ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ವಿದ್ಯಾರ್ಥಿಗಳಿಗೆ ನೆರವಾಗಿ

Last Updated 3 ಜನವರಿ 2017, 7:52 IST
ಅಕ್ಷರ ಗಾತ್ರ

ಚಿಂತಾಮಣಿ: ‘ಸರ್ಕಾರವು ಬ್ರಾಹ್ಮಣರನ್ನು ಮುಂದುವರಿದ ಜನಾಂಗ ಎಂದು ಪರಿಗಣಿಸಿ ಯಾವುದೆ ಸಹಾಯ ನೀಡುತ್ತಿಲ್ಲ. ಜನಾಂಗದಲ್ಲಿ ಉಳ್ಳವರು ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು’ ಎಂದು ಅಖಿಲ ಕರ್ನಾಟ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ಬಿ.ಆರ್‌.ಶ್ರೀನಾಥ್‌ ಮನವಿ ಮಾಡಿದರು.

ತಾಲ್ಲೂಕು ವಿಪ್ರ ನೌಕರರ ಸಂಘವು ನಗರದ ಶಂಕರಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬ್ರಾಹ್ಮಣರಲ್ಲೂ ಸಾಕಷ್ಟು ಬಡವರು ಇದ್ದಾರೆ. ಜಾತಿ ಪರಿಗಣಿಸದೆ ಆರ್ಥಿಕ ವಾಗಿ ಹಿಂದುಳಿದ ಎಲ್ಲ ಜನಾಂಗಗಳಿಗೂ ಸರ್ಕಾರದ ನೆರವು ಅಗತ್ಯವಿದೆ. ಕಡು ಬಡವರಾದರೂ ಬ್ರಾಹ್ಮಣ ವಿದ್ಯಾರ್ಥಿ ಗಳಿಗೆ ಸರ್ಕಾರಿ ನೆರವು ಮರೀಚಿಕೆ ಯಾಗಿದೆ’ ಎಂದು ವಿಷಾದಿಸಿದರು.

‘ನೌಕರರ ಸಂಘವು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಬೇಕು. ಅವರ ಮೂಲಕವೇ ಜನಾಂಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಲೇಖನ ಸಾಮಗ್ರಿಗಳನ್ನು ವಿತರಿಸಿ, ನಾವು ಸಮಾಜದಲ್ಲಿದ್ದೇವೆ ಎಂಬ ಅರಿವನ್ನು ಸರ್ಕಾರಕ್ಕೆ ಮುಟ್ಟಿಸಬೇಕು’ ಎಂದು ಸೂಚಿಸಿದರು.

ವಿಪ್ರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವರಾವ್‌ ಮಾತನಾಡಿ,  ‘ಬಡ ಬ್ರಾಹ್ಮಣರಿಗೆ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಸಂಘದ ಕೇಂದ್ರ ಘಟಕವು ಯೋಜನೆಗಳನ್ನು ರೂಪಿಸುತ್ತಿದೆ. ಜನಾಂಗದ ಶ್ರೀಮಂತರು ನೆರವು ನೀಡಬೇಕು’ ಎಂದು ಕೋರಿದರು.

ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಎಸ್‌.ಗೋಪಾಲಕೃಷ್ಣ, ವಿಪ್ರ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಲ್‌.ಮಂಜುನಾಥ್‌, ಗೌರವಾಧ್ಯಕ್ಷ ಕೆ.ಎ.ಮಂಜುನಾಥ್‌ ಮಾತನಾಡಿದರು.

ತಾಲ್ಲೂಕಿನ ಸರ್ಕಾರಿ ಮತ್ತು ಅನು ದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿ ರುವ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಬಿ.ಆರ್‌.ಸೇತು ಮಾಧವ್‌ ಮತ್ತು ಬಿ.ಆರ್‌.ಶ್ರೀನಾಥ್‌ ವಿದ್ಯಾರ್ಥಿವೇತನ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಅಂಚೆ ಇಲಾಖೆಯ ಸಂಧ್ಯಾ ಮಂಜುನಾಥ್‌ ಕನ್ನಡ–ಇಂಗ್ಲಿಷ್‌ ನಿಘಂಟುಗಳನ್ನು ನೀಡಿದರು.

ಯಾಜ್ಞವಲ್ಕ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್‌.ನಾಗರಾಜ್‌,  ಸಿ.ಕೆ.ಶ್ರೀನಿವಾಸ್‌, ಮುರಳಿ ಕೃಷ್ಣ, ಮಲ್ಲಿಕಾರ್ಜುನ್‌,   ಶ್ರೀನಾಥ್‌, ಲಕ್ಷ್ಮಪ್ಪ, ಕೃಷ್ಣಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT