ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಸೋಮಾರಿ ಕರಡಿ
ಭೂಮಿ ಮೇಲಿನ ಪ್ರಾಣಿಗಳಲ್ಲಿಯೇ ಅತಿ ಹೆಚ್ಚಿನ ಆಲಸೀ ಪ್ರಾಣಿ ಎನಿಸಿರುವ ಸ್ಲಾತ್ ಕರಿಯು ಒಂದು ಎಲೆಯನ್ನು ತಿಂದರೆ, ಅದು ಜೀರ್ಣವಾಗಲು 25 ದಿನಗಳು ಬೇಕು. 
 
**
ಎರಡು ಮರ ಒಂದಾಗಿ
ಇಟಲಿಯ ಪೀಡ್‌ಮಾಂಟ್‌ನಲ್ಲಿ ಒಂದು ಅಪರೂಪದ ಮರವಿದೆ. ಅದಕ್ಕೆ ‘ಡಬಲ್ ಟ್ರೀ ಆಫ್ ಕೊಸಾರ್ಜೊ’ ಎಂದು ಹೆಸರು. ಒಂದೇ ಜಾಗದಲ್ಲಿ ಎರಡು ಮರಗಳು ಬೆಳೆಯುತ್ತವೆ. ಚೆರ್ರಿ ಮರದ ಬೆಂಬಲಕ್ಕೆ ಬೆಳೆಯುವ ಉಪ್ಪುನೇರಳೆ ಮರವಿದು.
 
**
ಚಿಗುರುವ ಪೆನ್ಸಿಲ್
ಕಿರಿದಾಗುತ್ತಿದ್ದಂತೆ ತರಕಾರಿಯನ್ನಾಗಿ ಬೆಳೆಸಬಹುದಾದ ಪೆನ್ಸಿಲ್ ಒಂದಿದೆ. ಇದಕ್ಕೆ ಚಿಗುರುವ ಪೆನ್ಸಿಲ್ ಎಂದೇ ಹೆಸರು. ಅದರ ಬುಡಭಾಗದಲ್ಲಿ ಬೀಜವೊಂದು ಇರುತ್ತದೆ. ಬರೆದೂ ಬರೆದೂ ಈ ಪೆನ್ಸಿಲ್ ಚಿಕ್ಕದಾದ ಮೇಲೆ ಕುಂಡದಲ್ಲಿ ಹೂತರೆ ಆಯಿತು; ನೀರು ಹೀರಿ ಬೆಳೆಯುತ್ತದೆ. ಅದು ಮೂಲಿಕೆ, ತರಕಾರಿಯಂತೆ ಬೆಳೆಯುವುದು ಸೋಜಿಗದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT