ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂ... ಕಾಲಿಗಲ್ಲ ಬಾಯಿಗೆ!

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಕಾಲಿಗೆ ಹಾಕಿಕೊಳ್ಳುವ ಶೂಗಳು ನಮಗೆ ಗೊತ್ತು. ಬಾಯಿಗೆ ಹಾಕಿಕೊಳ್ಳುವ ಶೂಗಳ ಬಗ್ಗೆ ಗೊತ್ತೆ? ಈ ಚಿತ್ರದಲ್ಲಿ ಇಷ್ಟು ಚೆನ್ನಾಗಿ ಕಾಣುತ್ತಿರುವ ಈ ಶೂಗಳನ್ನು ಡಾರ್ಕ್‌ ಚಾಕಲೇಟ್‌ನಿಂದ ತಯಾರಿಸಲಾಗಿದೆ.

ಮಾಮೂಲಿ ಶೂಗಳ ಗಾತ್ರವನ್ನೇ ಈ ಚಾಕಲೇಟ್ ಶೂಗಳೂ ಹೋಲುತ್ತವೆ. ಇವಕ್ಕೆ ಜೆಂಟಲ್‌ಮೆನ್‌ ರೇಡಿಯನ್ಸ್ ಎಂದು ಹೆಸರಿಡಲಾಗಿದೆ.
ಜಪಾನಿನ ಒಸಕಾದಲ್ಲಿರುವ ರಿಹ್ಗಾ ರಾಯಲ್‌ ಹೋಟೆಲ್‌ ಚಾಕ್ಲೆಟ್‌ ಬೋಟಿಕ್ ಎಂಬ  ಸಂಸ್ಥೆಯೊಂದು ಈ ಚಾಕಲೇಟ್‌ ಶೂಗಳನ್ನು ತಯಾರಿಸಿದೆ.

ತಿಳಿ ಕಂದು ಬಣ್ಣ, ಕೆಂಪುಬಣ್ಣ ಮತ್ತು ಗಾಢ ಕಂದುಬಣ್ಣದಲ್ಲಿ ಈ ಶೂ ಚಾಕಲೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸೋಲ್‌, ಲೇಸ್‌, ಲೆಯರ್ಸ್‌, ಶೂ ಹಾರ್ನ್‌ ಹೀಗೆ  ಎಲ್ಲ ಭಾಗಗಳೂ ಸಂಪೂರ್ಣ ಚಾಕಲೇಟ್‌ಮಯ.

ಒಂದೊಂದು ಶೂ ತಯಾರಿಸಲು ಒಂದೊಂದು ದೊಡ್ಡ ಜಾರಿನಷ್ಟು ಚಾಕಲೇಟ್‌ ದ್ರಾವಣವನ್ನು ಬಳಸಲಾಗಿದೆ. ಈ ಶೂಗಳು ಲೆದರ್ ಶೂಗಳಿಗಿಂತ ದುಬಾರಿ. ಒಂದು ಜೊತೆ ಶೂ ಬೆಲೆ ₹17,500.

ಪ್ರಾಯೋಗಿಕವಾಗಿ ಕೇವಲ 9ಜತೆ ಶೂಗಳನ್ನು ಮಾತ್ರ ಸಂಸ್ಥೆ ತಯಾರಿಸಿದೆ. ಅವೂ ಅಲ್ಪ ಕಾಲದಲ್ಲೇ ಬಿಕರಿಯಾಗಿವೆ. ವ್ಯಾಲೆಂಟೈನ್ಸ್‌ ಡೇ (ಪ್ರೇಮಿಗಳ ದಿನಾಚರಣೆ) ವೀಕ್‌ (ಫೆಬ್ರುವರಿ 7ರಿಂದ 17) ಪ್ರಯುಕ್ತ ಮತ್ತೆ ತಯಾರಿ ಆರಂಭಿಸಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT