ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪಂಚಸೂತ್ರದಿಂದ ಸಮಾನತೆ

Last Updated 3 ಜನವರಿ 2017, 7:51 IST
ಅಕ್ಷರ ಗಾತ್ರ

ಚಿಂತಾಮಣಿ: ‘ಕುವೆಂಪು ಪಂಚಸೂತ್ರ ಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣ ದೃಷ್ಟಿ ಪಾಲಿಸಿದರೆ ಸಮಾಜದಲ್ಲಿ ಸಮಾ ನತೆ ಕಾಣಬಹುದು’ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಪರಿಷತ್‌ ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊ ಂಡಿದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕುವೆಂಪು ಅವರ ಸಂದೇಶಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಅವರ ಸಾಹಿತ್ಯವನ್ನು ಯುವ ಸಮುದಾಯ ಅಭ್ಯಸಿಸಬೇಕಾಗಿದೆ’ ಎಂದರು. 

ಮುಖ್ಯ ಅತಿಥಿಗಳಾದ ಸಾಹಿತಿ ಟಿ.ಎಸ್.ನಾಗರಾಜಶೆಟ್ಟಿ, ಎಂ.ಎಸ್. ವೆಂಕಟರಾಮಯ್ಯ, ಎಂ.ಆರ್. ನಾಗ ರಾಜರಾವ್ ಕುವೆಂಪು ಅವರ ಬದುಕು– ಬರಹ, ಸಾಹಿತ್ಯದ ಕುರಿತು ಮಾತನಾ ಡಿದರು. ಕಾಲೇಜಿನ ವಿದ್ಯಾರ್ಥಿಗಳು ಕುವೆಂಪು ಕುರಿತು ಕಿರುಭಾಷಣ ಹಾಗೂ ಚುಟುಕು ವಾಚನ ಮಾಡಿದರು.

ಕಾಲೇಜು ವಿದ್ಯಾರ್ಥಿಗಳಿಂದ ರಚನೆಯಾಗಿದ್ದ ‘ಕಾಲೇಜಿನ ಅಂಗಳದಲ್ಲಿ ಚುಟುಕು ಸಿಂಚನ’ ಕಾಗತಿ ವೆಂಕಟತ್ನಂ ಅವರ ‘ಬಂಗಾರದ ಬಳ್ಳಿ’, ‘ಏಳು ಸುತ್ತಿನ ಮಲ್ಲಿಗೆ’, ಪಿ.ಎಂ.ಚಲಪತಿಗೌಡ ಅವರ ‘ಬಣ್ಣದ ಚಿಟ್ಟೆ’, ‘ಮಕ್ಕಳ ಪದ್ಯಗಳು’, ಪಾತಕೋಟೆ ಸರ್ಕಾರಿ ಶಾಲೆ ಶಿಕ್ಷಕ ಬಾಲಾಜಿ ಅವರ ‘ದಾರಿ ದೀಪ’ ಕಾದಂಬರಿ ಮತ್ತು ಕವನ ಸಂಕಲನ ಗಳನ್ನು ಬಿಡುಗಡೆ ಮಾಡಲಾಯಿತು.

ನಗರದ ಜಯ ಪೌಂಡೇಷನ್‌ ಶಾಖೆಯ ಗುರು ಹರ್ಷಿತ್‌ ತಂಡದಿಂದ ಭರತನಾಟ್ಯ, ಗಾಯಕರಾದ ಸೋರಪ್ಪಲ್ಲಿ ಚಂದ್ರಶೇಖರ್‌, ಮಹೇಶ್‌ ಕುಮಾರ್‌ ಅವರಿಂದ ಜನಪದ ಗೀತೆಗಳ ಗಾಯನ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ದೇವತಾ ದೇವರಾಜ್‌ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ, ಉಪಾಧ್ಯಕ್ಷೆ ಸುಜಾತ ಶಿವಪ್ಪ, ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ  ಕೈವಾರ ಶ್ರೀನಿವಾಸ್‌, ಸಾಹಿತಿಗಳಾದ ವೈ.ಎಲ್‌. ಹನುಮಂತರಾವ್‌, ಕಲ್ವ ಮಂಜಲಿ ಗೋಪಾಲಗೌಡ ಮತ್ತಿತರರು ಭಾಗವಹಿಸಿದ್ದರು.

ಕಾಗತಿ ವೆಂಕಟರತ್ನಂ ಪ್ರಾಸ್ತಾವಿಕ ನುಡಿ ಹಾಗೂ ಶಿಕ್ಷಕ ಬಿ.ಎಚ್‌. ಮಂಜುನಾಥ್‌ ಆಶಯ ನುಡಿಗಳನ್ನು ನುಡಿದರು. ಎಸ್‌.ಅಶ್ವತ್ಥ್‌ ಸ್ವಾಗತಿಸಿದರು. ಮುಳ್ಳಹಳ್ಳಿ ನಂಜುಂಡಗೌಡ ನಿರೂಪಿಸಿ ದರು. ಎನ್‌.ವಿ.ಶ್ರೀನಿವಾಸ್‌ ವಂದಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT