ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಕೋಟಿಯ ಕಥೆಯಿದು...

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಧರಣಿಮಂಡಲ ಮಧ್ಯದೊಳಗೆ...
ಬಾಯಿಂದ ಬಾಯಿಗೆ ಹರಿದು ನೀತಿ, ಪ್ರೀತಿ, ಆತ್ಮೀಯತೆ, ಧರ್ಮ, ಗೌರವದ ಸಂದೇಶವನ್ನು ಸಾರುತ್ತ ಜನಮಾನಸದಲ್ಲಿ ಹಚ್ಚ ಹಸಿರಾಗಿರುವ ಹಾಡಿದು.
ಇದೇ ಕಥನವನ್ನು ಆಧರಿಸಿ ಈಗ ಉದ್ಯಾನವೊಂದು ರೂಪುಗೊಂಡಿದೆ. ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲೆ ಹೊಸಪೇಟೆಯ ಪುಣ್ಯಕೋಟಿ ಆಶ್ರಮಗಳ ಸಂಯುಕ್ತ ಆಶ್ರಯದಲ್ಲಿ ಸಿಮೆಂಟ್ ಶಿಲ್ಪಕಲಾ ಕೃತಿಗಳ ಉದ್ಯಾನ ಹೊಸಪೇಟೆಯ ಕೋಡಿಯಾಲ್‌ನ ಪುಣ್ಯಕೋಟಿ ಆಶ್ರಮದಲ್ಲಿ ಮೈದಳೆದಿದೆ.

ಕೊಳಲನೂದುವ ಗೊಲ್ಲ, ಆತನ ಕೊಳಲ ದನಿಗೆ ಓಗೊಡುತ್ತಾ ಓಡಿಬರುವ ಹಸುಗಳು, ಅವುಗಳಲ್ಲೊಂದು ಪುಣ್ಯಕೋಟಿ, ಹುಲಿಯ ಎದುರು ಅದು ಸಿಕ್ಕಿಬೀಳುವ ಪರಿ, ಹುಲಿಗೆ ಹೇಳಿ ಕರುವಿಗೆ ಹಾಲು ಕುಡಿಸಲು ಬರುವುದು, ತನ್ನ ಕರುವನ್ನು ನೋಡಿಕೊಳ್ಳಲು ಎಲ್ಲಾ ಹಸುಗಳಿಗೆ ಹೇಳುವುದು, ಮಾತಿಗೆ ತಪ್ಪಧೇ ಮರಳಿ ಹೋಗುವುದು, ಅದರ ನ್ಯಾಯಪಾಲನೆ, ಧರ್ಮನಿಷ್ಠೆಗೆ ಮನಸೋತ ಹುಲಿ... ಹೀಗೆ ಸಂಪೂರ್ಣ  ಚಿತ್ರಣ ಈ ಕಲಾಕೃತಿಗಳಲ್ಲಿ ಸುಮಾರು ಏಳು ಎಕರೆ ಪ್ರದೇಶದಲ್ಲಿ ಅರಳಿ ನಿಂತಿವೆ.

ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ವೈ.ಕುಮಾರ್ ಅವರ ನೇತೃತ್ವದಲ್ಲಿ ಹತ್ತು ಹಿರಿಯ ಮತ್ತು ಕಿರಿಯ ಶಿಲ್ಪಿಗಳು ಈ ಕಲಾಕೃತಿಗಳನ್ನು ರೂಪಿಸಿದ್ದಾರೆ. 15 ದಿನಗಳ ಕಾಲ ನಡೆಸಿದ ಶಿಬಿರದಲ್ಲಿ ಒಟ್ಟು 18 ವಿಭಿನ್ನ ಶಿಲ್ಪಕಲಾ ಕೃತಿಗಳು ಮೂಡಿ ಬಂದಿವೆ. ಹರಿಹರದಿಂದ ನಾಲ್ಕು ಕಿ.ಮೀ.ದೂರದಲ್ಲಿದೆ ಈ  ಆಶ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT