ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆಗಳಿಗೆ ಜೀವ ತುಂಬಿದ ಕಲಾವಿದರು

14ನೇ ವಾರದಲ್ಲಿ ರಾಮಕೃಷ್ಣ ಆಶ್ರಮದ ಸ್ವಚ್ಛ ಮಂಗಳೂರು ಅಭಿಯಾನ
Last Updated 9 ಜನವರಿ 2017, 9:39 IST
ಅಕ್ಷರ ಗಾತ್ರ
ಮಂಗಳೂರು: ರಾಮಕೃಷ್ಣ ಆಶ್ರಮದ ವತಿಯಿಂದ ನಡೆಯುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ಭಾನುವಾರ ನಗರದ 10 ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. 
 
ಸ್ವಚ್ಛ ಕಾವೂರು ತಂಡ ಮತ್ತು ಹಿಂದೂ ಯುವಸೇನಾ ತಂಡದ ಸದಸ್ಯರ ಸಹಕಾರದಲ್ಲಿ ಆಕಾಶಭವನದ ನಂದನ ಪುರ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡರು. ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಹಾಗೂ ಪೊಲೀಸ್‌ ಅಧಿ ಕಾರಿ ಮದನ್ ಚಾಲನೆ ನೀಡಿದರು. ನಂ ದನಪುರ ಮುಖ್ಯ ರಸ್ತೆಯನ್ನು ಶುಚಿಗೊ ಳಿಸಲಾಯಿತು. ಹಿಂದೂ ಯುವ ಸೇನೆಯ ಸದಸ್ಯರು ಬಸ್ ತಂಗುದಾಣವನ್ನು ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಿದರು. ನುರಿತ ಕಲಾವಿದರಿಂದ ರಸ್ತೆಯ ಮಾರ್ಗ ಸೂಚಕ ಫಲಕವನ್ನು ಹೊಸದಾಗಿ ಬರೆ ಯಿಸಿ, ಜಾಗೃತಿಗಾಗಿ ಸ್ವಚ್ಛ ಭಾರತದ ಕಲಾಕೃತಿಯನ್ನು ರಚಿಸಲಾಯಿತು. ಕೊರ ಗಪ್ಪ ಶೆಟ್ಟಿ, ಸಂದೇಶ್ ಸೇರಿದಂತೆ ಸುಮಾರು ನೂರು ಜನ ಶ್ರಮದಾನಗೈ ದರು. ಸುಧಾಕರ್ ಕಾವೂರು, ಸಚಿನ್ ಕಾವೂರು ಕಾರ್ಯಕ್ರಮ ಸಂಯೋಜಿಸಿದರು. 
 
ಕೊಟ್ಟಾರ ಚೌಕಿಯಲ್ಲಿ ಕಿರಣ ಜಿಮ್ ಫ್ರೆಂಡ್ಸ್ ಸ್ವಚ್ಛತಾ ಅಭಿಯಾನ ನಡೆಸಿ ದರು. ಮೇಲ್ಸೇತುವೆಯ ಕಂಬಗಳನ್ನು ಅಂದಗೊಳಿಸುವ ಕಾರ್ಯ ಕಳೆದೆರಡು ತಿಂಗಳಿನಿಂದ ಸಾಗಿದೆ. ಈ ಬಾರಿ ಯಶ ವಂತ ಆಚಾರ್ಯ ಕಲ್ಪನೆಯಲ್ಲಿ ಮೂರು ಕಂಬಗಳನ್ನು ಸ್ವಚ್ಛಗೊಳಿಸಿ ಮನಮು ಟ್ಟುವ ಸಂದೇಶ ಹಾಗೂ ಕಣ್ಸೆಳೆಯುವ ಕಲಾಕೃತಿಗಳನ್ನು ರಚಿಸಲಾಗಿದೆ. ರಿತೇಶ್, ಧನ್ವೀರ್, ಮಂಜುನಾಥ್ ಸೇರಿದಂತೆ ಸುಮಾರು 60 ಯುವಕರು ಕೊಟ್ಟಾರ ಚೌಕಿಯ ಸುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು. ಗೂಡಂಗಡಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಟ್ಟು ಸ್ವಚ್ಛತೆ ಯನ್ನು ಕಾಪಾಡುವಂತೆ ವರ್ತಕರಲ್ಲಿ ಮನವಿ ಮಾಡಿದರು. ವರ್ತಕರಾದ ಗೋಪಾಲ ಪೂಜಾರಿ ಸ್ವಯಂಪ್ರೇರಿ ತರಾಗಿ ಧನಸಹಾಯ ಮಾಡಿ ಶುಭ ಹಾರೈಸಿದರು. 
 
ಸಾರಸ್ವತ ಶಿಕ್ಷಣ ಸಂಸ್ಥೆಯ ವಿದ್ಯಾ ರ್ಥಿಗಳು ಅವರ ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸತತವಾಗಿ ಹತ್ತು ಸ್ವಚ್ಛತಾ ಅಭಿಯಾನ ಪೂರೈಸಿದ ಸಾರಸ್ವತ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸಮಾರೋಪ ಸಮಾ ರಂಭವನ್ನು ಏರ್ಪಡಿಸಲಾಗಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ವಿದ್ಯಾರ್ಥಿಗ ಳಿಗೆ ಪ್ರಮಾಣಪತ್ರ ವಿತರಿಸಿದರು. ಕರ್ಣಾ ಟಕ ಬ್ಯಾಂಕಿನ ಶ್ರೀನಿವಾಸ್ ದೇಶಪಾಂಡೆ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಮಹೇಶ್ ಬೊಂಡಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಾಚಾ ರ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು. 
 
ಕೋರ್ಟ್ ರಸ್ತೆಯಲ್ಲಿ ಸೇಂಟ್ ಅಲೋಶಿಯಸ್ ಕಾಲೇಜಿನ ಎನ್ ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಸಹಾಯ ತಂಡದಿಂದ ಶ್ರಮದಾನ ನಡೆ ಯಿತು. ಪ್ರಾಧ್ಯಾಪಕ ಚಂದ್ರಶೇಖರ್ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಎನ್ಎಸ್ಎಸ್ ಸಂಯೋಜಕರಾದ ಪ್ರೇಮಲತಾ ಶೆಟ್ಟಿ, ಅರ್ಜುನ್ ಮಾರ್ಗ ದರ್ಶನದಲ್ಲಿ ಕೋರ್ಟ್ ರಸ್ತೆಯಿಂದ ಕರಂಗಲಪಾಡಿಯವರೆಗೆ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು. ಪ್ರಾಧ್ಯಾಪಕ ರಾದ ನಂದಿನಿ ಶೇಟ್, ಪ್ರಶೋಭ ಸೇರಿ ದಂತೆ ಸುಮಾರು 85 ವಿದ್ಯಾರ್ಥಿಗಳು ಪಾಲ್ಗೊಂಡರು. 
 
ಕುಂಟಿಕಾನ ಜಂಕ್ಷನ್, ಹಂಪಣಕಟ್ಟೆ, ಚಿಲಿಂಬಿ, ದೇರಳಕಟ್ಟೆ, ಶಿವಭಾಗ್, ಪಡೀಲ್ ಮುಂತಾದೆಡೆ ಸ್ವಚ್ಛತೆ ಕೈಗೊಳ್ಳಲಾಯಿತು. 
 
***
ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ 14 ನೇ ವಾರದಲ್ಲಿ ಯಶಸ್ವಿಯಾಗಿ ಮುಂದು ವರಿದಿದ್ದು, ನಗರದ ಎಲ್ಲ ವರ್ಗದ ಜನರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
-ಸ್ವಾಮಿ ಚಿದಂಬರಾನಂದ,
ಅಭಿಯಾನದ ಪ್ರಧಾನ ಸಂಚಾಲಕ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT