ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧ್ಯಕ್ಷೆಯಾಗಿ ಕರುಣಾದೇವಿ ಆಯ್ಕೆ

ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ: ಪೂರ್ವಭಾವಿ ಸಭೆ
Last Updated 3 ಜನವರಿ 2017, 8:23 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕು ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಕರುಣಾದೇವಿ ಸಲಗರ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಸಚ್ಚಿದಾನಂದ ಮಠಪತಿ  ಘೋಷಿಸಿದರು.

ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಸಂಬಂಧ ಸೋಮವಾರ ಇಲ್ಲಿನ ಬಿ.ಆರ್‌.ಸಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್‌ನಿಂದ ಇದುವರೆಗೆ 4 ಸಮ್ಮೇಳನ ನಡೆಸಲಾಗಿದ್ದು, ತಾಲ್ಲೂಕು ಮಟ್ಟದ 5ನೇ ಸಮ್ಮೇಳನದಲ್ಲಿ ಕಸಾಪ ತಾಲ್ಲೂಕು ಘಟಕದ ಒಮ್ಮತದ ಮೇರೆಗೆ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಫೆ. 2ರಂದು ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಶರದ್‌ಕುಮಾರ ನಾರಾಯಣಪೇಟಕರ್‌ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಭೂಸೇನಾ ನಿಗಮದ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ, ಕೋಶಾಧ್ಯಕ್ಷರನ್ನಾಗಿ ಡಾ.ಸಿದ್ದು ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರರೆಡ್ಡಿ, ತಾಲ್ಲೂಕು ಘಟಕ ಅಧ್ಯಕ್ಷ ಮುರಗೇಂದ್ರ ಸಜ್ಜನ್, ಕೋಶಾಧ್ಯಕ್ಷ ಶಿವರಾಜ ಮೇತ್ರೆ, ಬಿ.ಆರ್‌.ಸಿ ಶಿವಕುಮಾರ ಪಾರಶೆಟ್ಟಿ, ಬಾಲಕರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಾಶಿನಾಥ ಕೂಡ್ಲಿ, ಡಿ.ಬಿ.ಜಾಧವ್, ವೀರಣ್ಣ ಕುಂಬಾರ, ಸದಾಶಿವಯ್ಯ ಹಿರೇಮಠ್, ಶ್ರೀದೇವಿ ಮೋತಕಪಳ್ಳಿ, ರೇವಶೆಟ್ಟಿ ತಂಗಾ, ರಮೇಶ ಸಲಗರ್‌, ಶೋಭಾ ಔರಾದೆ, ಅನಿಲ ಸಿಂಧೆ, ಶ್ರೀಧರ ಚವಾಣ ಮಾತನಾಡಿದರು.

ವಿವಿಧ ಸಮಿತಿ ಅಧ್ಯಕ್ಷರು:  ವಿಠ್ಠಲ್‌ ಕಡ್ಡಿ– ಹಣಕಾಸು, ಮಹಿಳಾ–ಗೌರಮ್ಮ ಬಾಲಕುಂದೆ, ಮೆರವಣಿಗೆ– ಸುರೇಂದ್ರ ಹುಡಗೀಕರ್, ವೇದಿಕೆ– ರಮೇಶ ರಾಜೋಳೆ, ಆಹಾರ–ಶಶಿಧರ ಪಾಟೀಲ, ಶಿಸ್ತುಪಾಲನಾ– ಅನಂತರೆಡ್ಡಿ ಶಿವರಾಯ್, ಪ್ರಚಾರ– ಶಾಂತವೀರ ಎನ್‌.ಯಲಾಲ್, ಸಾಂಸ್ಕೃತಿಕ– ಸಾರಿಖಾ ಗಂಗಾ, ನಗರ ಅಲಂಕಾರ ಸಮಿತಿ ಅಧ್ಯಕ್ಷರನ್ನಾಗಿ ಶಂಭುಲಿಂಗ ರೂಗನ್‌ ಆಯ್ಕೆ ಮಾಡಲಾಗಿದೆ.

ಸಮ್ಮೇಳನ ಸ್ಮರಣ ಸಂಚಿಕೆ ಸಂಪಾದಕರನ್ನಾಗಿ ಶ್ರೀಕಾಂತ ಸೂಗಿ ಮತ್ತು ಮೀನಾಕುಮಾರಿ ಬೋರಾಳ್ಕರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶರದ್‌ಕುಮಾರ ನಾರಾಯಣಪೇಕರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT