ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶಕ್ಕೆ ಭಾಗ್ಯವಾದ ನೋಟು ರದ್ದತಿ’

ದೇವಸ್ಥಾನದ ರಜತ ಮಹೋತ್ಸವದಲ್ಲಿ ಶಿವಸಿದ್ಧ ಸೋಮೇಶ್ವರ ಶ್ರೀ ಅಭಿಮತ
Last Updated 3 ಜನವರಿ 2017, 10:02 IST
ಅಕ್ಷರ ಗಾತ್ರ

ಧಾರವಾಡ: ‘ಪ್ರತಿ ವರ್ಷ ಹೊಸ ವರ್ಷ ಬಂದರೆ ಕೇವಲ ಕ್ಯಾಲೆಂಡರ್ ಬದಲಾಗುತ್ತಿದ್ದವು. ಈ ಬಾರಿ ದೊಡ್ಡ ಮುಖಬೆಲೆಯ ನೋಟುಗಳು ಬದಲಾಗಿವೆ. ನೋಟು ಬದಲಾವಣೆಯ ಜೊತೆ ಭಾರತದ ಭಾಗ್ಯವೂ ಬದಲಾಗುವ ಭರವಸೆ ಮೂಡುತ್ತಿದೆ’ ಎಂದು ಬೆಳಗಾವಿ ಮುಕ್ತಿ ಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಕೆಲಗೇರಿ ಗಣಪತಿ ದೇವಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಹೊಸ ವರ್ಷದ ಆಚರಣೆ ಎಂದರೆ ಕುಡಿತ, ಕುಣಿತ ಎನ್ನುವ ಸಂಸ್ಕೃತಿ ಪ್ರಬಲವಾಗಿ ಬೇರೂರುತ್ತಿದೆ. ಇಂಥ ಸಂದರ್ಭದಲ್ಲಿ ಕೆಲಗೇರಿ ಎಂಬ ಗ್ರಾಮೀಣ ಸಂಸ್ಕೃತಿಯ ಜನ ಸಂಸ್ಕಾರಯುತವಾಗಿ ಹೊಸ ವರ್ಷಾಚರಣೆ ಮಾಡುತ್ತಿರುವುದು ಸ್ವಾಗತಾರ್ಹ.  ಬ್ರಿಟಿಷ್ ಪಂಚಾಂಗವೇ ನಮಗೆ ಹೊಸ ವರ್ಷದ ಸಂಕೇತವಾಗಿದೆ. ಅದರೊಂದಿಗೆ ಬ್ರಿಟಿಷ್ ಸಂಸ್ಕೃತಿಯೂ ನಮ್ಮದಾಗುತ್ತಿರುವುದು ವಿಷಾದಿಸಿದರು. 

ವಿಜಯಲಕ್ಷ್ಮಿ ಲೂತಿಮಠ ಮಾತನಾಡಿ, ‘ಬರುವ ದಿನಗಳಲ್ಲಿ ಜಾತ್ರಾ ಸಮಿತಿ, ಉಪ ಸಮಿತಿಗಳನ್ನು ರಚಿಸಿ, ಜಾನಪದ ಕ್ರೀಡೆ, ಕಲಾ ತಂಡಗಳನ್ನು ಆಹ್ವಾನಿಸಿ ದೊಡ್ಡ ಪ್ರಮಾಣದಲ್ಲಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುವುದು’ ಎಂದರು. 

ಸಿ.ಎಸ್.ಪಾಟೀಲ ಮಾತನಾಡಿ, ‘ಕೆಲಗೇರಿ ಕೆರೆ ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಕೆಲಗೇರಿಯ ಜನತೆಯೇ ಕೆರೆಯ ಸಂರಕ್ಷಣೆಗೆ ಮುಂದಾಗಬೇಕು. ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದು’ ಎಂದರು. 

ಕಾರ್ಯಕ್ರಮದಲ್ಲಿ ಶಿವಯೋಗ ಪುಣ್ಯಾಶ್ರಮದ ಡಾ.ಸಿದ್ಧರಾಮ ಶಿವಯೋಗಿಗಳು, ಮುನವಳ್ಳಿಯ ಶಿವಲಿಂಗ ಸೋಮೇಶ್ವರ ಸ್ವಾಮೀಜಿ, ಮೋಹನ ನಾಗಮ್ಮನವರ, ಕರಬಸಪ್ಪ ಕಡ್ಲಿ, ರುದ್ರಗೌಡ ಪಾಟೀಲ, ಅಕ್ಷಯ ಹುಲಗಣ್ಣವರ, ಕಲ್ಲಪ್ಪ ಗಾಳಿ, ಮಲ್ಲಯ್ಯ ಹೊಂಗಲಮಠ, ನಿಂಗಯ್ಯ ಕೂಡಲಮಠ, ಶಾಂತಯ್ಯಾ ಹಿರೇಮಠ  ಇದ್ದರು.  ಇದೇ ಸಂದರ್ಭದಲ್ಲಿ ಗದಿಗಯ್ಯ ಗುಡ್ಡದಮಠ ಅವರ ಸ್ಮರಣೆಗೆ ನಿರ್ಮಿಸಿದ ಬಸ್ ತಂಗುದಾಣವನ್ನು ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT