ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಪಂಚದಲ್ಲಿ...

ವಿಜ್ಞಾನ ವಿಶೇಷ
Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
1. ಜಗತ್ಪ್ರಸಿದ್ಧ ಜನಪ್ರಿಯ ಕುಸುಮವೊಂದು ಚಿತ್ರ–1ರಲ್ಲಿದೆ. ಈ ಹೂವು ಯಾವುದು? ಈ ಹೂವು ಇಲ್ಲಿ ಹೆಸರಿಸಿರುವ ಯಾವ ದೇಶದ ರಾಷ್ಟ್ರೀಯ ಕುಸುಮ?
ಅ. ಯು.ಎಸ್‌.ಎ.  
ಬ. ಹಾಲೆಂಡ್‌  
ಕ. ಇಂಗ್ಲೆಂಡ್‌  
ಡ. ಆಸ್ಟ್ರೇಲಿಯಾ
 
*
2. ಪದರ ಶಿಲೆಗಳ ಗುಂಪಿಗೇ ಸೇರಿದ ‘ಮರಳು ಶಿಲೆ’ ಚಿತ್ರ–3ರಲ್ಲಿದೆ. ಕೆಳಗೆ ಪಟ್ಟಿ ಮಾಡಿರುವ ಕೆಲ ಪ್ರಸಿದ್ಧ ಶಿಲೆಗಳಲ್ಲಿ ಪದರ ಶಿಲೆಗಳನ್ನು ಗುರುತಿಸಬಲ್ಲಿರಾ?
ಅ.  ಅಮೃತ ಶಿಲೆ    
ಬ. ಸುಣ್ಣ ಶಿಲೆ    
ಕ. ಜೇಡಿ ಶಿಲೆ    
ಡ. ಗ್ರಾನೈಟ್‌ ಶಿಲೆ
ಇ. ಡಾಲೋಮೈಟ್‌
ಈ. ಬಸಾಲ್‌್ಟ
 
*
3. ಬಹು ಪರಿಚಿತವಾದ ಎರಡು ಖನಿಜಗಳು ‘ರೂಟೈಲ್‌’ ಮತ್ತು ‘ಆಟುನೈಟ್‌’ ಕ್ರಮವಾಗಿ ಚಿತ್ರ–2 ಮತ್ತು ಚಿತ್ರ–13ರಲ್ಲಿವೆ. ಈ ಖನಿಜಗಳು ಯಾವ ಯಾವ ಲೋಹಗಳ ಅದಿರುಗಳೂ ಆಗಿವೆ– ಈ ಪಟ್ಟಿಯಲ್ಲಿ ಪತ್ತೆಮಾಡಿ:
ಅ. ತವರ ಬ. ಪಾದರಸ        
ಕ. ಯುರೇನಿಯಂ
ಡ. ಕ್ರೋಮಿಯಂ
ಇ. ಸೋಡಿಯಂ    
ಈ. ಟೈಟಾನಿಯಂ
ಉ. ಅಲ್ಯೂಮಿನಿಯಂ
 
*
4. ಚಿತ್ರ–4ರಲ್ಲಿರುವ ವನ್ಯಪ್ರಾಣಿಯನ್ನು ಗಮನಿಸಿ. ಈ ಪ್ರಾಣಿ ಯಾವುದು?
ಅ. ಕಾಡು ನಾಯಿ    
ಬ. ತೋಳ    
ಕ. ನರಿ    
ಡ. ಕಿರುಬ
 
*
5. ಕಡಲಲ್ಲೇ ವಾಸಿಸುವ, ಆದರೆ ಸಂತಾನವರ್ಧನೆಗೆ ನೆಲಕ್ಕೆ ಬರುವ ಪ್ರಾಣಿಗಳಲ್ಲೊಂದಾದ ‘ಸೀಲ್‌’ ಚಿತ್ರ–5ರಲ್ಲಿದೆ. ಇಂತಹದೇ ಜೀವನ ಕ್ರಮದ ಇನ್ನೆರಡು ಪ್ರಾಣಿಗಳನ್ನು ಈ ಪಟ್ಟಿಯಲ್ಲಿ ಪತ್ತೆಹಚ್ಚಬಲ್ಲಿರಾ?
. ಡಾಲ್ಫಿನ್‌        
ಬ. ವಾಲ್ಸಸ್‌    
ಕ. ಶಾರ್ಕ್‌
ಡ. ನಾರ್ವಾಲ್‌      
ಇ. ಪೆಂಗ್ವಿನ್‌      
ಈ. ಈಲ್‌
 
*
6. ಚಿತ್ರ–6ರಲ್ಲಿರುವ ಸುಪ್ರಸಿದ್ಧ ಪ್ರಾಣಿಯನ್ನು ನೋಡಿ:
ಅ. ಈ ಪ್ರಾಣಿಯ ಹೆಸರೇನು?
ಬ. ಇದರ ವಾಸ್ತವ್ಯ ಯಾವ ಭೂಖಂಡಕ್ಕೆ ಸೀಮಿತ?
ಕ. ಈ ಪ್ರಾಣಿಯ ಏಕೈಕ ಆಹಾರ ಸಸ್ಯ ಯಾವುದು?
 
*
7. ವಿಶ್ವ ಪ್ರಸಿದ್ಧ ಅಸದೃಶ ಮೇದಾವಿ– ವಿಜ್ಞಾನಿ ‘ಸರ್‌ ಐಸಾಕ್‌ ನ್ಯೂಟನ್‌’ರ ಒಂದು ಭಾವಚಿತ್ರ ಇಲ್ಲಿದೆ(ಚಿತ್ರ–7). ವಿಜ್ಞಾನ ಲೋಕದ ಕೆಲ ಯುಗ ಪ್ರವರ್ತಕ ಶೋಧ–ನಿರ್ಮಾಣ–ಆವಿಷ್ಕಾರಗಳ ಈ ಪಟ್ಟಿಯಲ್ಲಿ ನ್ಯೂಟನ್‌ನ ಸಾಧನೆಗಳು ಯಾವುವು?
ಅ.  ಬೆಳಕಿನ ರೋಹಿತ
ಬ. ರೇಡಿಯೋ ದೂರದರ್ಶಕ
ಕ. ಪ್ರತಿಫಲನ ದೂರದರ್ಶಕ
ಡ. ಕ್ಯಾಲ್ಕ್ಯುಲಸ್‌ನ ಆವಿಷ್ಕಾರ
ಇ. ಗ್ರಹ ಚಲನಾ ಸಿದ್ಧಾಂತ
ಈ. ಚಲನೆಯ ನಿಯಮಗಳು
ಉ. ಗುರುತ್ವಾಕರ್ಷಣ ಸಿದ್ಧಾಂತ
 
*
8. ವಿಶಿಷ್ಟ ವಾಸ್ತುನಿರ್ಮಿತಗಳಾದ ‘ಪಗೋಡಾ’ಗಳ ಒಂದು ದೃಶ್ಯ ಚಿತ್ರ–8ರಲ್ಲಿದೆ. ‘ಬುದ್ಧ ಸ್ತೂಪ’ಗಳಾದ ಪಗೋಡಾಗಳು ಗರಿಷ್ಠ ಸಂಖ್ಯೆಯಲ್ಲಿರುವ, ಹಾಗಾಗಿ ‘ಪಗೋಡಾಗಳ ನಾಡು’ ಎಂದೇ ಹೆಸರಾಗಿರುವ ರಾಷ್ಟ್ರ ಯಾವುದು?
ಅ. ಥಾಯ್ಲಾಂಡ್‌
. ಚೀನಾ
ಕ. ಜಪಾನ್ ಡ. ಬರ್ಮಾ
ಇ. ಶ್ರೀಲಂಕಾ
 
*
9. ಚಿತ್ರ–9ರಲ್ಲಿರುವ ಪುರಾತನ ಗೋಪುರ ಕಟ್ಟಡವನ್ನೂ, ಚಿತ್ರ–10ರಲ್ಲಿರುವ ಆಧುನಿಕ ಗೋಪುರ ನಿರ್ಮಿತಿಯನ್ನೂ ಗಮನಿಸಿ.
ಅ. ಈ ವಿಖ್ಯಾತ ಗೋಪುರ ನಿರ್ಮಾಣಗಳು ಯಾವುವು?
ಬ. ಈವು ಯಾವ ಯಾವ ದೇಶಗಳ ಯಾವ ಯಾವ ನಗರಗಳಲ್ಲಿವೆ?
 
*
10. ಜೀವಲೋಕದ ವಿಸ್ಮಯದ ಸೃಷ್ಟಿಯೊಂದು ಚಿತ್ರ–12ರಲ್ಲಿದೆ. ಏನೀ ಸೃಷ್ಟಿ?
ಅ. ಮಕರಂದ ಹೀರುತ್ತಿರುವ ದುಂಬಿ  
ಬ. ಸಸ್ಯರಸ ಹೀರುತ್ತಿರುವ ಪತಂಗ
ಕ. ಜೇನ್ನೊಣ ರೂಪದ ಹೂವು        
ಡ. ಬಹು ವರ್ಣಗಳ ಹಣ್ಣು
 
*
11. ಅತ್ಯಂತ ಪರಿಚಿತವಾದ ಹವಾ ವಿದ್ಯಮಾನವಾದ ಮಿಂಚಿನ ದೃಶ್ಯವೊಂದು ಚಿತ್ರ–11ರಲ್ಲಿದೆ. ಮಿಂಚುಗಳಲ್ಲಿ ಹಲವಾರು ವಿಧಗಳೂ ಇವೆ– ಹೌದಲ್ಲ? ಈ ಪಟ್ಟಿಯಲ್ಲಿ ಯಾವುದು ಮಿಂಚಿನ ವಿಧ ಅಲ್ಲ?
ಅ.  ಬಳ್ಳಿ ಮಿಂಚು      
ಬ. ಹಾಳೆ ಮಿಂಚು      
ಕ. ದೂಳು ಮಿಂಚು  
ಡ. ಕೊಳಕು ಮಿಂಚು    
ಇ. ಚೆಂಡು ಮಿಂಚು
 
*
12. ಸೌರೇತರ ನಕ್ಷತ್ರವೊಂದನ್ನು ಪರಿಭ್ರಮಿಸುತ್ತಿರುವ ‘ಅನ್ಯಗ್ರಹ’ವೊಂದರ ದೃಶ್ಯ ಚಿತ್ರ–14ರಲ್ಲಿದೆ. ಈವರೆಗೆ ಪತ್ತೆಯಾಗಿರುವ ಸಾವಿರಾರು ಅನ್ಯಗ್ರಹಗಳಲ್ಲಿ ನಮ್ಮ ಭೂಮಿಗೆ ಅತ್ಯಂತ ಹತ್ತಿರ ಇರುವ ಅನ್ಯಗ್ರಹ ಯಾವ ನಕ್ಷತ್ರವನ್ನು ಪರಿಭ್ರಮಿಸುತ್ತಿದೆ?
ಅ. ಪ್ರಾಕ್ಸಿಮಾ ಸೆಂಟಾರಿ
ಬ. ಗ್ಲಿಯೆಸ್‌–1
ಕ. ಬರ್ನಾರ್ಡ್‌ ತಾರೆ
ಡ. ಸಿರಿಯಸ್‌
 
*
13. ಹೊಂದಿಸಿ ಕೊಡಿ:
1. ಸೆಕ್ವೋಯಾ                    ಅ. ಹೂವು
2. ಲಿಲ್ಲೀ                            ಬ. ಮತ್ಸ್ಯ
3. ಪಿಚ್‌ ಬ್ಲೆಂಡ್‌                   ಕ. ಲೋಹ
4. ಟಂಗ್ ಸ್ಟನ್‌                   . ವೃಕ್ಷ
5. ಸಾರ್ಡೈನ್‌                    ಇ. ದ್ವೀಪ
6. ಫಿಜಿ                            . ಅದಿರು
 
***
ಉತ್ತರಗಳು
1. ಬ. ಹಾಲೆಂಡ್‌; ಹೂವು–ಟ್ಯೂಲಿಪ್‌.
2. ಬ. ಸುಣ್ಣ ಶಿಲೆ, ಕ. ಜೇಡಿ ಶಿಲೆ ಮತ್ತು ಇ. ಡಾಲೋಮೈಟ್‌.
3. ರೂಟೈಲ್‌–ಟೈಟಾನಿಯಂ; ಆಟುನೈಟ್‌–ಯುರೇನಿಯಂ.
4. ಕ. ನರಿ
5. ಬ. ವಾಲ್ರಸ್‌ ಮತ್ತು ಇ. ಪೆಂಗ್ವಿನ್‌
6. ಅ. ಕೂವಾಲೇ; ಬ. ಆಸ್ಟ್ರೇಲಿಯಾ; ಕ. ನೀಲಗಿರಿ.
7. ‘ಬ ಮತ್ತು ಇ’ ಬಿಟ್ಟು ಇನ್ನೆಲ್ಲ.
8. ಡ. ಬರ್ಮಾ (ಮಯನ್ಮಾರ್‌)
9. ಅ. ಚಿತ್ರ–9. ಓಲುಗೋಪುರ; ಇಟಲಿ ದೇಶದ ಪೀನಾ ನಗರದಲ್ಲಿದೆ. ಚಿತ್ರ–10. ಐಫೆಲ್‌ ಗೋಪುರ; ಫ್ರಾನ್‌್ಸ ದೇಶದ ಪ್ಯಾರಿಸ್‌ ನಗರದಲ್ಲಿದೆ.
10. ಕ. ಜೇನ್ನೊಣ ರೂಪದ ಹೂವು.
11. ಕ. ದೂಳು ಮಿಂಚು
12. ಅ. ಪ್ರಾಕ್ಸಿಮಾ ಸೆಂಟಾರಿ
13. 1–ಡ; 2–ಅ; 3–ಈ; 4–ಕ; 5–ಬ; 6–ಇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT