ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ಕಲ್ಪಿಸಲು ಒತ್ತಾಯ

ಆಕ್ರೋಶ: ಅರಣ್ಯ ಇಲಾಖೆ ಕಚೇರಿ ಎದುರು ಗಿರಿಜನರ ಧರಣಿ
Last Updated 3 ಜನವರಿ 2017, 9:50 IST
ಅಕ್ಷರ ಗಾತ್ರ

ಹುಣಸೂರು: ‘ರಾಷ್ಟ್ರೀಯ ಉದ್ಯಾನ ದಲ್ಲಿ ವಾಸಿಸುತ್ತಿದ್ದ ಗಿರಿಜನರಿಗೆ ಸೂಕ್ತ ಪುನರ್ವಸತಿ ಕಲ್ಪಿಸದೆ ಒಕ್ಕಲೆಬ್ಬಿಸಿರುವು ದರಿಂದ ಅತಂತ್ರರಾಗಿದ್ದೇವೆ’ ಎಂದು ಆರೋಪಿಸಿ ಹುಣಸೂರು ಉಪವಿಭಾಗ ಹಾಗೂ ಕೊಡಗು ಜಿಲ್ಲೆಯ ಗಿರಿಜನರು ಸೋಮವಾರ ನಗರದ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.

‘ನಾಗರಹೊಳೆ ಅರಣ್ಯದಲ್ಲಿ ಜೀವನ ನಡೆಸುತ್ತಿದ್ದ ಗಿರಿಜನರನ್ನು ಹುಲಿ ಯೋಜನೆ  ಹೆಸರಿನಲ್ಲಿ ಹೊರ ಹಾಕುವ ಮೂಲಕ ಮಾನವ ಹಕ್ಕು ಉಲ್ಲಂಘಿಸಲಾ ಗಿದೆ. ಅರಣ್ಯದಲ್ಲಿದ್ದು, ಅರಣ್ಯವನ್ನು ಸಂರಕ್ಷಿಸಿಕೊಂಡು ಬರುತ್ತಿದವರನ್ನು ಏಕಾಏಕಿ ಒಕ್ಕಲೆಬ್ಬಿಸಿ ಬೀದಿಗೆಬಿಟ್ಟಿರು ವುದು ಎಷ್ಟು ಸರಿ’ ಎಂದು ಗದ್ದೆ ಹಾಡಿ ನಿವಾಸಿ ಜೆ.ಕೆ.ತಿಮ್ಮ, ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್‌ ಅವರನ್ನು ಪ್ರಶ್ನಿಸಿದರು.

ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಮುಜಾಫರ್‌ ಆಜಾದಿ ವರದಿಯನ್ನು ಜಾರಿಗೊಳಿಸಲು ಸರ್ಕಾರ  ಮೀನ–ಮೇಷ ಎಣಿಸುತ್ತಿದೆ. ವರದಿಯಲ್ಲಿ ಗಿರಿಜನರಿಗೆ  ಮೂಲ ಸವಲತ್ತುಗಳನ್ನು ಒದಗಿಸುವ ಮೂಲಕ ಪುನರ್ವಸತಿ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಹೀಗಿದ್ದರೂ 3,400 ಗಿರಿಜನ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಲ್ಲ. ಹೀಗಾಗಿ ಅತಂತ್ರವಾಗಿದ್ದೇವೆ ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಮುಷ್ಕೆರೆ ಹಾಡಿ ನಿವಾಸಿ ಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿ ನಿವಾಸಿ ಕಾಳೆಲ್ಕರ್‌ ಮಾತನಾಡಿದರು. ಡಿಸಿಎಫ್‌ ಬಾಲಚಂದ್ರ ಮಾತನಾಡಿ, ಗಿರಿಜನರ ಬೇಡಿಕೆಯಂತೆ ಈಗಾಗಲೇ ‘ಮುಜಾಫರ್‌ ಆಜಾದಿ’ ವರದಿ ಜಾರಿಗೊ ಳಿಸಲು ಸರ್ಕಾರ ಸೂಚನೆ ನೀಡಿದ್ದು, ನಾಲ್ಕು ಸದಸ್ಯರ ಸಮಿತಿ ರಚನೆಯಾಗಿದೆ.  ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾ ಗಲೇ ಎರಡು ಸುತ್ತಿನ ಸಭೆ ನಡೆದಿದ್ದು ಮಾರ್ಚ್‌ 31ರೊಳಗೆ ವರದಿ ಜಾರಿಗೆ ತರುವ ಎಲ್ಲ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಮೈಸೂರು ಮತ್ತು ಕೊಡಗು ಜಿಲ್ಲೆ ಯಲ್ಲಿ ಒಟ್ಟು 36 ಹಾಡಿಗಳ ವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮನವರಿಕೆ ಮಾಡಿಕೊಟ್ಟ ಅಧಿಕಾರಿ ಗಳು, ಗಿರಿಜನರಿಗೆ  ಮೂಲ ಸವಲತ್ತು ಕಲ್ಪಿಸುವುದಾಗಿ ಭರವಸೆ ನೀಡಿದರು. ಮಾರ್ಚ್ 31ರೊಳಗೆ ಬೇಡಿಕೆ ಈಡೇರದಿದ್ದರೆ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗಿರಿಜನರ ಮೇಲೆ ಅರಣ್ಯ ಇಲಾಖೆ ಹಾಕಿರುವ ಪ್ರಕರಣ ಹಿಂಪಡೆಯಬೇಕು. ಸಮುದಾಯ ಅರಣ್ಯ ಹಕ್ಕು ನೀಡಬೇಕು. ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವುದು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೀಡಿದ ಮನವಿ ಪತ್ರವನ್ನು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್‌ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT