ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘರ್ಜಿಸಲು ಸಿದ್ಧವಾದ ಬಾಹುಬಲಿ–2

Last Updated 7 ಜನವರಿ 2017, 9:47 IST
ಅಕ್ಷರ ಗಾತ್ರ

ಭಾರತದ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದ ಚಿತ್ರ ‘ಬಾಹುಬಲಿ’. ಇದರ ಮುಂದುವರಿದ ಭಾಗವಾಗಿ ‘ಬಾಹುಬಲಿ–2’ ಚಿತ್ರೀಕರಣವನ್ನು ಪೂರ್ಣಗೊಳಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಬಾಹುಬಲಿ–2  ಎಸ್‌ಎಸ್‌ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದಿದ್ದು, ಹೆಚ್ಚು ದಿನಗಳ ಕಾಲ ‘ಬಾಹುಬಲಿ’ ಬಳಗದಲ್ಲಿ ಗುರುತಿಸಿಕೊಂಡಿದ್ದು ನಟ ಪ್ರಭಾಸ್. ಕಳೆದ ಮೂರೂವರೆ ವರ್ಷಗಳಿಂದ ಇನ್ನಿತರೆ ಚಿತ್ರಗಳಲ್ಲಿ ತೊಡಗಿಕೊಳ್ಳದೆ, ‘ಬಾಹುಬಲಿ’ಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಚಿತ್ರದಲ್ಲಿ ರಾಣಾ ದಗ್ಗುಬಾಟಿ, ನಟಿ ಅನುಷ್ಕಾ ಶೆಟ್ಟಿ, ನಟಿ ತಮನ್ನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಪ್ರಭಾಸ್‌ ಬಗ್ಗೆ ಟ್ವೀಟ್‌ ಮಾಡಿರುವ ನಿರ್ದೇಶಕ ರಾಜಮೌಳಿ ‘ಚಿತ್ರದ ಮೂರುವರೆ ವರ್ಷಗಳ ಮಹಾಪಯಣ ಪೂರ್ಣಗೊಂಡಿದೆ. ಈ ಪ್ರಾಜೆಕ್ಟ್‌ ಮೇಲೆ ನಂಬಿಕೆ ಇಟ್ಟ ನಿನಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

‘ಬಾಹುಬಲಿ 2’ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ದು, ಏಪ್ರಿಲ್‌ 28ರಂದು ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT