ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ-ಜವಳಿ ಇವರಲ್ಲ...

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ರೀನಾ ರಾಯ್– ಸೋನಾಕ್ಷಿ ಸಿನ್ಹಾ
‘ದಬಾಂಗ್‌’ ನಾಯಕಿ ಸೋನಾಕ್ಷಿ ಸಿನ್ಹಾ, ಬಾಲಿವುಡ್‌ನ ಹಳೆಯ ನಟಿ ರೀನಾ ರಾಯ್‌ ಅವರನ್ನು ಹೋಲುತ್ತಾರೆ. ರೀನಾ ಅವರಂತೆಯೇ ಇರುವ ಸೋನಾಕ್ಷಿಯನ್ನು ಆರಂಭದಲ್ಲಿ ರೀನಾ ರಾಯ್ ಮಗಳೆಂದೇ ಅನೇಕರು ನಂಬಿದ್ದರು.

ಕತ್ರೀನಾ ಕೈಫ್‌– ಜರೀನ್‌ ಖಾನ್‌
ಜರೀನ್‌ ಖಾನ್–ಕತ್ರೀನಾ ಕೈಫ್‌ ‘ವೀರ್’ ಸಿನಿಮಾದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ ಜರೀನ್ ಖಾನ್ ಅವರನ್ನು ಬಹುತೇಕರು ನಟಿ ಕತ್ರೀನಾ ಕೈಫ್ ಅವರ ಸಹೋದರಿ ಎಂದೇ ಭಾವಿಸಿದ್ದರು. ರೂಪದರ್ಶಿಯೂ ಆಗಿರುವ ಜರೀನ್‌ ತಮ್ಮ ಮೊದಲ ಚಿತ್ರದಲ್ಲೇ ಸಲ್ಮಾನ್ ಖಾನ್‌ಗೆ  ನಾಯಕಿಯಾದವರು. ಕತ್ರೀನಾ ಕೈಫ್ ಅವರನ್ನು ಹೋಲುವ ಮುಖಚರ್ಯೆ ಇರುವ ಜರೀನ್ ಉತ್ತಮ ನೃತ್ಯಗಾರ್ತಿಯೂ ಹೌದು.

ಸ್ಮಿತಾ ಪಾಟೀಲ್‌– ಚಿತ್ರಾಂಗದಾ  ಸಿಂಗ್‌
ಕಲಾತ್ಮಕ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿ  ತಮ್ಮದೇ ಆದ ಛಾಪು ಮೂಡಿಸಿದ್ದ ಸ್ಮಿತಾ ಪಾಟೀಲ್ ಅವರಂತೆಯೇ ಇರುವ ಮತ್ತೊಬ್ಬ ನಟಿ ಚಿತ್ರಾಂಗದಾ ಸಿಂಗ್. ಕೋಲುಮುಖದ ಈ ಸುಂದರಿ ರೂಪದರ್ಶಿಯೂ ಹೌದು. ಅಕ್ಷಯ್‌ ಕುಮಾರ್ ಸೇರಿದಂತೆ ಪ್ರಮುಖ ನಟರೊಂದಿಗೆ ಚಿತ್ರಾಂಗದಾ ತೆರೆ ಹಂಚಿಕೊಂಡಿದ್ದಾರೆ. ರೂಪದಲ್ಲಿ ತಾನು ಸ್ಮಿತಾ ಪಾಟೀಲ್ ಅವರನ್ನು ಹೋಲುವುದು ಖುಷಿ ತರುತ್ತದೆ ಎನ್ನುತ್ತಾರೆ ಚಿತ್ರಾಂಗದಾ.

ಶ್ರೀದೇವಿ– ದಿವ್ಯಾಭಾರತಿ
ಒಂದು ಕೋನದಲ್ಲಿ ನಟಿ ಶ್ರೀದೇವಿಯಂತಿದ್ದ ದಿವ್ಯಾಭಾರತಿ ಏಕಕಾಲಕ್ಕೆ ಬಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ಜನಪ್ರಿಯವಾಗಿದ್ದವರು.  19ರ ಹರೆಯದಲ್ಲೇ ಸಾವನ್ನಪ್ಪಿದ್ದ ದಿವ್ಯಾ ಅಲ್ಪಾವಧಿಯಲ್ಲೇ ದೊಡ್ಡ ನಟರೊಂದಿಗೆ ಅಭಿನಯಿಸಿ ಚಿತ್ರರಸಿಕರ ಮನಗೆದ್ದವರು.

ಐಶ್ವರ್ಯಾ ರೈ–ಸ್ನೇಹಾ ಉಲ್ಲಾಳ್‌
ಬಾಲಿವುಡ್‌ ನಟಿ ಐಶ್ವರ್ಯಾ ರೈ ಪಡಿಯಚ್ಚಿನಂತಿರುವ ಸ್ನೇಹಾ ಉಲ್ಲಾಳ್‌ ಕೂಡಾ ಕರ್ನಾಟಕದವರು. ‘ಲಕ್ಕಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸ್ನೇಹಾ ಒಂದೆರೆಡು ಚಿತ್ರಗಳಲ್ಲಿ ಅಭಿನಯಿಸಿದರಾದರೂ ಅದೃಷ್ಟ ಅವರ ಕೈಹಿಡಿಯಲಿಲ್ಲ. ದಕ್ಷಿಣ ಭಾರತದ ಹಲ ಚಿತ್ರಗಳಲ್ಲೂ ಸ್ನೇಹಾ ಅಭಿನಯಿಸಿದ್ದಾರೆ.

ಅಮಿತಾಭ್ ಬಚ್ಚನ್ –ಸೋನು ಸೂದ್‌
ನಟ, ನಿರ್ಮಾಪಕ, ರೂಪದರ್ಶಿ ಆಗಿರುವ ಸೋನು ಸೂದ್ ಬಾಲಿವುಡ್‌ನಲ್ಲಷ್ಟೇ ಅಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲೂ ಜನಪ್ರಿಯರು.  ಅಮಿತಾಭ್‌ ಬಚ್ಚನ್ ಅವರ ಮುಖಚರ್ಯೆ ಹೋಲುವ ಸೋನು ಸೂದ್‌ ಖಳನಟನಾಗಿಯೂ ಖ್ಯಾತರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT