ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೃಗಾಲಯ ಬಂದ್‌ಗೆ ಕಮಲಾ ಕಾರಣ’

Last Updated 9 ಜನವರಿ 2017, 8:53 IST
ಅಕ್ಷರ ಗಾತ್ರ

ಮೈಸೂರು: ‘ಹಿಂದಿನ ವರ್ಷಗಳಲ್ಲಿ ಮೈಸೂರು ಮೃಗಾಲಯದ ಪ್ರಾಣಿ ಪಕ್ಷಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೂ ಮುಂಜಾಗರೂಕತೆಯ ಕ್ರಮ ಕೈಗೊಳ್ಳುತ್ತಿದ್ದರು. ಇದುವರೆಗೆ ಮೃಗಾಲಯವನ್ನು ಮುಚ್ಚುವ ಪರಿಸ್ಥಿತಿ ಬಂದಿರಲಿಲ್ಲ. ಆದರೆ, ಈಗ ಒಂದು ತಿಂಗಳ ಅವಧಿಗೆ ಮೃಗಾಲಯವನ್ನು ಮುಚ್ಚಿರುವುದಕ್ಕೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್‌ ಅವರೇ ಕಾರಣ’ ಎಂದು ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಇಲ್ಲಿ ಆರೋಪಿಸಿದರು.

‘ಅಧಿಕಾರ ಸ್ವೀಕರಿಸಿದ ದಿನದಿಂದ ಅಲ್ಲಿನ ಅಧಿಕಾರಿಗಳ ಜತೆ ಅವರಿಗೆ ಸಾಮರಸ್ಯ ಇಲ್ಲ. ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ಬಾರದೆ ಮೃಗಾಲಯ ಮುಚ್ಚುವ ನಿರ್ಧಾರ ಕೈಗೊಂಡಿದ್ದಾರೆ. ನಿರ್ಧಾರವನ್ನು ಪುನರ್‌ಪರಿಶೀಲಿಸಿ ಶೀಘ್ರವಾಗಿ ಪ್ರವಾಸಿಗರ ವೀಕ್ಷಣೆಗೆ ಮುಕ್ತ ಗೊಳಿಸಬೇಕು’ ಎಂದು ಅವರು ಭಾನು ವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸಿಬ್ಬಂದಿಯ ಮೇಲಿನ ಕೋಪ ದಿಂದಾಗಿ ಮೃಗಾಲಯ ಮುಚ್ಚಿದ್ದಾ ರೆಯೇ ಹೊರತು ಪ್ರಾಣಿಗಳ ಸುರಕ್ಷತೆಯ ಕಾರಣಕ್ಕಾಗಿ ಕಮಲಾ ಅವರು ಈ ನಿರ್ಧಾರ ಕೈಗೊಂಡಿಲ್ಲ. ಇದರಿಂದ ಪ್ರಾಣಿಗಳು ಬಲಿಪಶುಗಳಾಗುತ್ತಿವೆ. ಸಿಬ್ಬಂದಿಗೂ ಅವರಿಗೂ ಘರ್ಷಣೆ ನಡೆಯುತ್ತಿದೆ. ಕಮಲಾ ಅವರನ್ನು ಮೃಗಾಲಯದ ಹುದ್ದೆಯಿಂದ ಬಿಡುಗಡೆ ಮಾಡಬೇಕು.

ಮೃಗಾಲಯದ ಅಧಿಕಾರಿ ಹುದ್ದೆಯ ಶ್ರೇಣಿಯನ್ನು ಕಡಿಮೆಗೊಳಿಸಿ, ದೀರ್ಘಕಾಲದ ಅನುಭವ ಇರದ ಕಮಲಾ ಅವರನ್ನು ನೇಮಕ ಮಾಡಿ ದ್ದಾರೆ. ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರ ಸ್ಥಾನಕ್ಕೆ ದಕ್ಷ, ಅನುಭವ ಇರುವ ಅಧಿಕಾರಿಯನ್ನು ಮುಖ್ಯಮಂತ್ರಿ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಸಾ.ರಾ.ಮಹೇಶ್‌ ಮಾತ ನಾಡಿ, ವಲಸೆ ಹಕ್ಕಿಗಳಿಂದ ಹಕ್ಕಿಜ್ವರ ಬಂದಿರುವುದರಿಂದ ಅವುಗಳು ಮೃಗಾ ಲಯಕ್ಕೆ ಬರದಂತೆ ಕ್ರಮ ಕೈಗೊಳ್ಳ ಬೇಕಿತ್ತು. ಆದರೆ, ಮೃಗಾಲಯದ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಉದ್ಧಟತನ ಪ್ರದರ್ಶಿಸುತ್ತಿದೆ ಎಂದು ದೂರಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಖರೀದಿ ಸಿದ ರಾಗಿಯಲ್ಲಿ ಅರ್ಧ ಭಾಗ ಮಣ್ಣು ಇತ್ತು. ನಾವು ಭಾಗ್ಯ ಕೊಡುತ್ತೇವೆ ಎನ್ನುವ ಸರ್ಕಾರ ಜನರಿಗೆ ಮಣ್ಣನ್ನು ತಿನ್ನಿಸದೆ ಆ ದಾಸ್ತಾನನ್ನು ವಾಪಸ್‌ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ವಾಹನ ಚಾಲನಾ ಪರವಾನಗಿ ಮತ್ತು ನೋಂದಣಿ ಶುಲ್ಕವನ್ನು ಹೆಚ್ಚಿಸಿದ್ದು ಖಂಡನೀಯ ಎಂದರು. ಮೇಯರ್‌ ಎಂ.ಜೆ.ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT