ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನ ಮನುಕುಲದ ಏಳ್ಗೆ ಸಂಕೇತ’

Last Updated 31 ಡಿಸೆಂಬರ್ 2016, 4:31 IST
ಅಕ್ಷರ ಗಾತ್ರ

ಶಿಗ್ಗಾವಿ: ವಿಜ್ಞಾನ ಮನುಕುಲದ ಏಳ್ಗೆ ಸಂಕೇತವಾಗಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರಯೋಗಗಳ ಮೂಲಕ ಅವರಲ್ಲಿನ ಜ್ಞಾನವನ್ನು ಹೆಚ್ಚಿಸುವುದರಲ್ಲಿ  ಶಿಕ್ಷಕರ, ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಕೀರ್ತಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಗ್ರಂಥಾಲಯ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಕ್ಕಳ ಮಾದರಿ ವಿಜ್ಞಾನ ಪ್ರಯೋಗಗಳನ್ನು ವೀಕ್ಷಿಸಿದ ನಂತರ ಅವರು ಮಾತನಾಡಿ, ಪ್ರಯೋಗಗಳು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸುವ ಜೊತೆಗೆ ಕಲಿಕಾ ಆಸಕ್ತಿ ಹೆಚ್ಚಿಸಲು ಸಾಧ್ಯವಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕೀರ್ತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಜಗದೀಶ ಕುರಂದವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ಎ.ಕೆ.ಆದವಾನಿಮಠ ಮಾತನಾಡಿದರು.
ಶಿಕ್ಷಣ ಸಂಯೋಜಕ ಸಿ.ಎನ್‌.ಕಲಕೋಟಿ, ಎಸ್‌ಎಕ್ಯೊ ಕಾಲೇಜಿನ ಪ್ರಾಚಾರ್ಯ ಬಿ.ಡಿ.ನದಾಫ, ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎನ್‌.ಮಲ್ಲಾಡದ, ಸವಣೂರ ರಾಚೋಟೇಶ್ವರ ಪ್ರಾಢ ಶಾಲೆ ಮುಖ್ಯ ಶಿಕ್ಷಕ ಕೆ.ಎಸ್‌.ಗಾಣಿಗೇರ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಶಾಬಿರಾಭಿ ಯಲಗಚ್ಚ ಉದ್ಘಾಟಿಸಿದರು.ಪುರಸಭೆ ಸದಸ್ಯರಾದ ಶಾಂತವೀರಯ್ಯ ಗಚ್ಚಿನ ಮಠ, ಸುನೀತಾ ಬೆಟಗೇರಿ, ಉಮೇಶ ಮಾಳಗಿಮನಿ, ಕೀರ್ತಿ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ದತ್ತಣ್ಣ ಉಣಕಲ್‌, ಕಾರ್ಯದರ್ಶಿ ವೈ.ಜಿ.ಉಣಕಲ್‌, ಮಾಲ ತೇಶ ಸಣ್ಣಕ್ಕಿ, ಮುಖ್ಯ ಶಿಕ್ಷಕರಾದ ಎಂ.ಬಿ.ಉಂಕಿ,ಸರಸ್ವತಿ ನರಗುಂದ, ಆರ್‌.ಎಚ್‌.ಭಜಂತ್ರಿ, ಬಿಎಸ್‌. ದುಂಡಪ್ಪ ನವರ  ಸೇರಿದಂತೆ ಮತ್ತಿತರರು ಈ ವೇಳೆ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT