ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನ: ಪ್ರೊ.ವನದುರ್ಗ ಅಧ್ಯಕ್ಷ

Last Updated 9 ಜನವರಿ 2017, 6:27 IST
ಅಕ್ಷರ ಗಾತ್ರ

ಯಾದಗಿರಿ: ಫೆಬ್ರುವರಿ 4, 5 ರಂದು ಸುರ ಪುರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ರಂಗರಾಜ ವನದುರ್ಗ ಆಯ್ಕೆ ಆಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಂಗರಾಜ ವನ ದುರ್ಗ ಪ್ರವಚಕರಾಗಿ, ಉಪ ನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ 31 ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.

ರಂಗರಾಜ ವನದುರ್ಗ ಅವರ 50ಕ್ಕೂ ಹೆಚ್ಚು ಮುಖ್ಯ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕ ಟವಾಗಿವೆ. ಅವರ ಮಾರ್ಗ ದರ್ಶನದಲ್ಲಿ 14  ಸಂಶೋಧ ನಾರ್ಥಿಗಳು ಸಂಶ ೋಧನೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರು ತಿಳಿಸಿದರು.

8 ಮಂದಿ ವಿದ್ಯಾರ್ಥಿಗಳು ಎಂಫಿಲ್‌ ಪದವಿ ಪಡೆದಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ 26 ಕತೆಗಳು, ಕವಿತೆಗಳು ಪ್ರಕಟಗೊಂಡಿವೆ. 16 ವಿಚಾರ ಸಂಕಿರಣಗಳನ್ನು ತಾವೇ ಸಂಘಟಿಸಿದ್ದಾರೆ. ಮೂರು ಸಂಶೋಧನೆಯ ಯೋಜನೆಗಳನ್ನು ಪೂರ್ಣ ಗೊಳಿಸಿದ್ದಾರೆ.

ಹೀಗೆ ವನದುರ್ಗ ಹಲವು ಕ್ಷೇತ್ರಗಳಲ್ಲಿ ದುಡಿದಿರುವುದನ್ನು ಪರಿಗಣಿಸಿ ಕಸಾಪ ಕಾರ್ಯಕಾರಣಿ ಸಭೆ ಅವರ ಆಯ್ಕೆಯನ್ನು ಬೆಂಬಲಿಸಿದೆ’ ಎಂದು ಸಿದ್ದಪ್ಪ ಹೊಟ್ಟಿ ಅವರು ವಿವರಿಸಿದರು.

ಕಸಾಪ ಸ್ವಾಗತ ಸಮಿತಿ ಅಧ್ಯಕ್ಷ ರಾಜಾ ಮದನಗೋಪಾಲ ನಾಯಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಭಾಶ್ಚಂದ್ರ ಕೌಲಗಿ, ಗೌರವ ಕಾರ್ಯದರ್ಶಿ ಪ್ರಕಾಶ ಅಂಗಡಿ, ಗೌರವ ಕೋಶಾಧ್ಯಕ್ಷ ಡಾ.ಎಸ್.ಎಸ್. ನಾಯಕ, ಅಯ್ಯಣ್ಣ ಹುಂಡೆಕಾರ, ಡಾ.ಭೀಮರಾಯ ಲಿಂಗೇರಿ, ವಿ.ಸಿ.ರೆಡ್ಡಿ, ಮಾ.ಪಾ.ಬಸವಂತರಾಯ, ಮಹಾದೇವಪ್ಪ ಅಬ್ಬೆ ತುಮಕೂರ, ನೂರಂದಪ್ಪ, ಭಾಗ್ಯವತಿ ಕೆಂಭಾವಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT