ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಬೆಳವಣಿಗೆ

ವಾಚಕರ ವಾಣಿ
Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ನಕಲಿ ಶೈಕ್ಷಣಿಕ ದಾಖಲೆ ಸಲ್ಲಿಸಿದ್ದ 40 ಅಭ್ಯರ್ಥಿಗಳ ಆಯ್ಕೆಯನ್ನು ರದ್ದು ಮಾಡಿರುವುದು ಮಹತ್ವದ ಬೆಳವಣಿಗೆ. 
 
ಈ ರೀತಿ ಕ್ರಮ ಜರುಗಿಸಿರುವುದು ಬಹುಶಃ ಇದೇ ಮೊದಲು. ಪಿಎಚ್.ಡಿ. ಮೂಲಕ ನೇಮಕಗೊಂಡ ಅಭ್ಯರ್ಥಿಗಳ ಮಹಾಪ್ರಬಂಧದ ಶೀರ್ಷಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಆಕ್ಷೇಪ ಸಲ್ಲಿಕೆಗೆ ಅವಕಾಶ ನೀಡಬೇಕು. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2009ರಲ್ಲಿ ನಡೆದ ಉಪನ್ಯಾಸಕರ ನೇಮಕಾತಿಯಲ್ಲೂ, ಬೇರೆ ರಾಜ್ಯದ ದೂರ ಶಿಕ್ಷಣ ಕೇಂದ್ರಗಳ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅನೇಕ ಮಹಾಪ್ರಬಂಧಗಳಲ್ಲೂ ನಕಲುಗಳಿದ್ದುದು  ಕಂಡುಬಂದಿತ್ತಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲಿಲ್ಲ.
 
ಉನ್ನತ ಶಿಕ್ಷಣ ನೀಡುವ ಮಹತ್ವದ ಹುದ್ದೆಗೆ ಈ ರೀತಿ ವಾಮಮಾರ್ಗದಿಂದ ನೇಮಕಗೊಂಡರೆ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹೇಗೆ ಸಾಧ್ಯ? ಹೀಗಾಗಿ ಇಂತಹ ನೇಮಕಾತಿಗಳಲ್ಲಿ ಎಲ್ಲ ಅರ್ಹತಾ ಪರೀಕ್ಷೆಗಳ ಪ್ರಮಾಣಪತ್ರಗಳನ್ನೂ ಕೂಲಂಕಷವಾಗಿ ಪರೀಶೀಲಿಸಿ ನೇಮಕಾತಿ ಆದೇಶ ನೀಡಬೇಕು.
-ಡಾ. ಬಸವರಾಜ್ ಎನ್. ಅಕ್ಕಿ, ಧಾರವಾಡ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT