ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ‘ಹಾಫ್ ಗರ್ಲ್‌ಫ್ರೆಂಡ್‌’

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

‘ಆಶಿಕಿ–2’ ಹುಡುಗಿ ಶ್ರದ್ಧಾಕಪೂರ್  ಈಗ ಹಾಫ್‌ ಗರ್ಲ್ ಫ್ರೆಂಡ್ ಆಗಿದ್ದಾರೆ. ಯಾರಿಗೆ ಅನ್ನುವ ಕುತೂಹಲವೇ? ನಿರ್ದೇಶಕ ಮೋಹಿತ್ ಸೂರಿ ಅವರ ‘ಹಾಫ್‌ ಗರ್ಲ್ ಫ್ರೆಂಡ್‌’ ಚಿತ್ರದಲ್ಲಿ ಅರ್ಜುನ್ ಕಪೂರ್‌ಗೆ ಶ್ರದ್ಧಾ ಹಾಫ್‌ ಗರ್ಲ್ ಫ್ರೆಂಡ್‌ ಆಗಿದ್ದಾರೆ.

ಪಕ್ಕಾ ಇಂಡಿಯನ್‌ ರೊಮ್ಯಾಂಟಿಕ್ ಕಾಮಿಡಿ ಆಗಿರುವ ಈ ಚಿತ್ರದಲ್ಲಿ ಶ್ರದ್ಧಾ ರಿಯಾ ಸೊಮನಿ ಪಾತ್ರದಲ್ಲಿ ನಟಿಸಿದ್ದಾರೆ. ‘ರಿಯಾ ಪಾತ್ರ ನನ್ನ ಸಿನಿಮಾ ಕೆರಿಯರ್‌ನಲ್ಲೇ ಕಷ್ಟಕರವಾದ ಪಾತ್ರ. ಇದುವರೆಗೆ ನಾನು ಇಂಥ ಪಾತ್ರ ಮಾಡಿಲ್ಲ’ ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.


ಸ್ಲಂ ಹುಡುಗ ಮತ್ತು ಶ್ರೀಮಂತ ಹುಡುಗಿಯೊಬ್ಬಳ ನಾಟಕೀಯ ಪ್ರೇಮದ ಕಥೆಯನ್ನೊಳಗೊಂಡಿರುವ ಈ ಚಿತ್ರ ಚೇತನ್ ಭಗತ್ ಅವರ ‘ಹಾಫ್ ಗರ್ಲ್‌ಫ್ರೆಂಡ್’ ಕೃತಿಯನ್ನಾಧರಿಸಿದೆ. ಚಿತ್ರದ ಚಿತ್ರೀಕರಣ ಭಾಗಶಃ ಪೂರ್ಣಗೊಂಡಿದ್ದು, ಮುಂದಿನ ವರ್ಷ  ಮೇ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಅಂದಹಾಗೆ ಹಾಫ್ ಗರ್ಲ್‌ ಫ್ರೆಂಡ್ ಆಗಲು ಈ ಹಿಂದೆ ‘ಕ್ವೀನ್’ ಖ್ಯಾತಿಯ ಕಂಗನಾ ರೌನತ್ ಕೂಡಾ ಆಸಕ್ತಿ ತೋರಿದ್ದರು. ಆದರೆ, ಈ ಅದೃಷ್ಟ ಶ್ರದ್ಧಾ ಪಾಲಿಗೆ ಒಲಿದಿದೆ. ಹೊಸ ಚಿತ್ರದ ಕುರಿತು ಟ್ವೀಟ್ ಮಾಡಿರುವ ಶ್ರದ್ಧಾ, ಚಿತ್ರೀಕರಣದ ಸಮಯದಲ್ಲಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT