ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೂ ಅದಾಲತ್‌

Last Updated 31 ಡಿಸೆಂಬರ್ 2016, 4:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಂದಾಯ ಅದಾಲತ್‌, ಪಿಂಚಣಿ ಅದಾಲತ್‌, ಲೋಕ ಅದಾಲತ್‌, ಆಹಾರ ಅದಾಲತ್‌, ಜನತಾ ಅದಾಲತ್‌ ಮಾದರಿಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಅದಾಲತ್‌ ಇದೇ ಮೊದಲ ಬಾರಿಗೆ ನಡೆಸಲು ಕರ್ನಾಟಕ ಜಲಮಂಡಳಿ ಮುಂದಾಗಿದೆ.

ನೀರು ಸರಬರಾಜಿಗೆ ಸಂಬಂಧಿಸಿ­ದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ಉದ್ದೇಶದಿಂದ ನೀರಿನ ಅದಾಲತ್‌ ನಡೆಸಲು ಜಲಮಂಡಳಿ ಸಿದ್ಧತೆ ನಡೆಸಿದೆ.

‘ಅವಳಿ ನಗರದ ನೀರಿನ ಬಳಕೆದಾರರ ಕುಂದು–ಕೊರತೆಗಳನ್ನು ಆಲಿಸಿ, ಪರಿಹಾರ ಕಂಡಕೊಳ್ಳುವ ಉದ್ದೇಶದಿಂದ ಜನವರಿ 16 ರಿಂದ 26ರ ವರೆಗೆ ನೀರಿನ ಅದಾಲತ್‌ ನಡೆಸಲಾಗು­ವುದು’ ಎಂದು ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಅಶೋಕ ಮಾಡ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಬ್ಬಳ್ಳಿಯ 6 ಮತ್ತು ಧಾರವಾಡದ 3 ಹಾಗೂ ನವನಗರದ 1 ಸ್ಥಳ ಸೇರಿದಂತೆ ಒಟ್ಟು 10 ಸ್ಥಳಗಳಲ್ಲಿ ನೀರಿನ ಅದಾಲತ್‌ ನಡೆಸಲು ನಿರ್ಧರಿಸಲಾಗಿದೆ’ ಎಂದರು.
‘ಅವಳಿ ನಗರದ ನೀರಿನ ಬಳಕೆದಾರರು ನೀರು ಪೂರೈಕೆಗೆ ಸಂಬಂಧಿಸಿದಂತೆ ಅನುಭವಿಸುತ್ತಿರುವ ತೊಂದರೆಗಳನ್ನು ಅಂದರೆ, ನೀರಿನ ಪೂರೈಕೆ, ಬಿಲ್‌ ವಿತರಣೆ, ನೀರಿನ ಕರ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನೀರಿನ ಅದಾಲತ್ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಅವರು ಹೇಳಿದರು. ‘ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಪ್ರಕರಣಗಳ ಕುರಿತು ಸಮಗ್ರ ದಾಖಲೆ, ಮಾಹಿತಿಗಳನ್ನು ಪಡೆ­ದುಕೊಂಡು ಸರ್ಕಾರದ ಮಟ್ಟದಲ್ಲಿ ಪರಿಹಾರ ಒದಗಿಸಲಾಗುವುದು’ ಎಂದರು.

ಬಾಕಿ ಇರುವ ನೀರಿನ ಕರವನ್ನು ತುಂಬಿಸಿಕೊಳ್ಳಲು ನೀರಿನ ಅದಾಲತ್‌­ನಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶೇ 50ರಷ್ಟು ನೀರಿನ ಸಮಸ್ಯೆಗಳಿಗೆ ಅದಾಲತ್‌ನಲ್ಲಿ ಪರಿಹಾರ ಸಿಗುವಸಾಧ್ಯತೆ ಎಂದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.  ಯಾವ ವಾರ್ಡ್‌ಗಳಲ್ಲಿ ಯಾವ ದಿನದಂದು ಯಾವ ಸಮಯಕ್ಕೆ ಅದಾಲತ್‌ ಏರ್ಪಡಿಸಬೇಕು ಎಂಬುದರ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ಅದಾಲತ್‌ನಲ್ಲಿ ಪಾಲಿಕೆ ಆಯುಕ್ತರು, ಕಂದಾಯ ಅಧಿಕಾರಿಗಳು, ವಾರ್ಡ್‌ನ ಕಾರ್ಪೊರೇಟರ್‌ ಹಾಗೂ ಜಲಮಂಡಳಿಯ ಅಧಿಕಾರಿಗಳು ಪಾಲ್ಗೊಂಡು ನೀರಿನ ಬಾಕಿ ಇರುವ ಸಾರ್ವಜನಿಕರ ಪ್ರಕರಣಗಳನ್ನು ಒಮ್ಮತದಿಂದ ಇತ್ಯರ್ಥಪಡಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT