ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಯಿಂದ ಶಕ್ತಿ, ಶಕ್ತಿಯಿಂದ ಏಳಿಗೆ

ಆದಿಚುಂಚನಗಿರಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ
Last Updated 2 ಜನವರಿ 2017, 6:27 IST
ಅಕ್ಷರ ಗಾತ್ರ

ವಿಟ್ಲ: ದೈವ ಶಕ್ತಿಗೆ ಯಾವತ್ತೂ ನಾಶವಿಲ್ಲ. ಅದು ಒಂದಲ್ಲ ಒಂದು ರೂಪದಲ್ಲಿ ಶಾಶ್ವತವಾಗಿ ಜಗತ್ತಿನಲ್ಲಿ ಉಳಿಯುತ್ತದೆ. ಸಂಘಟನೆಯಲ್ಲಿ  ಎಲ್ಲರೂ ಐಕ್ಯವಾಗಿ ದ್ದಾಗ ಉನ್ನತ ಕಾರ್ಯಗಳು ನಡೆಯು ತ್ತದೆ. ವೈಯಕ್ತಿಕ ಪ್ರತಿಷ್ಠೆಗಳನ್ನು ಬಿಟ್ಟು ಕೆಲಸ ನಡೆಸಿದಾಗ ಸಂಸ್ಥೆ ಮತ್ತು ಸಮಾಜ ಉತ್ತಮವಾಗಿ ಬೆಳೆಯುತ್ತದೆ.

ಸತತ ಪರಿ ಶ್ರಮದಿಂದ ಮುನ್ನಡೆದಾಗ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು ಎಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಅವರು ಶನಿವಾರ ಶಾಂತಿನಗರ ಅಕ್ಷಯ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಬಂಟ್ವಾಳ ತಾಲ್ಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ನಡೆದ ಶ್ರೀ ಸತ್ಯ ನಾರಾಯಣ ಪೂಜೆ ಮತ್ತು ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.ಭವ ಬಂಧನವೆಂಬ ಗೊಂಡಾರಣ್ಯದಿಂದ ಬಿಡುಗಡೆ ಪಡೆಯಲು ಗುರು ಕಾರುಣ್ಯದ ಅವಶ್ಯಕತೆ ಇದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ  ಧರ್ಮ ಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ ಸಾಧು ಸಂತರ ಸತ್ಸಂಗ ದರ್ಶನ ಜೀವನದ ಶ್ರೇಷ್ಠ ಕ್ಷಣಗಲಾಗಿದೆ. ಧರ್ಮ ಪೀಠದ ಸಂದೇಶಗಳ ಅನುಕರಣೆಯಿಂದ ಶಿಷ್ಯರ ಉದ್ಧಾರವಾಗುತ್ತದೆ. ಗುರು ವಂದನೆಯಿಂದ ಧನ್ಯತಾಭಾವ ಪ್ರಾಪ್ತಿಯಾಗುತ್ತದೆ. ಪ್ರೀತಿ ಭಕ್ತಿ ಶ್ರದ್ಧೆ ವಿಶಾಲತೆ ಉನ್ನತ ಸಂಪತ್ತಾಗಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಶೃಂಗೇರಿ ಶಾಖಾ ಮಠದ ಗುಣಾನಾಥ ಸ್ವಾಮೀಜಿ  ಉಪಸ್ಥಿತರಿದ್ದರು. ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ವಿ ಸದಾನಂದ ಗೌಡ ಮಾತ ನಾಡಿ, ಸಂಸ್ಕಾರವನ್ನು ಬೆಳೆಸಿಕೊಂಡು ಹೋಗದಿದ್ದರೆ ಸಮುದಾಯದ ಶಕ್ತಿ ವ್ಯರ್ಥವಾಗುತ್ತದೆ. ಎಲ್ಲ ಸಮುದಾಯ ವನ್ನು ಉತ್ತಮವಾಗಿ ಕಾಣುವ ಜತೆಗೆ ಆದರ್ಶದ ಹಾದಿಯಲ್ಲಿ ನಡೆಯುವ ಕಾರ್ಯನಡೆಯಬೇಕು ಎಂದು ಅವರು ಹೇಳಿದರು.

ವಿಟ್ಲ ಅರಮನೆಯ ಅರಸರಾದ ಜನಾರ್ದನ ವರ್ಮ ಅರಸರಿಗೆ ಗೌರವಾ ರ್ಪಣೆ ಮಾಡಲಾಯಿತು. ಪಿ. ಎಚ್. ಆನಂದ ಗೌಡ, ರಾಮದಾಸ ಗೌಡ, ಮೋಹನ ಗೌಡ ಕಾಯಾರ್‌ಮಾರ್‌ ದಂಪತಿಗಳನ್ನು ಸನ್ಮಾನಿಸಲಾಯಿತು. ರೂಪಾಲತಾ ತೀರ್ಥಪ್ರಸಾದ್ ಕೊಂಗ ಲಾಯಿ, ನಿತ್ಯಾನಂದ ಮುಂಡೋಡಿ, ಗಿರಿಯಪ್ಪ ಗೌಡ ಗಿರಿನಿವಾಸ, ಲಿಂಗಪ್ಪ ಗೌಡ ಅವರನ್ನು ಗೌರವಿಸಲಾಯಿತು.

ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ ಅಭಿವೃದ್ಧಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗ ಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ವಾಸುದೇವ ಗೌಡ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ವಿಟ್ಲ ಸಂಘದ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಕೆ. ದೇವರ ಮನೆ ಮತ್ತಿತರರು ಉಪಸ್ಥಿತರಿದ್ದರು.

***
ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ. ನದಿಗಳಿಗೆ - ಪರಿಸರಕ್ಕೆ ಸೇರಿದಂತೆ ಎಲ್ಲ ವಸ್ತುವಿಗೂ ಸಾವು ಇದೆ.
-ಡಿ.ವಿ. ಸದಾನಂದ ಗೌಡ
ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT