ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ ತಾಲ್ಲೂಕಲ್ಲಿ 131 ಮತಗಟ್ಟೆ

ಎ.ಪಿ.ಎಂ.ಸಿ ಚುನಾವಣೆ ಇಂದು: 576 ಅಧಿಕಾರಿಗಳು ಕಾರ್ಯನಿರ್ವಹಣೆ
Last Updated 9 ಜನವರಿ 2017, 9:08 IST
ಅಕ್ಷರ ಗಾತ್ರ
ರೋಣ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ತಾಲ್ಲೂಕಿನಾದ್ಯಂತ ಸೋಮವಾರ (ತಾ.9) ನಡೆಯಲಿದ್ದು, ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಿದ್ದು, ಅವರು ಭಾನುವಾರ ಮತಯಂತ್ರಗಳನ್ನು ತೆಗೆದುಕೊಂಡು ಹೋದರು.
 
ರೋಣ ತಾಲ್ಲೂಕಿನ ಒಟ್ಟು 14 ಕೃಷಿ ಮಾರುಕಟ್ಟೆ ಸಮಿತಿಗೆ ಚುನಾವಣೆ ನಡೆಯಬೇಕಾಗಿದ್ದು ಅದರಲ್ಲಿ 2 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಸಹಕಾರಿ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರ ಹಾಗೂ ಸಹಕಾರಿ ಮಾರುಕಟ್ಟೆ ಸಂಸ್ಕರಣ ಸಂಘಗಳ ಕ್ಷೇತ್ರ ಆಯ್ಕೆಗೊಂಡಿದ್ದು ಇನ್ನುಳಿದ 12 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಾಗಿದೆ. ಇದರ ಪೈಕಿ 11 ಕೃಷಿಕ ಕ್ಷೇತ್ರ  ಮತ್ತು 1 ವ್ಯಾಪಾರಿ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. 
 
ತಾಲ್ಲೂಕಿನಲ್ಲಿ 131 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟಿಯಲ್ಲಿ ಐದು ಮತಗಟ್ಟೆ ಅಧಿಕಾರಿಗಳಂತೆ ಒಟ್ಟು 576 ಅಧಿಕಾರಿಗಳು ಕಾರ್ಯ ನಿರ್ವಹಿಸ ಲಿದ್ದಾರೆ.
 
 ತಾಲ್ಲೂಕಿನಲ್ಲಿ  35 ಸೂಕ್ಷ ಮತ್ತು 26 ಅತಿಸೂಕ್ಷ  ಸಮಾನ್ಯ 68 ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 1,03,700 ಮತದಾರರಿದ್ದು 83,923 ಪುರುಷ ಮತದಾರರು, 19,777 ಮಹಿ ಳಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಚುನಾವಣಾಧಿಕಾರಿ ಶಿವಕುಮಾರ ವಸ್ತ್ರದ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT