ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಗಾನ ಧರ್ಮ ಜಾಗೃತಿಗೊಳಿಸುವ ಕಲೆ’

Last Updated 3 ಜನವರಿ 2017, 6:11 IST
ಅಕ್ಷರ ಗಾತ್ರ

ಉಜಿರೆ: ಕೇವಲ ಪೌರಾಣಿಕ ಪ್ರಸಂಗ ಗಳನ್ನು ಆಧರಿಸಿದ ಯಕ್ಷಗಾನ ಭಾರ ತೀಯ ಲಲಿತ ಕಲೆಗಳಲ್ಲಿ ಅತ್ಯಂತ ಶೇಷ್ಠ ಹಾಗೂ ಪವಿತ್ರ ಕಲೆಯಾಗಿದೆ. ಧರ್ಮ ಜಾಗೃತಿಯೊಂದಿಗೆ ಸಭ್ಯ, ಸುಸಂಸ್ಕೃತ ಸಮಾಜ ರೂಪಿಸುವ ಶಕ್ತಿ-ಸಾಮರ್ಥ್ಯ ಯಕ್ಷಗಾನ ಕಲೆಗಿದೆ ಎಂದು ಹೊರ ನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿ ಹೇಳಿದರು.

ಅವರು ಭಾನುವಾರ ಉಜಿರೆಯಲ್ಲಿ ಗುಂಡ್ಮಿ ಕಾಳಿಂಗ ನಾವಡರ ಸ್ಮರಣಾರ್ಥ ಆಯೋಜಿಸಲಾದ ಯಕ್ಷ ನವಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗ ಸಜ್ಜಿಕೆ, ವೇಷ-ಭೂಷಣ, ವಾಕ್ಚಾತುರ್ಯ, ನೃತ್ಯ, ಅಭಿನಯ ಮೊದ ಲಾದ ಹಲವು ಆಯಾಮಗಳಿಂದ ಕೂಡಿದ ಯಕ್ಷಗಾನ ಕಲೆಯ ಪಾವಿತ್ರ್ಯ ಮತ್ತು ಗುಣಮಟ್ಟವನ್ನು ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ.

ಗಂಡು ಕಲೆಯಾದ ಯಕ್ಷಗಾನ ಕ್ಷೇತ್ರದಲ್ಲಿ ಇಂದು ಮಹಿಳಾ ಕಲಾವಿದರು ಮಿಂಚುತ್ತಿರು ವುದು ಶ್ಲಾಘನೀಯ. ಪರಿವರ್ತನೆಯ ನೆಪದಲ್ಲಿ ಯಕ್ಷಗಾನಕ್ಕೆ ಅಪಚಾರವಾಗ ಬಾರದು ಎಂದು ಎಚ್ಚರಿಕೆ ನೀಡಿದ ಅವರು ಕಲಾಭಿಮಾನಿಗಳು ಮೂಕ ಪ್ರೇಕ್ಷ ಕರಾಗದೆ ಯಕ್ಷಗಾನ ಕಲೆಯ ಅವಗಣನೆ ಆದಾಗ, ಪಾವಿತ್ರ್ಯಕ್ಕೆ ಧಕ್ಕೆ ಆದಾಗ ಯಕ್ಷಗಾನ ಅಕಾಡೆಮಿ ಹಾಗೂ ಸಂಬಂ ಧಪಟ್ಟವರ ಗಮನಕ್ಕೆ ತಂದು ಅದನ್ನು ತಡೆಯಬೇಕು ಎಂದು ಸಲಹೆ ನೀಡಿ ದರು. ಕಲಾವಿದರು ಆರ್ಥಿಕವಾಗಿ ಶ್ರೀಮಂತರಾಗಿಲ್ಲ. ಆದರೆ ಸಾಂಸ್ಕೃತಿ ಕವಾಗಿ ಶ್ರೀಮಂತರು ಎಂದು ಹೇಳಿದರು.

ಕಟೀಲಿನ ಕಮಲಾದೇವಿ  ಪ್ರಸಾದ ಅಸ್ರಣ್ಣ ಮಾತನಾಡಿ ಯಕ್ಷಗಾನ ಕಲಾವಿ ದರು ಪರಿಶುದ್ಧವಾದ ಅರ್ಥಪೂರ್ಣ ವಾದ ಪ್ರಬುದ್ಧ ಕನ್ನಡ ಭಾಷೆಯನ್ನು ಬಳಸುತ್ತಾರೆ.ಯಕ್ಷಗಾನ ಕಲೆಯನ್ನು ಪ್ರೀತಿಸಿ ಗೌರವಿಸಬೇಕು ಎಂದರು. ಖ್ಯಾತ ಸಾಹಿತಿ ಕೆ.ಟಿ. ಗಟ್ಟಿ ಮತ್ತು ಭಾಗವತರಾದ ಕುಬಣೂರು ಶ್ರೀಧರ ರಾವ್ ಅವರನ್ನು ಸನ್ಮಾನಿಸಲಾಯಿತು.

ಎಸ್.ಡಿ.ಎಂ. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಉಮಾನಾಥ ಶೆಣೈ ಬರೆದ  ಉಜಿರೆ ಪರಿಸರದ ಶ್ರದ್ಧಾ ಕೇಂದ್ರ ಗಳು ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.ಹರೀಶ್ ಪೂಂಜ ಮತ್ತು ಭುಜಬಲಿ ಧರ್ಮಸ್ಥಳ ಉಪಸ್ಥಿತರಿದ್ದರು. ಪ್ರೊ. ಚಂದ್ರಮೋಹನ ಮರಾಠೆ ಸ್ವಾಗತಿಸಿ ದರು. ಕೆ. ಹರೀಶ್ ಕುಮಾರ್ ಧನ್ಯವಾದ ವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT