ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರನೊಳಗಿನ ಆಟಗಾರ!

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ವರ್ಚಸ್ಸಿನ ಕರ್ನಾಟಕದ ರಾಜಕಾರಣಿ ಎಚ್‌.ಡಿ. ದೇವೇಗೌಡ ಅವರದು ವರ್ಣರಂಜಿತ ವ್ಯಕ್ತಿತ್ವವಾದರೂ, ಅವರದು ಫೋಟೊಜೆನಿಕ್‌ ಮುಖವೇನಲ್ಲ. ಸದಾ ಗಂಭೀರವಾಗಿರುವ ಗೌಡರ ‘ಮುಖಮುದ್ರೆ’ಯಲ್ಲಿ ಹಾಗೂ ಆಂಗಿಕದಲ್ಲಿ ಕದಲಿಕೆಗಳನ್ನು ಕಾಣುವುದು ಕಡಿಮೆ.

ಗದ್ದಕ್ಕೆ ಕೈ ನೀಡಿ ಯಾವುದೋ ಧ್ಯಾನದಲ್ಲಿ ಕಣ್ಣುಮುಚ್ಚಿದ ಅವರ ಫೋಟೊಗಳು ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದಿದೆ. ಆದರೆ, ಇಲ್ಲಿನ ಛಾಯಾಚಿತ್ರ ಗೌಡರೊಳಗಿನ ಹೊಸ ಮುಖವನ್ನು ಪರಿಚಯಿಸುವಂತಿದೆ. ಹೋರಾಟಗಾರ ದೇವೇಗೌಡ ಎಲ್ಲರಿಗೂ ಗೊತ್ತು, ಆಟಗಾರ ಗೌಡರನ್ನು ಎಷ್ಟು ಜನ ಬಲ್ಲರು? ಬೆಂಗಳೂರಿನ ‘ಪ್ರೆಸ್‌ ಕ್ಲಬ್‌’ ಆವರಣದಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ ಉದ್ಘಾಟಿಸುವ ಸಂದರ್ಭದಲ್ಲಿ (1995ರ ಮಾರ್ಚ್‌ 7ರಂದು) ಗೌಡರ ಆಟದ ಭಂಗಿಯಿದು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT