ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಮಿಕನಿಗೆ ಪ್ರಾಪ್ತಿಯಾದ ಸ್ವರ್ಗ

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

-ಕುಬೇರ ನೀರ್ಥಡಿ

ಪುಸ್ತಕಗಳು ನಮ್ಮ ಬದುಕಿನ ದಾರಿ ತೋರುವ ಜ್ಞಾನದೀಪ, ನಮ್ಮ ಸಂಸ್ಕೃತಿಯ ಪ್ರತಿರೂಪ ವಾದ ಪುಸ್ತಕ ಸಂಸ್ಕೃತಿಯ ಪ್ರಸರಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಪ್ರಭಾವಿ ಸಂವಹನ ಮಾಧ್ಯಮವಾಗಿ, ತಲೆಮಾರುಗಳ ನಡುವಿನ ಸೇತುವೆಯಾಗಿ ಯಾವತ್ತಿಗೂ ಜೊತೆಗಿರುವ ಸ್ನೇಹಿತ. ಅನೇಕ ಹಾಳೆಗಳನ್ನು ಕೂಡಿಸಿ ಒಂದು ಕಡೆ ಸೇರಿಸಿ ಹಿಂದೆ ಮುಂದೆ ರಕ್ಷಾ ಹೊದಿಕೆಗಳನ್ನು ಹಾಕಿದ ಲಿಖಿತ ಅಥವಾ ಮುದ್ರಿತ ರೂಪದಲ್ಲಿರುವುದೇ ಪುಸ್ತಕ.

ಅತ್ಯಂತ ಪ್ರಾಚೀನ ಪುಸ್ತಕ ಪ್ರಕಾರಗಳೆಂದರೆ ಮೆಸಪೊಟೋಮಿಯಾದ ಜೆಡಿ ಫಲಕಗಳು, ಈಜಿಪ್ಟಿನ ಪ್ಯಾಪಿರಸ್‌್ ಸುರುಳಿಗಳು, ಬೊಂಬು ಮತ್ತು ಮರದ ತೆಳು ಪಟ್ಟಿಗಳ ಪುಸ್ತಕ, ಮಧ್ಯಯುಗದ ಚರ್ಮ ಪತ್ರಗಳು. 

ಕ್ರಿ.ಶ. 400ರಲ್ಲಿ ಮುದ್ರಣದಲ್ಲಿ ಕಪ್ಪು ಶಾಯಿಯ ಬಳಕೆ ಪ್ರಾರಂಭವಾಯಿತು, 1439 ರಲ್ಲಿ ಗುಟನ್‌ ಬರ್ಗ್‌ ಮುದ್ರಣ ಯಂತ್ರದ ಶೋಧನೆ ನಂತರ ಮುದ್ರಣ ಮಾಧ್ಯಮದಲ್ಲಿ ದೊಡ್ಡ ಕ್ರಾಂತಿಯಾಗಿ ಪುಸ್ತಕ ರೂಪ ತಾಳಿತು. 1817ರಲ್ಲಿ ವಿಲಿಯಂ ಕೇರಿಯರವರ ‘ಎ ಗ್ರಾಮರ್‌ ಆಫ್‌ ದಿ ಕರ್ನಾಟಕ ಲಾಂಗ್ವೇಜ್‌’, ಕನ್ನಡದಲ್ಲಿ ಪ್ರಪ್ರಥಮ ಮುದ್ರಿತ ಪುಸ್ತಕ.

ಪ್ರಕಟಗೊಂಡ ಎಲ್ಲಾ ಪುಸ್ತಕಗಳನ್ನು ಕೊಳ್ಳಲು ಆಗುವುದಿಲ್ಲ ಮತ್ತು ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆಯನ್ನು ನೀಗಿಸಲು ವಿದ್ಯುನ್ಮಾನ ಪುಸ್ತಕಗಳನ್ನು ಹೊರ ತರಲಾಯಿತು.

ಭೌತಿಕ ರೂಪದ ಕೆಲವು ಪುಸ್ತಕ ಗಳನ್ನು ಡಿಜಿಟಲೀಕರಣ ಮಾಡಿದರೆ, ಮತ್ತೆ ಕೆಲವನ್ನು ಇ–ಪುಸ್ತಕಗಳ ರೂಪದಲ್ಲಿ ಪ್ರಕಟಿಸ ಲಾಯಿತು. ಇವುಗಳನ್ನು ಓದಲೆಂದೇ ‘ಇ–ಬುಕ್‌ ರೀಡರ್‌ ಸಾಧನ’ಗಳು ಹೊರಬಂದವು. ಇತಂಹ  ಕೆಲವು  ಆ್ಯಪ್‌ಗಳನ್ನು  ನೋಡೋಣ.

Amazon Kindle:  ಅಮೇಜಾನ್‌ ಕಿಂಡಲ್‌ ಇ–ಬುಕ್ಸ್‌ ಕಿರುತಂತ್ರಾಂಶವು  ಅಮೇಜಾನ್‌  ಕಂಪೆನಿ  ಅವರದು, ಇದರಲ್ಲಿ ವಿವಿಧ ವಿಷಯದ ಲಕ್ಷಾಂತರ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು (ಮ್ಯಾಗಜೀನ್) ಅಳವಡಿಸಲಾಗಿದೆ. ಇಲ್ಲಿ ಅನೇಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇವೆ. ಕೆಲವು ಪುಸ್ತಕಗಳನ್ನು ಉಚಿತವಾಗಿ ಓದಬಹದು.

ಅಷ್ಟೇ ಅಲ್ಲದೆ  ಪುಸ್ತಕಗಳನ್ನು ಈ ಆ್ಯಪ್‌ ಮೂಲಕವೇ ಕೊಂಡುಕೊಳ್ಳ ಬಹುದು. ಓದುವಾಗ ಯಾವುದೋ ಪದದ ಅರ್ಥ ಗೊತ್ತಿಲ್ಲದಿದ್ದರೆ  ಪದಕೋಶ (ಡಿಕ್ಷನರಿ) ಮೂಲಕ ಅರ್ಥ ತಿಳಿಯಬಹುದು. ನಿಮಗೆ ಬೇಕಾದ ಪುಸ್ತಕವನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್‌ ಸಂಖ್ಯೆ ಅಥವಾ ಇ–ಮೇಲ್‌ ಮೂಲಕ ಸದಸ್ಯತ್ವ ಪಡೆದು ಬಳಸಬಹುದು.

Google Play Books: ಗೂಗಲ್‌ ಪ್ಲೇಬುಕ್ಸ್‌ ಗೂಗಲ್‌ ಸಂಸ್ಥೆಯ ಕಿರುತಂತ್ರಾಂಶವಾಗಿದೆ. ಈ ಆ್ಯಪ್‌ನಲ್ಲಿ ಲಕ್ಷಾಂತರ ಇ–ಪುಸ್ತಕಗಳು ಲಭ್ಯ. ಅನೇಕ ವಿಷಯಗಳಿಗೆ ಸಂಬಂಧಿಸಿದ ಹೊಸ–ಹೊಸ ಪುಸ್ತಕಗಳು, ನ್ಯೂಯಾರ್ಕ್‌ ಟೈಮ್ಸ್‌ನ ಉತ್ತಮ ಮಾರಾಟವಾದ ಮತ್ತು ಇತ್ತೀಚೆಗೆ ಪ್ರಕಟಗೊಂಡ ಪುಸ್ತಕಗಳು ಇದರಲ್ಲಿ ಸಿಗುತ್ತವೆ. ಎಲ್ಲವು ಉಚಿತವಾಗಿ ಇವುಗಳನ್ನು ಡೌನ್‌ಲೋಡ್‌ ಮಾಡಿ ಕೊಳ್ಳಬಹುದು. 

Kobo eBooks -Read Books: ಟೊರಾಂಟೊ ಮೂಲದ ರಾಕ್ಟೇನ್‌ ಕೋಬೋ ಇಕ್‌ ಸಂಸ್ಥೆಯ ಆ್ಯಪ್‌ ಆಗಿದ್ದು ಇದರಲ್ಲಿ ಹಲವು ವಿಷಯಗಳನ್ನು ಒಳಗೊಂಡ 50 ಲಕ್ಷ  ಪುಸ್ತಕ ಗಳು ಮತ್ತು ನಿಯತಕಾಲಿಕಗಳು ಸಿಗುತ್ತವೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಸುಮಾರು 10 ಲಕ್ಷ ಉಚಿತವಾದ ಪುಸ್ತಕಗಳು ಇದರಲ್ಲಿ  ಲಭ್ಯವಿವೆ.

ನಿಮ್ಮ ಇ–ಮೇಲ್‌ ವಿಳಾಸದೊಂದಿಗೆ ಸದಸ್ಯತ್ವ ಪಡೆದುಕೊಂಡು ಇ–ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದು. ಉಚಿತವಲ್ಲದ ಪುಸ್ತಕಗಳನ್ನು ಪಡೆಯಲು ಹಣ ಪಾವತಿ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

GuteBooks Free Ebooks: ಇ–ಪುಸ್ತಕ ಗಳಿಗೆ ಹೆಸರುವಾಸಿಯಾದ ಪ್ರಾಜೆಕ್ಟ್‌ ಗುಟನ್‌ ಬರ್ಗ್‌, ಗೂಗಲ್‌ ಬುಕ್‌ ,ಓಪನ್‌ಲೈಬ್ರರಿ ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಏಳು ಲಕ್ಷದಷ್ಟು ಶಾಸ್ತ್ರೀಯ ಪುಸ್ತಕಗಳು ಉಚಿತವಾಗಿ ಓದಲು ಈ ಆ್ಯಪ್‌ನಲ್ಲಿ ಲಭ್ಯ. ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಹೀಗೆ  FBReader, Favorite Book Reader, 50000 Free eBooks & AudioBooks, Books for Kindle for Free ಮುಂತಾದ ಅನೇಕ ಕಿರುತಂತ್ರಾಂಶಗಳು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯ. ಅವುಗಳ ಗುಣಮಟ್ಟದ ಆಧಾರದ ಮೇಲೆ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ  ಎಲ್ಲ ಆ್ಯಪ್‌ಗಳನ್ನು ಕಿಸೆಯಲ್ಲಿರುವ ಸಂಚಾರಿ ಗ್ರಂಥಾಲಯ ಎಂದು ಕರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT