ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಂತಾಮಣಿ’ ನೆನಪಿನಲ್ಲಿ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ನನ್ನ ಜೀವನದ ಬಹುತೇಕ ಭಾಗವನ್ನು ಚಿಂತಾಮಣಿಯಲ್ಲಿ ಕಳೆದಿದ್ದೇನೆ. ನನ್ನ ಬೇರುಗಳು ಇದ್ದುದ್ದು ಅಲ್ಲಿಯೇ. ಅಲ್ಲಿ ಗೆಳೆಯರ ಬಳಗವನ್ನು ಕಟ್ಟಿಕೊಂಡು ಸಾಂಸ್ಕೃತಿಕ ವಾತಾವರಣವನ್ನೂ ರೂಪಿಸಿದೆ. ಆ ಊರಿನ ನೆನಪಿಗಾಗಿಯೇ ನಾನು ಪದ್ಮನಾಭನಗರದಲ್ಲಿರುವ ನಮ್ಮ ಮನೆಗೆ ‘ಚಿಂತಾಮಣಿ’ ಎಂಬ ಹೆಸರು ಇರಿಸಿದ್ದೇನೆ.

ಚಿಂತಾಮಣಿಯನ್ನು ಬಿಟ್ಟುಬರುತ್ತೇನೆಂಬ ಯೋಚನೆಯೂ ನನಗಿರಲಿಲ್ಲ. ಆದರೆ, ಅನಿವಾರ್ಯವಾಗಿ ಇಲ್ಲಿಗೆ ಬರಬೇಕಾಯಿತು. ಚಿಂತಾಮಣಿಯನ್ನು ಬಿಟ್ಟು ಬರಬೇಕಾದರೆ ಏನನ್ನೋ ಕಳೆದುಕೊಳ್ಳುವ ಭಾವ ನನಗುಂಟಾಯಿತು. ಆದರೆ, ಚಿಂತಾಮಣಿಯ ಆ ಬೇರನ್ನು ಕಿತ್ತು ಈಗ ಇಲ್ಲಿ ನೆಟ್ಟಿದ್ದೇನೆ ಎಂಬ ಸಮಾಧಾನವಿದೆ.

ಅಲ್ಲಿನ ಎಲ್ಲಾ ನೆನಪುಗಳನ್ನೂ ಚಿಂತಾಮಣಿ ಎಂಬ ಹೆಸರಿನ ಮೂಲಕ ಇಲ್ಲಿಗೆ ತಂದಿರುವೆ. ಹಾಗಾಗಿ, ಈ ಮನೆಯಲ್ಲಿರುವ ನಾನಿನ್ನೂ ಚಿಂತಾಮಣಿಯಲ್ಲಿಯೇ ಇರುವೆ ಎಂದು ಭಾಸವಾಗುತ್ತದೆ. ನನ್ನೊಳಗಿನ ಚಿಂತಾಮಣಿ ಇನ್ನೂ ಹಸಿರಾಗಿದೆ.
-ಬಿ.ಆರ್.ಲಕ್ಷ್ಮಣರಾವ್, ಕವಿ

(ನಿಮ್ಮ ಮನೆಯ ಹೆಸರೇನು? ಆ ಹೆಸರು ಇಡಲು ಕಾರಣವೇನು? ಹೆಸರ ಹಿಂದಿನ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಇಮೇಲ್– metropv@prajavani.co.in ವಾಟ್ಸ್‌ಆ್ಯಪ್– 9513322931)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT