ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳ ಪ್ರಮುಖರಿಂದ ಬಿರುಸಿನ ಪ್ರಚಾರ

Last Updated 5 ಜನವರಿ 2017, 9:21 IST
ಅಕ್ಷರ ಗಾತ್ರ

ಕೊಪ್ಪಳ:  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯ ಪ್ರಯುಕ್ತ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಸವರಾಜ ನಿಂಗಪ್ಪ ಈಶ್ವರ ಗೌಡ್ರು ಪರ ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಪ್ರಚಾರ ನಡೆಸಿದರು. ಇರಕಲ್‌ಗಡಾ ಜಿ.ಪಂ. ಸದಸ್ಯ ರಾಮಣ್ಣ ಚೌಡ್ಕಿ ಮುಖಂಡರಾದ ರಾಮಣ್ಣ, ಶರಣಪ್ಪ, ಬಸವರಾಜ, ರವಿಚಂದ್ರ ಮಾಲಿಪಾಟೀಲ್ ಇದ್ದರು.

ಕಾಂಗ್ರೆಸ್ ಪ್ರಚಾರ : ಎಪಿಎಂಸಿ ಚುನಾವಣೆ ಸಂಬಂಧಿಸಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಿಟ್ನಾಳ ಕ್ಷೇತ್ರದ ಅಭ್ಯರ್ಥಿ ಜಿ.ವಿಶ್ವನಾಥರಾಜು ಪರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ ಅವರು ಅಗಳಕೇರಾ ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿದರು. ನಗರದ ಎಪಿಎಂಸಿಗೆ ಕಾಂಗ್ರೆಸ್‌ ಬೆಂಬಲಿತ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನೂ 11 ಕ್ಷೇತ್ರಗಳಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇವಣ್ಣ ಮೆಕಾಳಿ, ನಾಗರಾಜ ಕಿನ್ನಾಳ, ಶಿವುಬಾಬು, ಪ್ರಭುರಾಜ ಪಾಟೀಲ, ನಾಗರಾಜ ಪಟವಾರಿ, ಹುಲುಗಪ್ಪ ಗಡಾದ, ಶರಣಪ್ಪ ಆನೆಗುಂದಿ, ಸೋಮಲಿಂಗಪ್ಪ ಚಳಗೇರಿ, ವೆಂಕಟೇಶ ಭೋವಿ, ತಿಪ್ಪಣ್ಣ ಭೋವಿ, ಗುಡದಪ್ಪ ಕತ್ತಿ, ಇಕ್ಬಾಲಸಾಬ, ಶ್ರೀನಿವಾಸ ಮುರಾರಿ, ಕುಮಾರಸ್ವಾಮಿ ಭೂಸನೂರಮಠ, ವಿರುಪಾಕ್ಷಪ್ಪ ಬಿಸನಳ್ಳಿ, ಜಂಬಣ್ಣ ಹೂಗಾರ ಇದ್ದರು.

ಯಲಬುರ್ಗಾ ವರದಿ : ಸಚಿವ ಬಸವರಾಜ ರಾಯರೆಡ್ಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮಾಡಿರುವ ಕೆಲಸಗಳು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರೀರಕ್ಷೆ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ. ಈಶಪ್ಪ ಅಟಮಾಳಗಿ ಹೇಳಿದರು. ಬುಧವಾರ ಹುಲೇಗುಡ್ಡ ಗ್ರಾಮದಲ್ಲಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡ ರೇವಣಪ್ಪ ಸಂಗಟಿ ಚಿಕ್ಕಮ್ಯಾಗೇರಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಹುಲೇಗುಡ್ಡ, ಲಗಳೂರ, ತಲ್ಲೂರ, ಸಾಲಭಾವಿ ಹಾಗೂ ವಜ್ರಬಂಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷದ ಕಟ್ಟಾ ಅಭಿಮಾನಿಗಳಿದ್ದಾರೆ ಎಂದರು.  ಅಭ್ಯರ್ಥಿ ಬಸವರಾಜ ಕುಡಗುಂಟಿ ಮಾತನಾಡಿ, ರೈತಾಪಿ ವರ್ಗದ ಕಷ್ಟ ಕಾರ್ಪಣ್ಯಗಳಿಗೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಮುಟ್ಟಿಸುವ ಕೆಲಸ  ಮಾಡುವುದಾಗಿ ತಿಳಿಸಿದರು.

ಹಿರಿಯ ಮುಖಂಡ ಗದೆ್ದೆಪ್ಪ ಚಿಲವಾಡಗಿ, ತಾಪಂ ಸದಸ್ಯ ಓಬಳೆಪ್ಪ ಕುಲಕರ್ಣಿ, ಪಟ್ಟಣ ಪಂಚಾಯಿತಿ ಸದಸ್ಯ ವಸಂತರಾವ್‌ ಕುಲಕರ್ಣಿ, ಮಲ್ಲೇಶಗೌಡ ಮಾಲಿಪಾಟೀಲ, ಶರಣಪ್ಪ ಅರಕೇರಿ, ಗದ್ದೆಯ್ಯ ಕಡಗುಂಟಿ, ಅಚ್ಚಪ್ಪ ನಾಯಕ, ಶರಣಪ್ಪ ಕುರಿ, ಕರಿಯಪ್ಪ ಗುರಿಕಾರ, ಹಂಪಯ್ಯ ಹಿರೇಮಠ, ಪರಸಪ್ಪ ನಾಯಕ ಇದ್ದರು.

ಕನಕಗಿರಿ ವರದಿ:  ಈ ಕ್ಷೇತ್ರದ ಎಪಿಎಂಸಿ ಕೃಷಿಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿ ಹುಸೇನಸಾಬ ಗೊರಳ್ಳಿ ಅವರ ಪರವಾಗಿ ಬುಧವಾರ ಕರಡಿಗುಡ್ಡ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸಂತಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಸದಸ್ಯ ಶರಣಬಸವ ಭತ್ತದ, ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಆನಂದ ಕಂದಗಲ್, ಲಿಂಗರಾಜ ಪೂಜಾರ ಇದ್ದರು.

ಬಿಜೆಪಿ ಪ್ರಚಾರ:  ಕನಕಗಿರಿ ಎಪಿಎಂಸಿ ಕೃಷಿಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯಥರ್ಿ ದೇವಪ್ಪ ತೋಳದ ಅವರು ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ಮಾಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ದೊಡ್ಡಯ್ಯಸ್ವಾಮಿ ಅರವಟಗಿಮಠ, ಮಹಾಂತೇಶ ಸಜ್ಜನ್, ವಾಗೀಶ ಹಿರೇಮಠ ಮಾತನಾಡಿದರು. ವಿವಿಧ ಘಟಕದ ಪದಾಧಿಕಾರಿಗಳು ಇದ್ದರು.

ಕಾರಟಗಿ ವರದಿ: ಪಟ್ಟಣದ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ಜ. 12ರಂದು ನಡೆಯಲಿದೆ. 12 ಕ್ಷೇತ್ರಗಳಿಗೆ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿ ಬಹುತೇಕ ಕಡೆ ಇದೆ.

ಆಯ್ಕೆ ಬಯಸಿರುವ ಅಭ್ಯರ್ಥಿಗಳ ಪ್ರಚಾರ ಭರಾಟೆ ಬುಧವಾರ ಜೋರಾಗಿ ನಡೆದಿತ್ತು. ಉಭಯ ಪಕ್ಷಗಳ ಬೆಂಬಲಿತರಿಂದ ಪ್ರಚಾರ ಕಂಡುಬಂತು. ಅಭ್ಯರ್ಥಿಗಳು ಮತದಾರರನ್ನು ಒಂದು ಸುತ್ತು ವೈಯಕ್ತಿಕವಾಗಿ ಭೇಟಿ ನೀಡಿ ಮತ ಯಾಚನೆ ಮಾಡಿದ್ದು, ಗುರುವಾರದಿಂದ ಪ್ರಚಾರದ ಭರಾಟೆ ಮತ್ತಷ್ಟು ಜೋರಾಗಲಿದೆ.

ಕರಡೋಣ ಕೃಷಿಕರ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಫಕೀರಪ್ಪ ದಂಜೆಪ್ಪ ಮತ್ತು ಸಣ್ಣ ಗೋವಿಂದಪ್ಪ, ನವಲಿ ಸಾಮಾನ್ಯ ಕೃಷಿಕ ಕ್ಷೇತ್ರದಲ್ಲಿ ವಿರೂಪಣ್ಣ ಕಲ್ಲೂರು, ಹನುಮನಗೌಡ ಬೋಳಪ್ಪ, ಚಳ್ಳೂರು ಕ್ಷೇತ್ರದಿಂದ ಶರಣಪ್ಪ ನಾಗೋಜಿ, ಸಣ್ಣೆಪ್ಪ ಈಶ್ವರಪ್ಪ, ಬೇವಿನಾಳ ಕ್ಷೇತ್ರದಲ್ಲಿ ತಿರುಪತೆಪ್ಪ ಮತ್ತು ಕಲ್ಲನಗೌಡ ಮಧ್ಯೆ ನೇರ ಸ್ಫರ್ಧೆ ಏರ್ಪಟ್ಟಿದೆ.

ಕಾರಟಗಿ ಕೃಷಿಕರ ಕ್ಷೇತ್ರದಲ್ಲಿ ಶಶಿಧರಗೌಡ, ಚನ್ನಪ್ಪ, ಶರಣಪ್ಪ ವೀರಪ್ಪ, ರಾಘವೇಂದ್ರರಾವ್ ಮತ್ತು ಧರ್ಮರಾಜ ಸುದ್ದಿ ನಡುವೆ ಪೈಪೋಟಿ ಏರ್ಪಟ್ಟಿದೆ. ಹುಳ್ಕಿಹಾಳ ಕೃಷಿಕರ ಎಸ್‌ಟಿ ಮೀಸಲು ಕ್ಷೇತ್ರದಿಂದ ಸುರೇಶ ನಾಡಿಗೇರ, ಮಂಜುನಾಥ ಬಾದನಟ್ಟಿ, ಗುಂಡೂರ ಕೃಷಿಕರ ಮಹಿಳಾ ಕ್ಷೇತ್ರದಲ್ಲಿ ಅಕ್ಕಮಹಾದೇವಿ ಗಿರಿಯಪ್ಪ ಮುಸಾಲಿ ಮತ್ತು ಲಕ್ಷ್ಮವ್ವ ದೊಡ್ಡಬಸಪ್ಪ ಮಧ್ಯೆ ಸ್ಪರ್ಧೆ ಇದೆ.

ಸಿದ್ದಾಪುರ ಕ್ಷೇತ್ರದಲ್ಲಿ ಬಸವರಾಜ, ಶರಣಪ್ಪ, ರಾಮಕೃಷ್ಣ ವೀರಸ್ವಾಮಿ, ಯರಡೋಣಾ ಕ್ಷೇತ್ರದಿಂದ ಮಲ್ಲಮ್ಮ ಹೊಸಮನಿ, ಲಿಂಗಮ್ಮ ಗೋನಾಳ, ತಿಮ್ಮಾಪುರ ಕ್ಷೇತ್ರದಲ್ಲಿ ಹನುಮಂತಪ್ಪ ಮುಕ್ಕಣ್ಣ, ಗಂಗಾಧರ ಮಧ್ಯೆ, ಮುಸ್ಟೂರು ಕೃಷಿಕರ ಕ್ಷೇತ್ರದಲ್ಲಿ ಈಶ್ವರಗೌಡ ವೀರಭದ್ರಗೌಡ ಮತ್ತು ಸೋಮಶೇಖರಗೌಡ ಮತ್ತು ಹೇಮರಾಜ ನಡುವೆ ಪೈಪೋಟಿ ಏರ್ಪಟ್ಟಿದೆ. ಕಾರಟಗಿ ವರ್ತಕರ ಕ್ಷೇತ್ರದಲ್ಲಿ ನಾಗರಾಜ ಅರಳಿ ಮತ್ತು ಬಿ. ಶರಣಯ್ಯಸ್ವಾಮಿ ಮಧ್ಯೆ ನೇರ ಸ್ಪರ್ಧೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT