ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ತರುವ ಕುದುರೆ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಕುದುರೆಗಳ ಚಿತ್ರವಿದ್ದರೆ ಶ್ರೇಯಸ್ಸು ಎನ್ನುವ ನಂಬಿಕೆ ಬಹಳ ದಿನಗಳಿಂದಲೂ ಇದೆ. ಮನೆಯ–ಮನಸಿನ ಒಳಿತಿಗೆ ಎಷ್ಟು ಕುದುರೆಯ  ಚಿತ್ರ ಅಥವಾ ಪುತ್ಥಳಿ ಹೇಗಿರಬೇಕು, ಎಲ್ಲಿರಬೇಕು, ಅವು ಯಾವ ಕಡೆ ಮುಖ ಮಾಡಿರಬೇಕು, ಯಾವ ಗೋಡೆಗೆ ಹಾಕಬೇಕು ಎಂಬಿತ್ಯಾದಿ ವಿಷಯಗಳ ಕುರಿತ ಪುಟ್ಟ ಮಾಹಿತಿ ಇಲ್ಲಿದೆ.

*ನಾಗಾಲೋಟದಲ್ಲಿ ಓಡುತ್ತಿರುವ ಏಳು ಕುದುರೆಗಳಿರುವ ಚಿತ್ರಕಲೆಗೆ ವಾಸ್ತು ಪ್ರಕಾರ ಹೆಚ್ಚಿನ ಮಹತ್ವವಿದೆ. ಇದು ಯಶಸ್ಸು ಮತ್ತು ಅಧಿಕಾರವನ್ನು ಸಂಕೇತಿಸುತ್ತದೆ. ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಯಶಸ್ಸಿಗೆ ಇದು ಪುಷ್ಟಿ ನೀಡುತ್ತದೆ ಎನ್ನುವ ನಂಬಿಕೆ ಇದೆ.

*ನಾಗಾಲೋಟದಲ್ಲಿ ಓಡುತ್ತಿರುವ ಏಳು ಕುದುರೆಗಳ ಚಿತ್ರವನ್ನು ಲಿವಿಂಗ್‌ ರೂಮಿನಲ್ಲಿ ಹಾಕಬೇಕು. ಕುದುರೆಗಳು ಮುಖ ಮನೆಯ ಬಾಗಿಲಿನಿಂದ ಹೊರಗೆ ಹೋಗುವಂತೆ ಇರಬಾರದು.

*ಮನೆಯ ದಕ್ಷಿಣ ವಲಯ ಯಶಸ್ಸು ಮತ್ತು ಖ್ಯಾತಿಗೆ ಸಂಬಂಧಿಸಿರುವುದರಿಂದ ಅದನ್ನು ದಕ್ಷಿಣ ಭಾಗಕ್ಕೇ ಹಾಕಬೇಕು. ಒಂದು ವೇಳೆ ಅದಕ್ಕೆ ಅವಕಾಶ ಇಲ್ಲದೇ ಇದ್ದಲ್ಲಿ ಪೂರ್ವ ಭಾಗದ ಗೋಡೆಯನ್ನು ಪರಿಗಣಿಸಬಹುದು.

*ಈ ಚಿತ್ರ ಅಥವಾ ಪೇಂಟಿಂಗ್‌ನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಚಿತ್ರದಲ್ಲಿರುವ ಕುದುರೆಗಳ ಮುಖದ ಮೇಲಿನ ಭಾವವನ್ನೂ ಪರಿಗಣಿಸಬೇಕಾಗುತ್ತದೆ. ಅಂದರೆ ಕುದುರೆಗಳು ಕೋಪದಲ್ಲಿ ಇರಬಾರದು. ಮುಖದಲ್ಲಿ ಸಂತಸದ ಛಾಯೆ ಇರಬೇಕು.

*ಕಿಟಕಿ, ಬಚ್ಚಲು ಅಥವಾ ಶೌಚಾಲಯಕ್ಕೆ ಮುಖ ಮಾಡಿ ಈ ಚಿತ್ರವನ್ನು ಹಾಕಬೇಡಿ.

*ಚಿತ್ರದಲ್ಲಿರುವ ಎಲ್ಲಾ ಕುದುರೆಗಳೂ ಒಂದೇ ದಿಕ್ಕಿನತ್ತ ಓಡುವಂತಿರಬೇಕು, ಒಂದೊಂದು ಕುದುರೆಗಳು ಒಂದೊಂದು ದಿಕ್ಕಿಗೆ ಓಡುವಂತಿರಬಾರದು.
*ಲೋಹದ, ಮರದ, ಸೆರಾಮಿಕ್ ಪ್ರತಿಮೆಗಳ ಅಥವಾ ಚಿತ್ರಕಲೆಯ ರೂಪದಲ್ಲಿ ಮಾತ್ರ ಕುದುರೆಗಳನ್ನು ಪರಿಗಣಿಸಬೇಕು.

*ಬೆನ್ನಿನ ಮೇಲೆ ಚಿನ್ನದ ಗಟ್ಟಿಯನ್ನು ಹೊತ್ತು ನಿಂತಿರುವ ಕಂಚಿನ ಜೋಡಿ ಕುದುರೆಗಳನ್ನು ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಇವು ಯಶಸ್ಸು, ಖ್ಯಾತಿ, ಗೆಲುವು ಮತ್ತು ಗೌರವವನ್ನು ಪ್ರತಿನಿಧಿಸುತ್ತವೆ.

*ನಾಣ್ಯಗಳ ರಾಶಿ ಮತ್ತು ನಿಧಿಯ ಮೇಲೆ ಕಾಲೂರಿ ನಿಂತಿರುವ ಕುದುರೆಯು ಸಂಪತ್ತು, ಉತ್ತಮ ಅದೃಷ್ಟ, ಖ್ಯಾತಿ, ಸ್ಥಿರತೆ ಮತ್ತು ಹರ್ಷವನ್ನು  ಪ್ರತಿನಿಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT