ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ದೊಡ್ಡದು’

Last Updated 9 ಜನವರಿ 2017, 8:33 IST
ಅಕ್ಷರ ಗಾತ್ರ
ಘಟಪ್ರಭಾ: ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಅಗಾಧ ಜ್ಞಾನ ಹಾಗೂ ಸಾಮರ್ಥ್ಯವಿದೆ. ಆದರೆ ಜನರು ಈ ಸರ್ಕಾರಿ ಶಾಲೆಗಳ ಬಗ್ಗೆ ಅಸಢ್ಯ ಭಾವ ಹೊಂದಿರುವುದು ವಿಪರ್ಯಾಸದ ಸಂಗತಿ ಎಂದು ಗೋಕಾಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುನಂದಾ. ಎಸ್. ಮೆಳವಂಕಿ ಅಸಮಧಾನ ವ್ಯಕ್ತಪಡಿಸಿದರು. 
 
ಸಮೀಪದ ಕೊಣ್ಣೂರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ವಾರ್ಷಿಕೋತ್ಸವ ಹಾಗೂ ಎಂಟನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
 
ಸದ್ಯದ ಪರಿಸ್ಥಿಯಲ್ಲಿ ಮಕ್ಕಳ, ಪಾಲಕರು ಹಾಗೂ ಶಿಕ್ಷಕರ ಮಧ್ಯೆದ ಧೋರಣೆ ಬಗ್ಗೆ ಅರಿತುಕೊಂಡು ಅದಕ್ಕೆ ಸೂಕ್ತವಾದ ಮಾರ್ಗೋಪಾಯ ಕಂಡು ಕೊಳ್ಳಬೇಕಾಗಿದೆ. ಪಾಲಕರು ಮಕ್ಕಳ ಪಾಲನೆ ಪೋಷಣೆಯಲ್ಲಿ ಸರಿಯಾದ ಕ್ರಮ ಅನುಸರಿಸಿದಲ್ಲಿ  ಮಗು ಉತ್ತಮ ಭವಿಷ್ಯ ಹೊಂದಲು ಸಾಧ್ಯ ಎಂದರು. 
 
ಅನಕ್ಷರಸ್ಥರಿದ್ದರೂ ಕೂಡ ಮಕ್ಕಳಿಗೆ ಶಾಲೆಯಲ್ಲಿ ಕಲಿತ ಅಕ್ಷರಾಭ್ಯಾಸದ ಬಗ್ಗೆ ಕೇಳಿ ತಿಳಿಯುವ ಪರಿಪಾಠ ರೂಢಿಸಿಕೊಳ್ಳಬೇಕು. ಟಿ.ವಿ, ಮೊಬೈಲ್‌ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮನವರಿಕೆ ಮಾಡಿಕೊಡುವುದು ಇಂದಿನ ದಿನಗಳಲ್ಲಿ ಬಹುಮುಖ್ಯವಾಗಿದೆ ಎಂದರು.
 
ಶಿಕ್ಷಣದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಜನಪ್ರತಿನಿಧಿಗಳ ಸಹಾಯ, ಸಹಕಾರ, ಉತ್ಸಾಹ ನಿಜಕ್ಕೂ ಶ್ಲಾಘನೀಯ. ಬಡವರ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದು, ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣದಿಂದಲೆ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸುನಂದಾ ಹೇಳಿದರು.
 
ಪುರಸಭೆ ಅಧ್ಯಕ್ಷೆ ಮಾಲಾ ಬೂದಿಗೊಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಸದಸ್ಯ ಪ್ರಕಾಶ ಕರನಿಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಾರುತಿ ಪೂಜೇರಿ, ಮಾಜಿ ಉಪಾಧ್ಯಕ್ಷ ವಿನೋದ ಕರನಿಂಗ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಬಡೇಸಗೋಳ, ಮುಖ್ಯ ಶಿಕ್ಷಕ ಎಸ್.ಎ.ಹೂವಣ್ಣವರ ಉಪಸ್ಥಿತರಿದ್ದರು. 
 
ಸಮಯ ಪಾಲನೆಗೆ ಸಲಹೆ
ಶಿಸ್ತು, ಸಂಯಮ, ಅಚ್ಚುಕಟ್ಟುತನ, ಸಮಯ ಪಾಲನೆಯ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ದೊರಕಬೇಕು ಎಂದು ಇಲ್ಲಿಯ ಕರ್ನಾಟಕ ಆರೋಗ್ಯ ಧಾಮ (ಕೆಎಚ್‌ಐ) ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ಘನಶ್ಯಾಮ ವೈದ್ಯ ಹೇಳಿದರು.
 
ಆಸ್ಪತ್ರೆಯ ಆವರಣದಲ್ಲಿ ನಡೆದ ಸೇವಾದಳದ 94ನೇ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳು ದೇಶದ ನಿಜವಾದ ಆಸ್ತಿ. ಸೇವಾದಳ ಪೂರಕವಾದ ಶಿಕ್ಷಣ ನೀಡಿ ದೇಶಕ್ಕೆ ಉತ್ತಮ ಭವಿಷ್ಯ ಒದಗಿಸುತ್ತದೆ ಹೇಳಿದರು.  
 
ಮೇಳದಲ್ಲಿ ಗೋಕಾಕ, ಹುಕ್ಕೇರಿ ಮತ್ತು ಚಿಕ್ಕೋಡಿ ತಾಲ್ಲೂಕುಗಳ ಶಾಲೆಗಳ ಭಾರತ ಸೇವಾದಳದ 500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಂದ ಆಕರ್ಷಕ ಪಥ ಸಂಚಲನ ಮತ್ತು ವೈವಿಧ್ಯಮಯ ಶಾರೀರಿಕ ಪ್ರದರ್ಶನಗಳು, ಸಾಮೂಹಿಕ ವ್ಯಾಯಾಮಗಳು ಪ್ರದರ್ಶನಗೊಂಡವು.    
 
ಚುಟುಕು ಸಾಹಿತಿ ಟಿ.ಸಿ.ಮೊಹರೆ, ನಿವೃತ್ತ ಚಿತ್ರಕಲಾ ಶಿಕ್ಷಕರಾದ ಜಿ.ಎ. ಪತ್ತಾರ, ಕೆ.ಎಚ್.ಐ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಸ್ತ್ರೀರೋಗ ತಜ್ಞೆ ಡಾ. ಸ್ವಾತಿ ವೈದ್ಯ, ಕಾರ್ಯದರ್ಶಿ ಡಾ. ಅಲಕನಂದಾ ವೈದ್ಯ, ಸಮಾಜ ಕಲ್ಯಾಣ ಕೇಂದ್ರದ ಸಂಚಾಲಕಿ ಅನುಜಾ ಕಿರಣ ವೈದ್ಯ, ಡಾ.ಜಾಕೀರ್ ಹುಸೇನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಸುಲ್ತಾನಸಾಬ್ ಕಬ್ಬೂರ ಭಾಗವಹಿಸಿದ್ದರು.
 
ಸೇವಾದಳ ವಿಭಾಗದ ಸಂಘಟಕ ಬಸವರಾಜ ಹಟ್ಟಿಗೌಡರ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಸರ್ವಧರ್ಮ ಪ್ರಾರ್ಥನೆ ಜರುಗಿತು. 
 
ಭಾರತ ಸೇವಾದಳ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್‌. ಗಿರಡ್ಡಿ ಸ್ವಾಗತಿಸಿದರು. ಬಿ.ಬಿ. ಚೌಗಲಾ ನಿರೂಪಿಸಿದರು. ಅನಿಲ ಪತ್ತಾರ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT