ಸೂಪರ್‌ ಪವರ್‌ ಭಾರತ, ನಾಗರಿಕ ಬ್ರಿಟನ್

ನಾನು ಈ ಬರಹವನ್ನು ಒಂದು ಕಾಲಿನ ಮೂಳೆ ಮುರಿದುಕೊಂಡು ಇಂಗ್ಲೆಂಡಿನ ಹರ್ಟ್‌ಫೋರ್ಡ್‌ಶೈರ್‌ನಿಂದ ಬರೆಯುತ್ತಿದ್ದೇನೆ. ನಾನು ಬೌಲಿಂಗ್ ಮಾಡುತ್ತಿದ್ದಾಗ ನನ್ನ ಎಡ ಕಾಲು ಒಳಮುಖವಾಗಿ ಮಡಚಿ ಹಿಮ್ಮಡಿಗೆ ಪೆಟ್ಟಾಯಿತು. ಪೆಟ್ಟು ಗಂಭೀರವಾಗಿಯೇ ಆಗಿದೆ ಎಂಬುದು ತಕ್ಷಣ ಗೊತ್ತಾಯಿತು. ಆದರೆ ಕಾಲು ಉಳುಕಿರಬೇಕು, ಅದು ತಾನಾಗಿಯೇ ಗುಣವಾಗುತ್ತದೆ ಎಂದು ಭಾವಿಸಿ ಸುಮ್ಮನಾದೆ. ಎರಡು ದಿನಗಳ ನಂತರವೂ ಕಾಲು ಬಲೂನಿನಂತೆ ಊದಿಕೊಂಡಿದ್ದರಿಂದ, ವೈದ್ಯರ ಬಳಿ ತೋರಿಸಿ ಏನಾಗಿದೆ ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದೆ.

ನಾನು ಈ ಬರಹವನ್ನು ಒಂದು ಕಾಲಿನ ಮೂಳೆ ಮುರಿದುಕೊಂಡು ಇಂಗ್ಲೆಂಡಿನ ಹರ್ಟ್‌ಫೋರ್ಡ್‌ಶೈರ್‌ನಿಂದ ಬರೆಯುತ್ತಿದ್ದೇನೆ. ನಾನು ಬೌಲಿಂಗ್ ಮಾಡುತ್ತಿದ್ದಾಗ ನನ್ನ ಎಡ ಕಾಲು ಒಳಮುಖವಾಗಿ ಮಡಚಿ ಹಿಮ್ಮಡಿಗೆ ಪೆಟ್ಟಾಯಿತು. ಪೆಟ್ಟು ಗಂಭೀರವಾಗಿಯೇ ಆಗಿದೆ ಎಂಬುದು ತಕ್ಷಣ ಗೊತ್ತಾಯಿತು. ಆದರೆ ಕಾಲು ಉಳುಕಿರಬೇಕು, ಅದು ತಾನಾಗಿಯೇ ಗುಣವಾಗುತ್ತದೆ ಎಂದು ಭಾವಿಸಿ ಸುಮ್ಮನಾದೆ. ಎರಡು ದಿನಗಳ ನಂತರವೂ ಕಾಲು ಬಲೂನಿನಂತೆ ಊದಿಕೊಂಡಿದ್ದರಿಂದ, ವೈದ್ಯರ ಬಳಿ ತೋರಿಸಿ ಏನಾಗಿದೆ ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದೆ.


ನಾನು ಲಂಡನ್ನಿನ ಹಾರ್ಲಿಸ್ಟ್ರೀಟ್‌ನ ವೈದ್ಯರೊಬ್ಬರಿಗೆ ಕರೆ ಮಾಡಿದೆ. ‘ನಿಮ್ಮನ್ನು ಮಧ್ಯಾಹ್ನದ ನಂತರ ಕಾಣುತ್ತೇನೆ. ಆದರೆ ಎಕ್ಸ್‌ರೇ ವರದಿ ಸಿಗುವುದು ಮಾರನೆಯ ದಿನ’ ಎಂದು ವೈದ್ಯರು ತಿಳಿಸಿದರು. ಕಾಯಲು ನಾನು ಸಿದ್ಧನಿರಲಿಲ್ಲ. ಹಾಗಾಗಿ ಸಮೀಪದ ಆಸ್ಪತ್ರೆಯಲ್ಲಿನ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋದೆ.

‘ನಾನು ಬೆಂಗಳೂರಿನವನು. ಇನ್ನು ಕೆಲವು ದಿನಗಳಲ್ಲಿ ನಾನು ಎಲ್ಲಿಗೋ ಹೋಗಬೇಕು’ ಎಂದು ಆಸ್ಪತ್ರೆಯವರಿಗೆ ತಿಳಿಸಿದೆ. ಅಲ್ಲಿನ ಸಿಬ್ಬಂದಿ ನನ್ನ ಹೆಸರು ದಾಖಲಿಸಿಕೊಂಡು, ಇತರ ಒಂದು ಡಜನ್ ಜನರ ಜೊತೆ ಕಾಯಲು ಸೂಚಿಸಿದರು. ಅಲ್ಲಿನ ಕೆಲವರ ಸ್ಥಿತಿ ನನ್ನ ಸ್ಥಿತಿಗಿಂತ ಕೆಟ್ಟದಾಗಿತ್ತು. ಅಂದಾಜು ಅರ್ಧ ಗಂಟೆಯ ನಂತರ, ನರ್ಸ್‌ ಒಬ್ಬರನ್ನು ಕಾಣುವಂತೆ ನನಗೆ ಸೂಚಿಸಿದರು.

ಅವರು ನನ್ನ ಕಾಲಿನ ಊತ ನೋಡಿ, ಎಕ್ಸ್‌ರೇ ತೆಗೆಸಿಕೊಳ್ಳಲು ನನ್ನನ್ನು ಕಳಿಸಿದರು. ಎಕ್ಸ್‌ರೇ ತೆಗೆದ ನಂತರ, ನನ್ನ ಕಾಲಿನ ಮೂಳೆ ಮುರಿದಿರುವುದಾಗಿ ಹೇಳಿದರು. ‘ಈ ಸ್ಥಿತಿಯಲ್ಲೇ ನಡೆಯುತ್ತಿದ್ದೀರಾ’ ಎಂದು ಅಲ್ಲಿನ ಸಿಬ್ಬಂದಿ ಪ್ರಶ್ನಿಸಿದಾಗ, ‘ಹೌದು’ ಎಂದೆ. ಆಗ ಅವರು ಗಾಲಿಕುರ್ಚಿ ತರಿಸಿ, ನನ್ನನ್ನು ಅದರಲ್ಲಿ ಕೂರಿಸಿ ಪಕ್ಕದ ಕಟ್ಟಡದಲ್ಲಿದ್ದ ವೈದ್ಯರ ಬಳಿ ಕರೆದೊಯ್ದರು. ಅಲ್ಲಿ ಮತ್ತೆ ಅರ್ಧ ಗಂಟೆ ಕಾದ ನಂತರ, ನನಗೆ ಎಕ್ಸ್‌ರೇ ವರದಿ ತೋರಿಸಿದರು (ಅಲ್ಲಿನ ಬಹುತೇಕ ಅಥವಾ ಹಲವು ವೈದ್ಯರು ಭಾರತೀಯರು). ನನ್ನ ಹಿಮ್ಮಡಿಯ ಸುತ್ತ ಸುರುಳಿಯಾಕಾರದಲ್ಲಿ ಮೂಳೆ ಮುರಿದಿತ್ತು.

‘ನಿಮ್ಮ ಕಾಲಿಗೆ ಪಟ್ಟು ಕಟ್ಟಬೇಕು. ಅದು ಸಿದ್ಧವಾಗಲು ಇನ್ನರ್ಧ ಗಂಟೆ ಕಾಯಬೇಕು’ ಎಂದು ನನಗೆ ವೈದ್ಯರು ಹೇಳಿದರು. ಕೆಲವು ನಿಮಿಷಗಳ ನಂತರ ಮಹಿಳೆಯೊಬ್ಬರು ನನ್ನ ಹೆಸರು ಕೂಗಿದರು, ನನ್ನ ಬೂಟುಗಳ ಗಾತ್ರ ಎಷ್ಟು ಎಂದು ಕೇಳಿದರು. 11 ನಂಬರ್‌ನ ಬೂಟುಗಳು ನನ್ನವು ಎಂದು ತಿಳಿಸಿದೆ. ಆ ಮಹಿಳೆ ನನ್ನ ಕಾಲಿಗೆ ಪಟ್ಟು ತರಲು ಹೋದರು. ಆಕೆ ತಂದ ಪಟ್ಟು, ಪ್ಲಾಸ್ಟಿಕ್ಕಿನ ದೊಡ್ಡ ಬೂಟಿನಂತೆ ಇತ್ತು. ಅದರ ಹೊರಗೆ ಗಟ್ಟಿಯಾದ ಚಿಪ್ಪು, ಮೃದುವಾದ ಒಳಹೊದಿಕೆ ಇತ್ತು. ಅದಕ್ಕೆ ಗಾಳಿ ಊದಿ, ಅದು ನನ್ನ ಕಾಲಿಗೆ ಸರಿಹೊಂದುವಂತೆ ಮಾಡಬಹುದಿತ್ತು.

ಅದರ ಜೊತೆ ಎರಡು ದೊಡ್ಡ ಕಾಲುಚೀಲಗಳೂ ಇದ್ದವು. ಅದನ್ನು ಹಾಕಿಕೊಳ್ಳುವುದು ಹೇಗೆ ಎಂಬುದನ್ನು ನರ್ಸ್‌, ತಾಳ್ಮೆಯಿಂದ ಹಾಗೂ ಕಾಳಜಿಯಿಂದ ಹೇಳಿಕೊಟ್ಟರು. ‘ಎಕ್ಸ್‌ರೇ ವರದಿಯ ಸಿ.ಡಿ. ಕೊಟ್ಟಿದ್ದಾರೆಯೇ’ ಎಂದು ಅವರು ನನ್ನನ್ನು ಪ್ರಶ್ನಿಸಿದರು. ‘ಕೊಟ್ಟಿಲ್ಲ’ ಎಂದು ತಿಳಿಸಿದೆ. ಆ ನರ್ಸ್‌ ನನ್ನ ಜೊತೆ ಮೊದಲಿನ ಕಟ್ಟಡಕ್ಕೆ ಬಂದು, ಸಿ.ಡಿ. ಕೊಟ್ಟರು. ಕಟ್ಟಡದಿಂದ ಹೊರಗೆ ಹೋಗುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು. ಇದಕ್ಕೆ ಮತ್ತೆ ಐದು ನಿಮಿಷ ಹಿಡಿಯಿತು.

ಇದ್ಯಾವುದಕ್ಕೂ ನಾನು ಹಣ ಕೊಡಬೇಕಾಗಿ ಬರಲಿಲ್ಲ. ನೋಂದಣಿ, ವೈದ್ಯರ ಸಲಹೆ, ಎಕ್ಸ್‌ರೇ ವರದಿ ಮತ್ತು ಕಾಲಿನ ಪಟ್ಟು ಉಚಿತವಾಗಿದ್ದವು. ಆಸ್ಪತ್ರೆಯಲ್ಲಿ ನಾನು ಅಂದಾಜು ಎರಡು ಗಂಟೆ ಸಮಯ ಕಳೆಯಬೇಕಾಯಿತು.

ತಮ್ಮಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್‌) ಎಷ್ಟು ಕೆಟ್ಟದ್ದಾಗಿದೆ ಎಂದು ಬ್ರಿಟಿಷ್ ಪತ್ರಿಕೆಗಳು ಯಾವಾಗಲೂ ವರದಿ ಬರೆಯುತ್ತಿರುತ್ತವೆ. ಹಾಗಾಗಿ ನಾನು ಈ ಬರಹ ಬರೆದೆ. ಶಸ್ತ್ರಚಿಕಿತ್ಸೆಗಳಿಗೆ ಜನರು ದಿನಗಟ್ಟಲೆ ಕಾಯಬೇಕಾಗುತ್ತದೆ ಎಂದೂ ಅಲ್ಲಿನ ಪತ್ರಿಕೆಗಳು ಬರೆಯುತ್ತವೆ. ಎನ್‌ಎಚ್‌ಎಸ್‌ ಅಲ್ಲಿನ ಎಲ್ಲ ಪ್ರಜೆಗಳಿಗೆ ಉಚಿತ. ಅಲ್ಲದೆ, ಅಪಘಾತ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳು ಪ್ರವಾಸಿಗರಿಗೂ ಉಚಿತ ಇರುವಂತಿದೆ.  ಇದು ನಾಗರಿಕತೆಯ ಲಕ್ಷಣ ಎಂದು ನನಗೆ ಅನಿಸುತ್ತದೆ.

ನನ್ನ ಅನುಭವ ಹಾಗೂ ಬ್ರಿಟಿಷ್ ಮೂಲದವರ ಅನುಭವ ಒಂದೇ ಆಗಿರಲಿಕ್ಕಿಲ್ಲ ಎಂಬುದನ್ನು ನಾನು ಒಪ್ಪುವೆ. ಸರ್ಕಾರದ ಆರೋಗ್ಯ ಯೋಜನೆಯು ಎಷ್ಟು ಉತ್ತಮವಾಗಿದೆ ಎಂಬುದನ್ನು ತುರ್ತು ಚಿಕಿತ್ಸಾ ಘಟಕ ನೋಡಿ ತೀರ್ಮಾನಿಸುವುದು ಸರಿಯಾಗಲಿಕ್ಕಿಲ್ಲ. ಆದರೆ ವ್ಯವಸ್ಥೆಯೊಂದು ಉತ್ತಮವಾಗಿ ಕೆಲಸ ಮಾಡುತ್ತಿರುವ ಕಾರಣ ನನಗೆ ಅಲ್ಲಿ ಉತ್ತಮ ಚಿಕಿತ್ಸೆ ದೊರೆತಿದ್ದಿರಬೇಕು.

ಅಲ್ಲಿ ಹಣ ಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ನನ್ನಲ್ಲಿ ಅಪರಾಧಿ ಭಾವ ಮೂಡಿತು. ಆದರೆ, ನಾನು ಭಾರತದಲ್ಲಿ ಪಾವತಿಸಿದ ತೆರಿಗೆ ಮೂಲಕ, ಸಾವಿರಾರು ಜನ ವೈದ್ಯಕೀಯ ಶಿಕ್ಷಣ ಪಡೆದು, ಬ್ರಿಟನ್ನಿಗೆ ವಲಸೆ ಬಂದಿರಬಹುದು ಎಂದು ಭಾವಿಸಿದೆ.

ಎನ್‌ಎಚ್‌ಎಸ್‌ಗಾಗಿ ಬ್ರಿಟನ್‌ ವಾರ್ಷಿಕ ₹ 9.3 ಲಕ್ಷ ಕೋಟಿ ಖರ್ಚು ಮಾಡುತ್ತದೆ. ಅಂದರೆ ಪ್ರತಿ ವ್ಯಕ್ತಿಗೆ ಅಂದಾಜು ₹ 1.5 ಲಕ್ಷ ಖರ್ಚು ಮಾಡಿದಂತೆ ಆಗುತ್ತದೆ. ನಮ್ಮ ಕೇಂದ್ರ ಸರ್ಕಾರದ ವಾರ್ಷಿಕ ಆರೋಗ್ಯ ಬಜೆಟ್ ಮೊತ್ತ ₹ 33 ಸಾವಿರ ಕೋಟಿ. ಅಂದರೆ ಪ್ರತಿ ನಾಗರಿಕನಿಗೆ ನಾವು ವರ್ಷಕ್ಕೆ ₹ 260 ಖರ್ಚು ಮಾಡುತ್ತಿದ್ದೇವೆ. ನಾವು ಬಡ ದೇಶ ಎಂಬುದು ನಿಜ. ಆದರೆ, ಈ ಬಡ ದೇಶ ಕಳೆದ ವರ್ಷ 36 ಯುದ್ಧ ವಿಮಾನಗಳನ್ನು ಖರೀದಿಸಲು ₹ 59 ಸಾವಿರ ಕೋಟಿ ವಿನಿಯೋಗಿಸಿತು, ಈ ವರ್ಷ ಬುಲೆಟ್ ರೈಲಿಗಾಗಿ ₹ 99 ಸಾವಿರ ಕೋಟಿ ವೆಚ್ಚ ಮಾಡಲಿದೆ.

ಜನರ ಆರೋಗ್ಯವನ್ನು ಅಲಕ್ಷಿಸಿ, ಇಂಥ ವಸ್ತುಗಳ ಮೇಲೆ ಇಷ್ಟೊಂದು ಹಣವನ್ನು ಖರ್ಚುಮಾಡಲು ಬ್ರಿಟನ್ನಿನ ಜನ ಅವಕಾಶ ಕೊಡುವುದನ್ನು ಯೋಚಿಸಲೂ ಆಗದು. ಆದರೆ, ಭಾರತದ ಮಾಧ್ಯಮಗಳು ಮತ್ತು ಅದರಲ್ಲಿ ನಡೆಯುವ ಚರ್ಚೆಗಳ ಮೇಲೆ ಹಿಡಿತ ಹೊಂದಿರುವ ಮಧ್ಯಮ ವರ್ಗದ ಜನ, ಇಂಥ ಖರ್ಚುಗಳನ್ನು ಬಡಜನರ ಮೇಲೆ ಹೇರುತ್ತಿದ್ದಾರೆ.

ನಮ್ಮಲ್ಲಿ ಸೂಪರ್‌ ಪವರ್‌ ಆಗುವುದು ಎಂದರೆ ಯುದ್ಧ ಮಾಡುವ ಸಾಮರ್ಥ್ಯ ಪಡೆದುಕೊಳ್ಳುವುದು, ಜಪಾನಿ ತಂತ್ರಜ್ಞಾನವನ್ನು ಪ್ರದರ್ಶಿಸುವುದು, ದೊಡ್ಡ ಪ್ರತಿಮೆಗಳನ್ನು ಸ್ಥಾಪಿಸುವುದು. ಆದರೆ ಬ್ರಿಟನ್ನಿನ ಜನರ ಪಾಲಿಗೆ ನಾಗರಿಕರಾಗುವುದು ಎಂದರೆ – ವಿದೇಶಿ ವ್ಯಕ್ತಿಯನ್ನು ಸಹ ಕಾಳಜಿಯಿಂದ ನೋಡಿಕೊಳ್ಳುವ ಸಮರ್ಥ ಸರ್ಕಾರಿ ವ್ಯವಸ್ಥೆಯೊಂದನ್ನು ರೂಪಿಸುವುದು.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

Comments
ಈ ವಿಭಾಗದಿಂದ ಇನ್ನಷ್ಟು
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

ದೂರ ದರ್ಶನ
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

20 Mar, 2018
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

ದೂರ ದರ್ಶನ
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

12 Mar, 2018
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

ದೂರ ದರ್ಶನ
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

5 Mar, 2018
ಗುಜರಾತ್ ಮಾದರಿಯ ಇನ್ನೊಂದು ಮುಖ!

ದೂರ ದರ್ಶನ
ಗುಜರಾತ್ ಮಾದರಿಯ ಇನ್ನೊಂದು ಮುಖ!

26 Feb, 2018

ದೂರ ದರ್ಶನ
ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ...

19 Feb, 2018