ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ: ಅಬ್ಬರದ ಪ್ರಚಾರ

ಕಣದಲ್ಲಿ 151 ಅಭ್ಯರ್ಥಿಗಳು; 3.27 ಲಕ್ಷ ಮತದಾರರು: ಹೊಳೆಆಲೂರ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರು
Last Updated 5 ಜನವರಿ 2017, 10:23 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಚುನಾವಣೆಗೆ ಇನ್ನು 4 ದಿನ ಬಾಕಿ ಉಳಿ ದಿದ್ದು, ಕಣದಲ್ಲಿರುವ 151 ಅಭ್ಯರ್ಥಿ ಗಳು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಡಿ.26ಕ್ಕೆ ಮತದಾರರ ಪಟ್ಟಿ ಅಂತಿಮ ಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 3,27,769 ಅರ್ಹ ಮತದಾರರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮತದಾರರು ಮತ್ತು ಮತಗಟ್ಟೆಗಳ ಸಂಖ್ಯೆ ಹೆಚ್ಚಿದೆ.

ಒಟ್ಟು ಮತದಾರರಲ್ಲಿ 71,094 ಮಹಿಳಾ ಮತದಾರರಿದ್ದಾರೆ. ಇವರ ಮೂರು ಪಟ್ಟು ಅಂದರೆ 2.56 ಲಕ್ಷ ಪುರುಷ ಮತದಾರರಿದ್ದಾರೆ. ಹೀಗಾಗಿ ಕೃಷಿಕರ ಕ್ಷೇತ್ರಗಳಲ್ಲಿ ಪುರುಷ ಮತದಾರರೇ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ರೋಣ ಗರಿಷ್ಠ: ರೋಣ ತಾಲೂಕು ಹೊಳೆಆಲೂರಿನ ಎಪಿಎಂಸಿ ಗರಿಷ್ಠ ಸಂಖ್ಯೆಯ ಮತದಾರರನ್ನು ಹೊಂದಿದೆ. ಇಲ್ಲಿ 1.3 ಲಕ್ಷ ಮತದಾರರಿದ್ದಾರೆ. ನರಗುಂದ ಎಪಿಎಂಸಿ ಕನಿಷ್ಠ ಎಂದರೆ 35,493 ಮತದಾರರನ್ನು ಹೊಂದಿದೆ.

ಗದಗ ಎಪಿಎಂಸಿ ವ್ಯಾಪ್ತಿಯಲ್ಲಿ ಕಳೆದ ಬಾರಿ 60 ಸಾವಿರ ಇದ್ದ ಮತದಾರರ ಸಂಖ್ಯೆ ಈ ಬಾರಿ ಒಟ್ಟು 77329ಕ್ಕೆ ಏರಿಕೆಯಾಗಿದೆ. ಒಟ್ಟು ಮತದಾರರಲ್ಲಿ 57479 ಪುರುಷರು, 19902 ಮಹಿಳೆಯರು ಇದ್ದಾರೆ. ಇವರಲ್ಲಿ ಪರಿಷಿಷ್ಟ ಜಾತಿಗೆ ಸೇರಿದ ಮತದಾರ ಸಂಖ್ಯೆ 6340. ಪರಿಷಿಷ್ಟ ಪಂಗಡಕ್ಕೆ ಸೇರಿದವರು 3754 ಮತ್ತು ಸಾಮಾನ್ಯ ವರ್ಗದ ಮತದಾರರು 2510. ಮುಂಡರಗಿ ಎಪಿಎಂಸಿ ವ್ಯಾಪ್ತಿಯಲ್ಲಿ 48,840 ಹಾಗೂ ಲಕ್ಷ್ಮೇಶ್ವರ ಎಪಿಎಂಸಿ ವ್ಯಾಪ್ತಿಯಲ್ಲಿ 62,348 ಮತದಾರರು ಇದ್ದಾರೆ.

ಪಹಣಿ ಪತ್ರದಲ್ಲಿ ಹೆಸರಿದ್ದವರು ಅರ್ಹರು: ಆಯಾ ಎಪಿಎಂಸಿಯ ಕೃಷಿಕರ ಕ್ಷೇತ್ರದಲ್ಲಿ ಜಮೀನು ಹೊಂದಿರುವ ರೈತರು  ಮತದಾನ ಮಾಡಲು ಅರ್ಹರು. ಪಹಣಿ (ಉತಾರ) ಪತ್ರದಲ್ಲಿ ಅವರು ಹೆಸರು ಇರಬೇಕಾದದ್ದು ಕಡ್ಡಾಯ. ಎಪಿಎಂಸಿ ಮತದಾರರಿಗೆ ಪ್ರತ್ಯೇಕ ಗುರುತಿನ ಚೀಟಿ ನೀಡಿರುವುದಿಲ್ಲ. ಪಟ್ಟಿಯಲ್ಲಿ ಹೆಸರಿರುವ ಮತದಾರರು ಚುನಾವಣೆ ಆಯೋಗದ ಗುರುತಿನ ಚೀಟಿ ಸೇರಿದಂತೆ ಇತರೆ 26 ದಾಖಲೆ ಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಮತ ಚಲಾಯಿಸಬಹುದು ಎನ್ನುತ್ತಾರೆ ಚುನಾವಣೆ ವಿಭಾಗದ ಸಿಬ್ಬಂದಿ.

ಅಬ್ಬರದ ಪ್ರಚಾರ: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ, ಪಕ್ಷಗಳ ಸ್ಥಳೀಯ ಮುಖಂಡರು ತೆರಳಿ ಮತ ಯಾಚಿಸುತ್ತಿದ್ದಾರೆ. ಮತದಾರರ ಮನಗೆಲ್ಲಲು ಎಲ್ಲ ಬಗೆಯ ತಂತ್ರ ಬಳಕೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT