ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಶೇ 10ರಷ್ಟು ಮಕ್ಕಳಲ್ಲಿ ಕಲಿಕಾ ನ್ಯೂನತೆ

Last Updated 9 ಜನವರಿ 2017, 4:57 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಲ್ಲಿ ಅಂದಾಜು ಶೇ 10ರಷ್ಟು ಮಕ್ಕಳು ಕಲಿಕಾ ನ್ಯೂನತೆಯಿಂದ ಬಳಲುತ್ತಿದ್ದಾರೆ ಎಂದು ಚಿಕಿತ್ಸಕ ಮನಃಶಾಸ್ತ್ರಜ್ಞೆ ಎಚ್‌.ಎನ್‌.ಆಶಾ ಆತಂಕ ವ್ಯಕ್ತಪಡಿಸಿದರು.

ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಸಂವೇದ ತರಬೇತಿ ಹಾಗೂ ಸಂಶೋಧನಾ ಕೇಂದ್ರ ಏರ್ಪಡಿಸಿದ್ದ ಪೋಷಕರ ಸಭೆ ಹಾಗೂ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.

ಇಂತಹ ಮಕ್ಕಳು ಮಂದಗತಿಯ ಕಲಿಕಾ ಸಾಮರ್ಥ್ಯ ಹೊಂದಿರುವು ದರಿಂದ ಶಾಲೆ ಮತ್ತು ಕುಟುಂಬದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಇದರಿಂದ ಅವರ ವರ್ತನೆಯ ಸಮಸ್ಯೆಗಳು ಹೆಚ್ಚಿ, ಜೀವನದಲ್ಲಿ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ತಿಳಿಸಿದರು.

ಪೋಷಕರು ಮಕ್ಕಳನ್ನು ಗಮನಿಸಬೇಕು. ಮಗು ವಯಸ್ಸಿಗೆ ತಕ್ಕಷ್ಟು ಸಾಮರ್ಥ್ಯ ಹೊಂದಿದೆಯೇ ? ಮಾತ ನಾಡಲು, ಓದಲು, ಬರೆಯಲು ಕಷ್ಟ ಪಡುತ್ತಿದೆಯೇ ? ಎಂದು ತಿಳಿಯಬೇಕು. ಆದರೆ, ಪೋಷಕರು ಮಕ್ಕಳ ಸಮಸ್ಯೆ ಗ್ರಹಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿವರಿಸಿದರು.

‘ಮಗುವಿಗೆ ಒಳ್ಳೆಯ ಸೌಲಭ್ಯ ಒದಗಿಸಿದ್ದೇವೆ. ಆತ ಸಾಧಾರಣಕ್ಕಿಂತ ಹೆಚ್ಚು  ಬುದ್ಧಿಮತ್ತೆ ಹೊಂದಿದ್ದಾನೆ. ಒಳ್ಳೆ ಶಾಲೆ, ಉತ್ತಮ ಕಲಿಕಾ ವಾತಾವರಣ ಎಲ್ಲವೂ ಇದ್ದರೂ ಮಗು ಓದುತ್ತಿಲ್ಲ. ಆತನ ಸೋಮಾರಿತನವೇ ಇದಕ್ಕೆ ಕಾರಣ ಎಂದು ಬಹುತೇಕ ಪೋಷಕರು ಭಾವಿಸುತ್ತಾರೆ. ಬಹಳಷ್ಟು ಮಂದಿ ಮಕ್ಕಳನ್ನು ಶಿಕ್ಷಿಸುತ್ತಾರೆ. ಇದು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಸಂವೇದ ತರಬೇತಿ ಹಾಗೂ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಸುರೇಂದ್ರನಾಥ್ ಪಿ. ನಿಶಾನಿಮಠ್ ಮಾತನಾಡಿ, ಬುದ್ಧಿಮಾಂದ್ಯ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಶಿಕ್ಷಣ ಕೊಡಬಹುದು. ಆದರೆ, ಕಲಿಕೆಯಲ್ಲಿ ಹಿಂದುಳಿದವರಿಗೆ ಉತ್ತಮ ಶಿಕ್ಷಣ ಕೊಡುವುದು ಸವಾಲಿನ ಕೆಲಸ. ಈ ಮಕ್ಕಳು ಬುದ್ಧಿವಂತರಾಗಿರುತ್ತಾರೆ. ಆದರೆ, ಕಲಿಯುವುದು ಇವರಿಗೆ ಸಮಸ್ಯೆ ಎಂದು ತಿಳಿಸಿದರು.

ನರಸಂಬಂಧ, ವಂಶವಾಹಿ ಹಾಗೂ ಸಾಮಾಜಿಕ ಕಾರಣಗಳಿಂದ ಮಕ್ಕಳಲ್ಲಿ ಕಲಿಕೆಯ ಸಮಸ್ಯೆಗಳು ಎದುರಾಗುತ್ತವೆ. ನರಸಂಬಂಧ ಮತ್ತು ವಂಶವಾಹಿ ಸಮಸ್ಯೆಗಳಿಗೆ ಆರಂಭದಲ್ಲೇ ಉತ್ತಮ ಚಿಕಿತ್ಸೆ ಹಾಗೂ ತರಬೇತಿ ನೀಡಿದರೆ ತೊಂದರೆಯನ್ನು ತಕ್ಕಮಟ್ಟಿಗೆ ಸರಿಪಡಿಸಲು ಸಾಧ್ಯವಿದೆ ಎಂದು ಹೇಳಿದರು.

ಸಾಮಾಜಿಕ ಕಾರಣಗಳಿಂದ ಸಮಸ್ಯೆ ಹೆಚ್ಚಳ: ನರಸಂಬಂಧಿ ನ್ಯೂನತೆಯಿಂದ ಕಲಿಕಾ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಟೀಕಿಸುವುದು, ಕುಹಕವಾ ಡುವುದು ಮಾಡಬಾರದು. ಶಾಲೆ ಮತ್ತು ಕುಟುಂಬದಲ್ಲಿ ಅವರಿಗೆ ಪ್ರೋತ್ಸಾಹದಾ ಯಕ ವಾತಾವರಣ ಇರಬೇಕು. ಇಲ್ಲದಿದ್ದರೆ ಸಾಮಾಜಿಕ ಕಾರಣಗಳಿಂದ ಕಲಿಕಾ ನ್ಯೂನತೆ ಹೆಚ್ಚುವ ಅಪಾಯ ವಿರುತ್ತದೆ ಎಂದು ಅವರು  ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪೋಷಕರ ಪ್ರಶ್ನೆಗಳಿಗೆ ನಿವೃತ್ತ ಚಿಕಿತ್ಸಕ ಮನಃಶಾಸ್ತ್ರಜ್ಞ ಡಾ.ಜಿ.ಜಯರಾಮ್‌, ಮನೋವೈದ್ಯ ಡಾ.ರಾಜೀವ್‌ ಸ್ವಾಮಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT