ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 1–1–1967

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಉತ್ತರ ವಿಯಟ್ನಾಂ ಮೇಲಿನ ಬಾಂಬ್‌ ದಾಳಿ ಯಾವ ಷರತ್ತೂ ಇಲ್ಲದೆ ನಿಲ್ಲಲಿ ಅಮೆರಿಕಕ್ಕೆ ಥಾಂಟ್‌ ಅವರ ಕರೆ
ವಿಶ್ವಸಂಸ್ಥೆ (ನ್ಯೂಯಾರ್ಕ್‌), ಡಿ. 31– 
ಉತ್ತರ ವಿಯಟ್ನಾಂ ಮೇಲಿನ ಬಾಂಬ್‌ದಾಳಿಯನ್ನು ಬೇಷರತ್ತಾಗಿ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟ್‌ ಅವರು ಇಂದು ಅಮೆರಿಕಕ್ಕೆ ಕರೆ ನೀಡಿದರು.

ವಿಶ್ವಸಂಸ್ಥೆಯಲ್ಲಿಯ ಅಮೆರಿಕದ ಮುಖ್ಯ ಪ್ರತಿನಿಧಿ ಆರ್ಥರ್‌ ಜೆ.  ಗೋಲ್ಡ್‌ಬರ್‍ಗ್‌ ಅವರಿಗೆ ಬರೆದ ಪತ್ರದಲ್ಲಿ ಉ ಥಾಂಟ್‌ ಅವರು ‘ಬಾಂಬ್‌ ದಾಳಿ ನಿಂತಿದ್ದಾದರೆ ಮತ್ತು ಎಲ್ಲ ಪಕ್ಷಗಳು ಹೊಸ ವರ್ಷದ ಕದನವಿರಾಮವನ್ನು ಮುಂದುವರಿಸಬಹುದಾದರೆ, ಆ ನಂತರ ಅನುಕೂಲದಾಯಕ ಬೆಳವಣಿಗೆ ಉಂಟಾಗಬಹುದೆಂಬುದು ನನ್ನ ಆಶಯವಾಗಿದೆ’ ಎಂದು ತಿಳಿಸಿದ್ದಾರೆ.

ಬೋನಸ್‌ ಘೋಷಣೆ ಪ್ರತಿಭಟಿಸಿ ಎಚ್‌.ಎ.ಎಲ್‌. ನೌಕರರ ಮುಷ್ಕರಬೆಂಗಳೂರು, ಡಿ. 31–  ನಿನ್ನೆ ಎಚ್‌.ಎ.ಎಲ್‌. ಆಡಳಿತ ವರ್ಗವು ಘೋಷಿಸಿದ ಬೋನಸ್‌ ಬೇಡಿಕೆಯನ್ನು ಪ್ರತಿಭಟಿಸಿ ಇಂದು ಕಾರ್ಖಾನೆಯ ವಿವಿಧ ಷಿಫ್‌್ಟಗಳ ಕೆಲಸಗಾರರು ಕೆಲಸ ಮಾಡದೆ ‘ಸಲಕರಣೆಗಳನ್ನು ಕೆಳಗಿಟ್ಟು’ ಮುಷ್ಕರ ಆಚರಿಸಿದರು. ಘೋಷಿತವಾದ ಬೋನಸ್‌ನಿಂದ ಕಡಿಮೆ ಸಂಬಳದ ಕೆಲಸಗಾರರಿಗೆ ಏನೂ ದೊರಕಿಲ್ಲವೆಂಬುದು ಕೆಲಸಗಾರರ ವಾದವಾಗಿದೆ.

ಕಾರ್‍ಮಿಕ ಸಂಘದ ಪ್ರತಿನಿಧಿಗಳು ವಿವಾದ ಟ್ರಿಬ್ಯುನಲ್‌ ಮುಂದಿರುವುದರಿಂದ ಮುಷ್ಕರ ಆಚರಿಸಬಾರದೆಂದು ಮನವಿ ಮಾಡಿದರೆಂದೂ ಆದರೆ ಅವರ ಮಾತು ಮುಷ್ಕರದ ಮೇಲೆ ಪ್ರಭಾವ ಬೀರಲಿಲ್ಲವೆಂದೂ ವರದಿಯಾಗಿದೆ.

***
ಎರಡನೇ ಬಾರಿಗೆ ಮತ್ತೆ ಭದ್ರತಾ
ಸಮಿತಿಯಲ್ಲಿ ಭಾರತ
ನವದೆಹಲಿ, ಡಿ. 31–
ವಿಶ್ವದಲ್ಲಿ ಶಾಂತಿ ರಕ್ಷಣೆಯ ಕಾರ್ಯವನ್ನು ನಿರ್ವಹಿಸುವ ವಿಶ್ವರಾಷ್ಟ್ರಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತವು ನಾಳೆ ತನ್ನ ಸ್ಥಾನವನ್ನು ಅಲಂಕರಿಸುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT