ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜೋಪಚಾರದಿಂದ ರೋಗ ತಡೆ

ತೋಟಗಾರಿಕೆ ಇಲಾಖೆಯಿಂದ ಗುಲಾಬಿ ಈರುಳ್ಳಿ ಬೆಳೆ ಕುರಿತ ತರಬೇತಿ
Last Updated 3 ಜನವರಿ 2017, 7:55 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಯಾವುದೆ ಬೆಳೆ ಬಿತ್ತು ವುದಕ್ಕೂ ಮೊದಲು ಬೀಜೋಪ ಚಾರವನ್ನು ಕಡ್ಡಾಯವಾಗಿ ಮಾಡಬೇಕು. ಇದರಿಂದ ಬಹುಪಾಲು ರೋಗಗಳನ್ನು ತಡೆಯಬಹುದು’ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಈರೇಗೌಡ ತಿಳಿಸಿದರು.

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ‘ಗುಲಾಬಿ ಈರುಳ್ಳಿ ಬೆಳೆ’ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬೆಳೆ ಬಿತ್ತುವುದಕ್ಕೂ ಮೊದಲು ಮಣ್ಣು ಪರೀಕ್ಷೆ, ಅಗತ್ಯ ಪ್ರಮಾಣದಲ್ಲಿ ಗೊಬ್ಬರಗಳ ಬಳಕೆ, ಉತ್ತಮ ತಳಿಯ ಬಿತ್ತನೆ ಬೀಜ ಆಯ್ಕೆ, ಬೀಜೋಪಚಾರ, ಔಷಧೋಪಚಾರ, ಕೀಟಗಳ ನಿಯಂತ್ರಣ, ಮಾರಾಟದ ತಂತ್ರಗಳನ್ನು ಅರಿಯುವುದು ಮುಖ್ಯ’ ಎಂದರು.

‘ಮಣ್ಣು ಪರೀಕ್ಷೆ ಮಾಡಿಸಿ  ತಜ್ಞರ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಬಳಸಬೇಕು. ಇಲ್ಲವಾದಲ್ಲಿ ಮಣ್ಣಿನ ಫಲವತ್ತತೆ ನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬೀಜೋಪಚಾರ ಮಾಡುವುದ ರಿಂದ ಶೇ 80ರಷ್ಟು ರೋಗಗಳನ್ನು ತಡೆಗಟ್ಟಬಹುದು. ಇದರಿಂದ ರಾಸಾಯ ನಿಕ ಬಳಕೆ ಕಡಿಮೆಯಾಗಲಿದೆ. ರೋಗ  ನಿಯಂತ್ರಣದಿಂದ ಉತ್ತಮ ಫಸಲು  ಸಿಗ ಲಿದೆ. ಮಾರುಕಟ್ಟೆ ತಂತ್ರಗಳ ಬಗ್ಗೆಯೂ ರೈತರು ಗಮನ ಕೊಡಬೇಕು. ಆಗ  ಕೃಷಿ ಲಾಭದಾಯಕವಾಗಲಿದೆ’ ಎಂದರು.

ಜಿಕೆವಿಕೆ ಮಾರುಕಟ್ಟೆ ವಿಭಾಗದ ಜಯರಾಂ ಮಾತನಾಡಿ, ‘ಸ್ಥಳೀಯ ಮಾರುಕಟ್ಟೆಗಳು ಸಕ್ರಿಯವಾಗಬೇಕು.  ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ಕೃಷಿಕರು ಆರ್ಥಿಕವಾಗಿ ಸುಧಾ ರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.

‘ರಾಜ್ಯದಲ್ಲಿಯೇ ಮೊದಲಿಗೆ ತಾಲ್ಲೂಕಿನ ಸಾದಲಿಯಲ್ಲಿ ರೈತ ಉತ್ಪಾದ ಕರ ಕಂಪೆನಿ ಆರಂಭಿಸಿದ್ದು ಇದೀಗ ರಾಜ್ಯದ ವಿವಿಧ ಕಡೆ ಕಂಪೆನಿಗಳನ್ನು ಆರಂಭಿಸಲು ಅಗತ್ಯವಾದ ಚಟುವ ಟಿಕೆಗಳು ನಡೆಯುತ್ತಿವೆ. ಕಂಪೆನಿಗಳ ಮೂಲಕ ತಮ್ಮ ಉತ್ಪನ್ನಗಳಿಗೆ ಮಾರು ಕಟ್ಟೆ ಒದಗಿಸಿ ಕೊಳ್ಳುವ ಕೆಲಸವನ್ನು ರೈತರೇ ಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹಾಸನದ ಆಲೂಗಡ್ಡೆ ಸಂಶೋ ಧನಾ ಕೇಂದ್ರದ ಅಮರ ನಂಜುಂ ಡೇಶ್ವರ, ‘ಇದುವರೆಗೂ ಈ ಭಾಗದಲ್ಲಿ ಶಿಮ್ಲಾದ ಬಿತ್ತನೆಗೆ ಆಲೂಗಡ್ಡೆ ಬಳಸ ಲಾಗುತ್ತಿತ್ತು. ಇದೀಗ ಹಿಮಾಲಯ, ಸೂರ್ಯ  ಆಲೂಗಡ್ಡೆ ಬಿತ್ತನೆ ತಳಿಗಳ ಆವಿಷ್ಕಾರವಾಗಿದೆ. ಈ ಭಾಗದ ವಾತಾ ವರಣಕ್ಕೆ ಸೂಕ್ತವಾಗಿ ಹೊಂದಿಕೊಳ್ಳು ತ್ತದೆ.  ಮುಂದಿನ ದಿನಗಳಲ್ಲಿ ಶಿಫಾರಸು ಮಾಡಿದ ಬಿತ್ತನೆ ಆಲೂಗಡ್ಡೆ  ಬಳಸಿ’ ಎಂದು ರೈತರಲ್ಲಿ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆನಂದ್, ನಿತಿನ್, ರವಿಕುಮಾರ್, ಸಾದಲಿ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಅಶ್ವತ್ಥಮ್ಮ, ವಿಕ್ರಮ್ ಗ್ಲೋಬಲ್ ಸಂಸ್ಥೆಯ ನಾಗ ಮೋಹನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT