ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯದ ಮಿತಿ; ಸ್ಮಾರಕ ವೀಕ್ಷಣೆಗೆ ಕುತ್ತು

ಹಂಪಿ ಸ್ಮಾರಕಗಳನ್ನು ನೋಡದೇ ಹಿಂತಿರುಗುತ್ತಿರುವ ಶಾಲಾ ಮಕ್ಕಳು, ಪ್ರವಾಸಿಗರು
Last Updated 9 ಜನವರಿ 2017, 7:31 IST
ಅಕ್ಷರ ಗಾತ್ರ
ಹೊಸಪೇಟೆ: ಹಂಪಿ ಪರಿಸರದ ಕೆಲವು ಸ್ಮಾರಕಗಳ ವೀಕ್ಷಣೆಗೆ ನಿರ್ದಿಷ್ಟ ಸಮಯ ನಿಗದಿಪಡಿಸಿರುವ ಕಾರಣ ದೂರದಿಂದ ಬರುವ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಅವುಗಳನ್ನು ನೋಡದೆಯೇ ಹಿಂತಿರುಗುವಂತಾಗಿದೆ.
 
ವಿಜಯ ವಿಠಲ ದೇವಸ್ಥಾನ, ಕಮಲ್‌ ಮಹಲ್‌, ಆನೆ ಸಾಲು ಮಂಟಪ ಹಂಪಿಯ ಅಪರೂಪದ ಸ್ಮಾರಕಗಳಾ ಗಿವೆ. ಹಂಪಿಯಲ್ಲಿ ಏನು ನೋಡದಿದ್ದರೂ ಕನಿಷ್ಠ ಪಕ್ಷ ಈ ಸ್ಮಾರಕಗಳನ್ನು ತಪ್ಪದೇ ನೋಡಬೇಕು ಎಂಬ ಮಾತಿದೆ. ಆದರೆ, ಈ ಮೂರೂ ಸ್ಮಾರಕಗಳು ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ 6ರ ವರೆಗೆ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಬಾಗಿಲು ತೆರೆದಿರುತ್ತವೆ.
 
ನವೆಂಬರ್‌ನಿಂದ ಫೆಬ್ರುವರಿ ಅಂತ್ಯ ದವರೆಗೆ ಹಂಪಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅದರಲ್ಲೂ ವಿದೇಶಗಳಿಂದ ಅಧಿಕ ಸಂಖ್ಯೆಯ ಜನ ಬರುತ್ತಾರೆ. ಇದೇ ಸಂದರ್ಭದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳು ತ್ತದೆ. ರಾಜ್ಯದ ಹಲವು ಭಾಗಗಳಿಂದ ಮಕ್ಕಳನ್ನು ಹಂಪಿಗೆ ಕರೆ ತರಲಾಗುತ್ತದೆ. ದೂರದ ಊರುಗಳಿಂದ ಬರುವವರು ಮಾರ್ಗ ಮಧ್ಯೆ ಬರುವ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತ ಬರುತ್ತಾರೆ. ಕೆಲವೊಮ್ಮೆ ಅವರು ಹಂಪಿಗೆ ಬರುವ ಷ್ಟರಲ್ಲಿ ಸಂಜೆ ಆಗಿರುತ್ತದೆ. ಇದರಿಂದ ಅಪರೂಪದ ಸ್ಮಾರಕಗಳನ್ನು ನೋಡುವು ದರಿಂದ ವಂಚಿತರಾಗಬೇಕಾಗುತ್ತದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅದೆಷ್ಟೊ ಶಾಲಾ ಮಕ್ಕಳು ಹಂಪಿಗೆ ಬಂದರೂ ಸ್ಮಾರಕಗಳನ್ನು ವೀಕ್ಷಿಸದೇ ನಿರಾಸೆ ಅನುಭವಿಸಿ, ಹಿಂತಿರುಗಿದ್ದಾರೆ. ಕೆಲವರು ಸಮೀಪದ ಬೆಟ್ಟಗುಡ್ಡ ಹತ್ತಿ ಸ್ಮಾರಕ ವೀಕ್ಷಿಸಲು ಹರಸಾಹಸ ಪಡು ತ್ತಾರೆ. ಕಳೆದ ಒಂದು ತಿಂಗಳಲ್ಲಿ ವಿಜಯ ವಿಠಲ ದೇವಸ್ಥಾನದ ಬಳಿ ಸಂಜೆ 6ರ ನಂತರ ಈ ದೃಶ್ಯ ಸರ್ವೇ ಸಾಮಾನ್ಯ ಎಂಬಂತಾಗಿದೆ. ಶಾಲಾ ಮಕ್ಕಳು, ಪ್ರವಾ ಸಿಗರು ದೇವಸ್ಥಾನ ಬಳಿಯ ದಿಬ್ಬ ಏರಿ ಕೊಂಡು, ಕಲ್ಲಿನ ರಥ, ಸಪ್ತಸ್ವರ ಮಂಟಪ ಕಣ್ತುಂಬಿಕೊಳ್ಳಲು ಹರಸಾಹಸ ಮಾಡುತ್ತಾರೆ.
 
‘ಬೆಳಗಾವಿಯಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಬಂದಿದ್ದೆವು. ಆದರೆ, ಸಂಜೆ 6ರ ಬಳಿಕ ಯಾರಿಗೂ ಪ್ರವೇಶ ಇಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಇದ ರಿಂದ ಸಮೀಪದ ಬೆಟ್ಟವೇರಿ ಮಕ್ಕಳಿಗೆ ಕಲ್ಲಿನ ರಥ ತೋರಿಸಿದ್ದೇವೆ’ ಎಂದು ಖಾನಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಮೇಶ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
 
ಮಾರ್ಗಮಧ್ಯದಲ್ಲಿ ಬರುವ ಕೆಲವು ಪ್ರವಾಸಿ ಕ್ಷೇತ್ರಗಳನ್ನು ಮಕ್ಕಳಿಗೆ ತೋರಿ ಸುತ್ತ ಹಂಪಿಗೆ ಬರುವಷ್ಟರಲ್ಲಿ ಸಂಜೆ ಆರು ಗಂಟೆ ಆಗಿತ್ತು. ಆರರ ಬಳಿಕ ಸ್ಮಾರಕ ವೀಕ್ಷಿಸಲು ಅವಕಾಶ ಕಲ್ಪಿಸುವುದಿಲ್ಲ ಎಂಬ ವಿಚಾರ ಗೊತ್ತಿರಲಿಲ್ಲ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮಕ್ಕಳಿಗಾದರೂ ಪ್ರವೇಶ ನೀಡಬೇಕು ಎಂದರು.
 
‘ಈ ವರ್ಷ ಮಾತ್ರವಲ್ಲ. ಪ್ರತಿ ವರ್ಷ ಶಾಲಾ ಮಕ್ಕಳು, ಅನ್ಯ ಭಾಗಗಳಿಂದ ಬರುವ ಪ್ರವಾಸಿಗರು ಸ್ಮಾರಕಗಳ ವೀಕ್ಷಣೆ ಯಿಂದ ವಂಚಿತರಾಗುತ್ತಿದ್ದಾರೆ. ಅಪ ರೂಪದ ಸ್ಮಾರಕಗಳಲ್ಲಿ ಒಂದಾಗಿರುವ ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ ನೋಡಲು ನೂರಾರು ಕಿ.ಮೀ ಗಳಿಂದ ಜನ ಬರುತ್ತಾರೆ. ಸೀಸನ್‌ ಸಂದರ್ಭದಲ್ಲಿ ಸ್ಮಾರಕಗಳ ವೀಕ್ಷಣೆಗೆ ಇರುವ ಸಮಯ ವಿಸ್ತರಣೆ ಮಾಡಬೇಕು ಎನ್ನುತ್ತಾರೆ’ ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ್‌ ಬಣಗಾರ್‌.
 
ಮಕ್ಕಳು ಬಹಳ ಅಪೇಕ್ಷೆ ಪಟ್ಟು ಹಂಪಿಗೆ ಬರುತ್ತಾರೆ. ಸಮಯದ ಕಾರಣ ನೀಡಿ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನಿರಾಕರಿಸುವುದು ಸರಿಯಲ್ಲ. ಅನೇಕ ವಿದೇಶಿ ಪ್ರವಾಸಿಗರಿಗೂ ತೊಂದರೆ ಆಗು ತ್ತಿದೆ. ಇತ್ತೀಚೆಗೆ ಫ್ರಾನ್ಸ್‌ನಿಂದ ಬಂದಿದ್ದ ಚಿತ್ರ ಕಲಾವಿದರಿಗೂ ಪ್ರವೇಶ ನೀಡಲಿಲ್ಲ. ಇದರಿಂದ ಅವರು ಸ್ಮಾರಕದ ಹೊರಗೆ ಕುಳಿತುಕೊಂಡು ಚಿತ್ರ ಬಿಡಿಸಿದರು. ಹೊರಗಿನಿಂದ ಬರುವ ಪ್ರವಾಸಿಗರನ್ನು ಈ ರೀತಿ ಅಪಮಾನಿಸಿದರೆ ಹೇಗೆ? ಹಂಪಿ ಬಗ್ಗೆ ಹೊರಗಿನವರಿಗೆ ತಪ್ಪು ಸಂದೇಶ ಹೋಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.
 
‘ನಮ್ಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿ ಇದೆ. ದೂರದಿಂದ ಬರುವ ಪ್ರವಾಸಿಗರು ಸೂಕ್ತ ಯೋಜನೆ ಮಾಡಿಕೊಂಡು ಬರಬೇಕು. ವಿಶೇಷ ವಾಗಿ ಶಾಲಾ ಮಕ್ಕಳನ್ನು ಕರೆತರುವ ಶಾಲೆಯವರು ಸಮಯಕ್ಕೆ ಸರಿಯಾಗಿ ಬರಬೇಕು. ಸಂಜೆ ಬದಲಾಗಿ ಬೆಳಿಗ್ಗೆ ಬಂದರೆ ಎಲ್ಲ ಸ್ಮಾರಕಗಳನ್ನು ವೀಕ್ಷಿಸ ಬಹುದು’ ಎನ್ನುತ್ತಾರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಹಿರಿಯ ಸಹಾಯಕ ಸಂರಕ್ಷಣಾ ಅಧಿಕಾರಿ ತೇಜಸ್ವಿ.
 
‘ವಿಜಯ ವಿಠಲ ದೇವಸ್ಥಾನ ಸೇರಿ ಕೆಲವು ಸ್ಮಾರಕಗಳ ಬಳಿ ಸ್ಮಾರಕ ವೀಕ್ಷಣೆಯ ಸಮಯ ಕುರಿತ ಫಲಕಗಳು ಇಲ್ಲದಿರುವ ಕಾರಣ ಜನರಿಗೆ ತೊಂದರೆ ಆಗುತ್ತಿದೆ. ಆದಷ್ಟು ಶೀಘ್ರ ಎಲ್ಲೆಡೆ ಫಲಕ ಅಳವಡಿಸಲಾಗುವುದು. ಸಮಯದ ಗಡುವು ವಿಸ್ತರಿಸುವ ಕುರಿತು ಅನೇಕರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು  ಮಾಹಿತಿ ನೀಡಿದರು.
 
ವಾಸ್ತವವಾಗಿ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕೊಡಬೇಕು. ಆದರೆ, ಸಿಬ್ಬಂದಿ ಕೊರತೆಯಿಂದ ಇದು ಸಾಧ್ಯವಾ ಗುತ್ತಿಲ್ಲ. ಸದ್ಯ ಬೆಳಿಗ್ಗೆ ಎಂಟುವರೆಯಿಂದ ಸಂಜೆ 6ರ ವರೆಗೆ ಪ್ರವೇಶ ಕಲ್ಪಿಸಲಾ ಗುತ್ತಿದೆ ಎಂದೂ ತಿಳಿಸಿದರು.
 
***
ಶೈಕ್ಷಣಿಕ ಪ್ರವಾಸಕ್ಕಾಗಿ ಬರುವ ಶಾಲಾ ಮಕ್ಕಳು, ದೂರದಿಂದ ಬರುವ ಪ್ರವಾಸಿಗರಿಗೆ ಸಮಯದ ಕಾರಣ ನೀಡಿ ಸ್ಮಾರಕಗಳ ವೀಕ್ಷಣೆಗೆ ಅಡ್ಡಿಪಡಿಸುವುದು ಸರಿಯಲ್ಲ
-ರಮೇಶ
 ಮುಖ್ಯ ಶಿಕ್ಷಕ, ಖಾನಾಪುರ ಸರ್ಕಾರಿ ಶಾಲೆ
 
***
ಎಲ್ಲದಕ್ಕೂ ಒಂದು ಸಮಯ ಇರುತ್ತದೆ. ಎಲ್ಲರೂ ಅದಕ್ಕೆ ಅನುಗುಣವಾಗಿ ನಡೆಯಬೇಕು. ಕೆಲವರಿಗಾಗಿ ನಿಯಮ ಸಡಿಲಿಕೆ ಅಸಾಧ್ಯ
-ತೇಜಸ್ವಿ
ಹಿರಿಯ ಸಹಾಯಕ ಸಂರಕ್ಷಣಾಧಿಕಾರಿ
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT