಿ  ಹದವಾಗಿ ಖಾರ ಬೆರೆಸಿ ಫ್ರೈ ಮಾಡಿ ಬಿಸಿಬಿಸಿಯಾಗಿ ನೀಡುವ  ಆಹಾರಗಳು ಬಾಯಲ್ಲಿ ನೀರೂರಿಸುವಲ್ಲಿ ಎರಡು ಮಾತಿಲ್ಲ.
 
ಪ್ರತಿ ಆಹಾರೋತ್ಸವದಂತೆ ಈ ಆಹಾರೋತ್ಸವದಲ್ಲೂ ಕೂಡ ಬಾಯಿಗೆ ಮುದ ನೀಡಿದ್ದು ಸಿಗಡಿ ಫ್ರೈ ಹಾಗೂ ಮಶ್ರೂಮ್  ಫ್ರೈ. ಹದವಾಗಿ ಮಸಾಲೆ ಬೆರೆಸಿದ ಬಿಸಿಬಿಸಿ ಸಿಗಡಿ ಫ್ರೈ ಮತ್ತೆ ಮತ್ತೆ ತಿನ್ನಬೇಕು ಎನ್ನುವಷ್ಟು ಇಷ್ಟವಾಗುತ್ತದೆ. 
 
ಇನ್ನೂ ಬಫೆಯಲ್ಲಿ ಲಂಗ್‌ ಫಂಗ್‌ ಚಿಕನ್‌ ಸೂಪ್‌, ಖಾರ, ಉಪ್ಪು, ಹುಳಿ ಹದವಾಗಿ ಬೆರೆಸಿದ ವೆಜ್ ಗಾರ್ಡನ್‌ ಸೂಪ್‌ ಇಷ್ಟವಾಗುತ್ತವೆ.
 
ಮಾಂಸಾಹಾರದ ಮುಖ್ಯ ಕೋರ್ಸ್‌ನಲ್ಲಿ  ದಮ್‌ ಮಾರೋ ದಮ್‌  ಬಿರಿಯಾನಿ, ಬಾಹುಬಲಿ ಮುರ್ಗ್‌, ಪುಲಿ ಮುರುಗನ್‌ ಸೂಪ್‌, ದಮ್‌ ಕಿ ಘೋಷ್‌, ವೆಸ್ಟ್‌ ಕೋಸ್ಟ್ ಫಿಶ್ ಕರಿ, ಮಾಣಿಕ್ಯ ಮೀನು, ಫ್ರೈಡ್‌ ಚಿಕನ್‌ ವಿಂಗ್‌ ವಿತ್‌ ಚಿಲ್ಲಿ ಗಾರ್ಲಿಕ್‌ ಸಾಸ್‌ ಇಷ್ಟವಾಗಲಿವೆ. ಮಂಗಳೂರು ಶೈಲಿಯ ಚಿಕನ್‌ ಸಾರಿನಂತೆ ಕಂಡರೂ ರುಚಿ ತೀರಾ ಭಿನ್ನವಾಗಿತ್ತು. 
 
ಸಸ್ಯಾಹಾರದ ಮುಖ್ಯ ಕೋರ್ಸ್‌ ಎಂದರೆ ವೆಜ್ ಬಿರಿಯಾನಿ, ಬಾರ್ಬೆಕ್ಯೂ ಸ್ಪೆಷಲ್ ದಾಲ್‌, ಆಲೂ ಬುಕಾರಾ ಕೋಫ್ತಾ, ಪನ್ನೀರ್ ಅಂಗಾರ, ಗೌಚಿ ಮಟರ್‌ ಹರಾ ಫಯಾಜ್‌ ಮೆಲೋನಿನ್‌, ಆಲೂ ಗೋಬಿ ಆಚಾರಿ, ವೆಜ್‌ ನೂಡಲ್‌, ನೀಲ್‌ಗಿರಿ ಕುರ್ಮಾ . 
 
ಹದವಾಗಿ ತುಪ್ಪ ಬೆರೆಸಿ ಬಾಸುಮತಿ ಅಕ್ಕಿಯಿಂದ ತಯಾರಿಸಿದ ವೆಜ್‌ ಬಿರಿಯಾನಿ ಚಿಕನ್‌ ಬಿರಿಯಾನಿಗೆ ಸರಿಸಾಟಿಯಂತಿತ್ತು. ಕೇಸರ್ ಪಿಸ್ತಾ ಫೀರ್ನಿ, ಅಂಗೂರಿ ಗುಲಾಬ್‌ ಜಾಮೂನ್‌, ಕ್ಯಾರೆಟ್‌ ಹಲ್ವಾ, ಡಬಲ್‌ ಚಾಕೊಲೇಟ್ ಸೆಲೆಬ್ರೇಷನ್‌ ಪೇಸ್ಟ್ರೀ, ಪ್ರೋಪೆಟ್ ರೋಲ್ಸ್‌, ಡಿಪ್ಲೋಮೇಟ್ ಫುಡ್ಡಿಂಗ್‌, ರಾಸ್‌ಬೆರಿ ಫ್ರೂಟ್‌ ಫ್ರೈ, ಹಣ್ಣಿನ ಚೂರುಗಳು ಹಾಗೂ ಐಸ್‌ಕ್ರೀಮ್‌ಗಳು ಡೆಸರ್ಟ್‌ನಲ್ಲಿ ಮುಖ್ಯವಾಗಿದ್ದವು.
 
**
ಬಾರ್ಬೆಕ್ಯೂ ಬ್ಲಾಕ್‌ಬಸ್ಟರ್ ವಿಶೇಷ
ಹೊಸ ವರ್ಷದ ಸೊಬಗು ಹೆಚ್ಚಿಸುವ ಸಲುವಾಗಿ ಬಾರ್ಬೆಕ್ಯೂ ನೇಷನ್‌ ಬಾಲಿವುಡ್‌ ಬ್ಲಾಕ್‌ಬಸ್ಟರ್ ಆಯೋಚಿಸಿದೆ. ಬಾಲಿವುಡ್‌ನ ಚಿತ್ರ ಹಾಗೂ ಹಾಡಿನ ಹೆಸರುಗಳನ್ನು ಆಹಾರೋತ್ಸವದಲ್ಲಿ ಸಿಗುವ ಅಡುಗೆಗಳಿಗೆ ಇರಿಸಿರುವುದು ಬ್ಲಾಕ್‌ಬಸ್ಟರ್‌ನ ವಿಶೇಷ.
 
*
ರೆಸ್ಟೊರೆಂಟ್‌: ಬಾರ್ಬೆಕ್ಯೂ ನೇಷನ್‌
ವಿಶೇಷತೆ: ‘ಬಾಲಿವುಡ್‌ ಬ್ಲಾಕ್‌ಬಸ್ಟರ್‌’ ಖಾದ್ಯಗಳು
ಸಮಯ: ಡಿನ್ನರ್‌– 6.30 ರಿಂದ 9.30
9.30 ರಿಂದ 11.30
 
**
ದರ: ಲಂಚ್‌ ಒಬ್ಬರಿಗೆ: ₹902
ಡಿನ್ನರ್ ಒಬ್ಬರಿಗೆ : ₹1197
ಮಕ್ಕಳಿಗೆ : ₹440
 
**
ಕೊನೆಯ ದಿನ: ಜನವರಿ 1
ಸ್ಥಳ: ವೆಸ್ಟ್‌ ಗೇಟ್‌ ಮಾಲ್‌, ಡಾ.ರಾಜ್‌ ಕುಮಾರ್ ರಸ್ತೆ, 4ನೇ ಬಡಾವಣೆ, ರಾಜಾಜಿನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT