ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರೆಲೆ ಗೊಬ್ಬರ ತಯಾರಿಗೆ ಟಿಪ್ಸ್‌

ಎಣಿಕೆ ಗಳಿಕೆ – 34
Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಸಸ್ಯಗಳ ಎಲೆ, ಕಾಂಡ ಮತ್ತು ಬೇರು ಇವುಗಳ ಮೂಲದಿಂದ ತಯಾರಾಗುವ ಗೊಬ್ಬರವೇ ಹಸಿರೆಲೆ ಗೊಬ್ಬರ. ಬೆಳೆಗಳನ್ನು ವಿಷಮುಕ್ತವಾಗಿ, ಆರೋಗ್ಯಕರವಾಗಿ ಬೆಳೆಸುವ ಗೊಬ್ಬರ ಇದು.

ದ್ವಿದಳ ಸಸ್ಯಗಳು ಮತ್ತು ಅದೇ ಪ್ರಕಾರದ ಸಸ್ಯಗಳನ್ನು ಹಸಿರು ಗೊಬ್ಬರವಾಗಿ ಉಪಯೋಗಿಸಬಹುದು. ಕಡಿಮೆ ನಾರಿನಿಂದ ಕೂಡಿದ್ದು ಮಣ್ಣಿನಲ್ಲಿ ಸೇರಿಸಿದಾಗ ಸುಲಭ ಹಾಗೂ ಶೀಘ್ರವಾಗಿ ಕಳಿಯುವಂತಿದ್ದರೆ ಒಳ್ಳೆಯದು.

ನೀರಾವರಿಯಲ್ಲಿ ಪ್ರತಿ ಹೆಕ್ಟೇರ್‌ಗೆ 4–5 ಟನ್ ಹಾಗೂ ಖುಷ್ಕಿ ಜಮೀನಿನಲ್ಲಿ ಒಂದರಿಂದ ಒಂದೂವರೆ ಟನ್‌ ಗೊಬ್ಬರ ದೊರೆಯುತ್ತದೆ. ಇದು ಕ್ರಮವಾಗಿ 60–100 ಕೆ.ಜಿ ಹಾಗೂ 15–25  ಕೆ.ಜಿ ಸಾರಜನಕಕ್ಕೆ ಸಮ. ಜಂತು ಹುಳಿವಿನ ಬಾಧೆಯ ನಿಯಂತ್ರಣಕ್ಕೂ ಇದು ಉಪಕಾರಿ

ಹಸಿರೆಲೆ ಗೊಬ್ಬರ ಬೆಳೆಯನ್ನು ನೀರಾವರಿಯಲ್ಲಿ ಅಥವಾ 625-750 ಮಿಲಿ ಮೀಟರ್ ಮಳೆ ಬೀಳುವ ಯಾವುದೇ ಪ್ರದೇಶಗಳಲ್ಲಿ ಬೆಳೆಯಬಹುದು

ಸಸ್ಬೇನಿಯಾ ಗ್ಲಿರಿಸೀಡಿಯಾಗಳನ್ನು ಬದುಗಳ ಮೇಲೆ 3–4 ಅಡಿ ಅಂತರದಲ್ಲಿ ಹಸಿರೆಲೆ ಗೊಬ್ಬರವಾಗಿ ಬೆಳೆಸಬಹುದು

ಸಸ್ಬೇನಿಯಾ, ಸೀಮೆ ತಂಗಡಿ, ಕೊಳಂಚಿ, ಕುದುರೆ ಮೆಂತೆ, ಸೆಣಬು, ಹೆಸರು, ಉದ್ದು, ಅಲಸಂದೆ, ಮಡಿಕೆ ಹುರುಳಿ ಮತ್ತು ಹುಲಗಲ ಗಿಡ ಅಥವಾ ಯಾವುದಾದರೂ ಹೆಚ್ಚು ಎಲೆಗಳನ್ನು ಬಿಡುವ ಸ್ಥಳೀಯ ಗಿಡಗಳನ್ನು ಹಸಿರೆಲೆ ಗೊಬ್ಬರಕ್ಕಾಗಿ ಒಡ್ಡು ಅಥವಾ ಬದುಗಳ ಮೇಲೆ ಬೆಳೆಯಬಹುದು

ಹಸಿರು ಗೊಬ್ಬರದ ಬೆಳೆಗಳು ಭೂಮಿಯ ಕೆಳ ಪದರಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಮೇಲ್ಪದರಗಳಲ್ಲಿ ಸಂಗ್ರಹಿಸುತ್ತವೆ. ಇದರಿಂದ ಈ ಪೋಷಕಾಂಶಗಳು ಮುಂದಿನ ಬೆಳೆಗೆ ಸುಲಭವಾಗಿ ಸಿಗುತ್ತವೆ

ಖುಷ್ಕಿ ಬೇಸಾಯದಲ್ಲಿ ಆಳವಾದ ಕಪ್ಪು ಜಮೀನಿನಲ್ಲಿ ಸಾವಯವ ಗೊಬ್ಬರ ಒದಗಿಸುವುದು ಕಷ್ಟ. ಆದ್ದರಿಂದ ಆ ಪ್ರದೇಶಕ್ಕೆ ಹೊಂದಿಕೊಳ್ಳುವ ಹಸಿರು ಗೊಬ್ಬರದ ಬೆಳೆಗಳನ್ನು ಬೆಳೆದು, ಹೂವು ಬಿಡುವಾಗ ಅಥವಾ ಹೂವು ಬಿಡುವ ಮೊದಲೇ ಎಲೆ ಹಾಗೂ ಮೃದು ಕಾಂಡಗಳನ್ನು ಕತ್ತರಿಸಿ ಮಣ್ಣಿನಲ್ಲಿ ಬೆರೆಸುವುದು ಸೂಕ್ತ

ನೀರಿನ ಸೌಕರ್ಯ ಚೆನ್ನಾಗಿದ್ದರೆ ಬೇಸಿಗೆ ಬೆಳೆ ಕಟಾವಿನ ನಂತರ ಜೂನ್ ತಿಂಗಳಿನಲ್ಲಿ ಸೆಣಬು, ಡಯಾಂಚ ಅಥವಾ ಸಸ್ಬೇನಿಯಾ ಬೆಳೆಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಯಬಹುದು. ಬಿತ್ತಲು ಹೆಕ್ಟೇರಿಗೆ 50–60 ಕಿ.ಗ್ರಾಂ ಬೀಜವನ್ನು ಉಪಯೋಗಿಸಬೇಕು. ಬಿತ್ತನೆಗೆ ಮುಂಚೆ ಬೀಜಕ್ಕೆ ಜೈವಿಕ ಗೊಬ್ಬರಗಳಿಂದ ಲೇಪನ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT