ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿದೇವಿ ರಥೋತ್ಸವ 12 ರಂದು

ದೇವಿಗೆ 108 ತರದ ತರಕಾರಿ ನೈವೇದ್ಯ
Last Updated 9 ಜನವರಿ 2017, 8:10 IST
ಅಕ್ಷರ ಗಾತ್ರ
ಬಾದಾಮಿ:  ಸಮೀಪದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ಬನಶಂಕರಿ ದೇವಿಯ ರಥೋತ್ಸವವು ಬನದ ಹುಣ್ಣಿಮೆ ದಿನ (ಜ. 12ರಂದು) ಸಡಗರ ಸಂಭ್ರಮದಿಂದ ಜರುಗಲಿದೆ.
 
ಚಾಲುಕ್ಯರ ರಾಜಧಾನಿ ಬಾದಾಮಿಯು ಪ್ರಾಚೀನ ಸಂಸ್ಕೃತಿಯ ಇತಿಹಾಸದಲ್ಲಿ ವಿಶ್ವದಲ್ಲಿಯೇ ಹಿರಿಮೆ ಗರಿಮೆಯನ್ನು ಹೊಂದಿದ ನಾಡಾಗಿದೆ. ಇಲ್ಲಿ ಕುಶಾನರು, ಚಾಲುಕ್ಯರು, ಪಲ್ಲವ, ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯರು, ವಿಜಯನಗರ, ಟಿಪ್ಪು ಸುಲ್ತಾನ ಪಾಳೆಗಾರರು ಮತ್ತು ಪೇಶ್ವೆ ಅರಸರು ಶಿಲ್ಪಕಲೆ, ಸಂಗೀತ, ನಾಟ್ಯ, ಸಾಹಿತ್ಯ, ನೃತ್ಯ ಚಿತ್ರಕಲೆ ಮತ್ತು ಕೋಟೆಗಳ ನಿರ್ಮಾಣದ ಮೂಲಕ ಸರ್ವಧರ್ಮಗಳ ಸಮನ್ವಯಕ್ಕೆ ವಾಸ್ತುಶಿಲ್ಪಗಳು ಸಾಕ್ಷಿಯಾಗಿವೆ.
 
ಪ್ರಾಚೀನ ಬಾದಾಮಿ ದುರ್ಗದ ಒಳಗಿರುವ ಬನಶಂಕರಿಯನ್ನು ಬನದ ಮಹಾಮಾಯೆ, ಬಾದುಬ್ಬೆ, ಬನದಬ್ಬೆ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ ಬಾದಾಮಿ ಪಟ್ಟಣದ ಬೆಳವಣಿಗೆಯಲ್ಲಿ ದುರ್ಗದ ಕಾಲಗರ್ಭದಲ್ಲಿ ಶಾಸನವು ಲಭ್ಯವಿಲ್ಲ. ದುರ್ಗದ ಒಳಗೆ ಮೇಣಬಸದಿ ರಸ್ತೆಯಲ್ಲಿ ಮರಳುಗಲ್ಲಿನ ಭಗ್ನಗೊಂಡ ಬನಶಂಕರಿ ಮೂರ್ತಿಯನ್ನು ದುರ್ಗದ ಒಳಗಿನ ಈಗಿನ ನೇಕಾರ ಓಣಿಯಲ್ಲಿ ಇತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಭಗ್ನಗೊಂಡ ಮೂರ್ತಿಯನ್ನು ಮಲ ಪ್ರಭಾ ನದಿಯಲ್ಲಿ ಬಿಡಲಾಗಿದೆ ಎಂದು ನಿವಾಸಿ ಲಕ್ಷ್ಮಣ ಮೇಲ್ಮನಿ ಹೇಳಿದರು.
 
ಬಾದಾಮಿ ಪಟ್ಟಣದಿದ 5 ಕಿ.ಮೀ. ಸಮೀಪದ ಚೊಳಚಗುಡ್ಡ ಗ್ರಾಮದ ತಿಲಕವನದಲ್ಲಿ ಬನಶಂಕರಿ ಪುಣ್ಯ ಕ್ಷೇತ್ರ ವಿದೆ. ದೇವಾಲಯದ ಎದುರಿಗೆ ವಿಶಾಲ ವಾದ ಹರಿದ್ರಾತೀರ್ಥ ಹೊಂಡವಿದೆ. 
 
ಈಗಿರುವ ಬನಶಂಕರಿ ದೇವಾಲಯ ವನ್ನು ಚಾಲುಕ್ಯರ ಕಾಲದಲ್ಲಿ ಕ್ರಿ.ಶ. 603ರಲ್ಲಿ ಚಾಲುಕ್ಯ ದೊರೆಗಳು ನಿರ್ಮಿಸಿ ದ್ದಾರೆ. ಮೂಲ ಮೂರ್ತಿಯು ಭಗ್ನಗೊಂ ಡಿದ್ದರಿಂದ 17 ನೇ ಶತಮಾನದಲ್ಲಿ ಮಹಾರಾಷ್ಟ್ರದ ಪೇಶ್ವೆ ದೊರೆಯು ಕಪ್ಪು ಕಲ್ಲಿನಲ್ಲಿ ನೂತನವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಸಂಶೋಧಕ ಡಾ. ಆನಂದ ಪೂಜಾರ ಹೇಳಿದರು.
 
ಹರಿದ್ರಾತೀರ್ಥದ ಎದುರಿಗೆ ಭೂ ಗರ್ಭದಲ್ಲಿ ನಿರ್ಮಿಸಿದ ದೇವಾಲಯವು ಬನಶಂಕರಿ ದೇವಾಲಯವೆಂದು ಕರೆ ಯುವರು. ಇದು ರಾಷ್ಟ್ರಕೂಟರ ಕಾಲ ದಲ್ಲಿ ನಿರ್ಮಾಣವಾಗಿದ್ದು ಗರ್ಭ ಗುಡಿ ಯಲ್ಲಿ ಯಾವುದೇ ಮೂರ್ತಿಯು ಈಗಿಲ್ಲ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಜೀರ್ಣೋದ್ಧಾರ ವಾಯಿತೆಂದು ಇತಿಹಾಸ ತಜ್ಞರ ಅಭಿಪ್ರಾಯ.
 
ಜಾತ್ರೆಯ ಮುನ್ನಾ ದಿನ ದೇವಿಗೆ ಅರ್ಚಕರು 108 ತರದ ತರಕಾರಿ ನೈವೇದ್ಯದ (ವನದುರ್ಗಾಂಬಾ ಹೋಮ)  ಪೂಜೆ ಮಾಡುವರು. ಭಕ್ತರು ದೇವಿಗೆ ಪಲ್ಲೇದ ಹಬ್ಬವೆಂದು ಆರಾಧಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ರಾಜ್ಯಗಳಿಂದ ಭಕ್ತರು ಬರುವರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT