ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಬಾಕಿ ಸೌಲಭ್ಯ ಪಾವತಿಗೆ ಮನವಿ

ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ಚಂದ್ರ ಭೇಟಿ ಮಾಡಿದ ನಿಯೋಗ
Last Updated 3 ಜನವರಿ 2017, 7:29 IST
ಅಕ್ಷರ ಗಾತ್ರ

ಕೆಜಿಎಫ್‌: ‘ಚಿನ್ನದ ಗಣಿ (ಬಿಜಿಎಂಎಲ್‌) ಕಾರ್ಮಿಕರಿಗೆ  ಕೊಡಬೇಕಾಗಿರುವ ಬಾಕಿ ಸೌಲಭ್ಯಗಳನ್ನು ಕೂಡಲೆ ಒದಗಿಸಬೇಕು’ ಎಂದು ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದ ನಿಯೋಗ ಸೋಮವಾರ ಒತ್ತಾಯಿಸಿದೆ.

ಊರಿಗಾಂನ ಸ್ವರ್ಣಭವನ್‌ (ಬಿಜಿಎಂಎಲ್‌ ಆಡಳಿತ ಕಚೇರಿ) ನಲ್ಲಿ ಸೋಮವಾರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ಚಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

‘ಬಿಜಿಎಂಎಲ್‌ ಕಾರ್ಮಿಕರಿಗೆ ಬಹಳ ವರ್ಷಗಳಿಂದ ಗ್ರಾಚ್ಯುಟಿ ಮತ್ತು ಅದರ ಬಡ್ಡಿ ಸೇರಿದಂತೆ ಸುಮಾರು ಹನ್ನೊಂದು ಕೋಟಿ ರೂಪಾಯಿಗಳನ್ನು ಸಂಕ್ರಾಂತಿ ಹಬ್ಬಕ್ಕೂ ಮುನ್ನ ನೀಡಬೇಕು.

ಈ ನಿಟಲ್ಲಿ ಕೇಂದ್ರ ಗಣಿ ಸಚಿವಾಲಯ ಸಕಾರತ್ಮಕವಾಗಿ ಸ್ಪಂದಿಸಿದೆ. ಅಧಿಕಾರಿಗಳು ಕಾರ್ಮಿಕರ ಹಿತದೃಷ್ಟಿಯಿಂದ ಹಣ ಬಿಡುಗಡೆಗೆ ಶ್ರಮಿಸಬೇಕು’ ಎಂದು  ಮನವಿ ಮಾಡಿದರು.

ಕಾರ್ಮಿಕ ಮುಖಂಡ ಜೆ. ಜಯಕುಮಾರ್ ಇಲಾಖೆಯೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳ ದಾಖಲೆಗಳನ್ನು ತೋರಿಸಿದರು. ಮುಖಂಡರ ಮನವಿಯನ್ನು ಸಂಬಂಧಪಟ್ಟ ಗಣಿ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ ಚಂದ್ರ ಆಶ್ವಾಸನೆ ನೀಡಿದರು. ಮುಖಂಡರಾದ ಕಮಲ್‌ನಾಥ್‌, ಗೋಪಿನಾಥ್‌, ಶಿವಭೂಷಣಂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT