ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಸಂಗ್ರಹ ಏರಿಕೆ ಪ್ರಗತಿಗೆ ಪುರಾವೆ

ನೋಟು ರದ್ದತಿಯಿಂದ ಆರ್ಥಿಕ ಹಿಂಜರಿತ ಇಲ್ಲ: ಜೇಟ್ಲಿ ಪ್ರತಿಪಾದನೆ
Last Updated 9 ಜನವರಿ 2017, 19:31 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದು ಕ್ರಮದಿಂದ ಆರ್ಥಿಕ ಪ್ರಗತಿ ಕುಂಠಿತ ಗೊಂಡಿದೆ ಎಂಬ ವಾದವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.

ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಅರ್ಥ ವ್ಯವಸ್ಥೆ ಚೇತರಿಸಿಕೊಂಡಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಎಂದಿದ್ದಾರೆ.

ಉತ್ಪಾದನಾ ಕ್ಷೇತ್ರವೂ ಸೇರಿದಂತೆ ಎಲ್ಲಾ ರಂಗಗಳಲ್ಲಿ ಪ್ರಗತಿ ಉತ್ತಮವಾಗಿದೆ. 2016ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ನೇರ ತೆರಿಗೆ ವಿಭಾಗದಲ್ಲಿ ₹ 5.53 ಲಕ್ಷ ಕೋಟಿ ಸಂಗ್ರಹವಾಗಿದ್ದು, ಶೇಕಡ 12 ರಷ್ಟು  ಏರಿಕೆಯಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

₹ 6.30 ಲಕ್ಷ ಕೋಟಿ ಪರೋಕ್ಷ ತೆರಿಗೆ ಸಂಗ್ರಹವಾಗಿದ್ದು,  ಶೇಕಡ 25ರಷ್ಟು ಹೆಚ್ಚಳ ಉಂಟಾಗಿದೆ ಎಂದು ಹೇಳಿದರು.

ಅಬಕಾರಿ ಸುಂಕದ ಬಾಬ್ತಿನಲ್ಲಿ  ₹ 2.79 ಲಕ್ಷ ಕೋಟಿ ಸಂಗ್ರಹವಾಗಿ ಶೇಕಡ 43ರಷ್ಟು ಹೆಚ್ಚಳ ಉಂಟಾಗಿದೆ. ಸೇವಾ ತೆರಿಗೆ ವಿಭಾಗದಲ್ಲಿ ₹1.83 ಲಕ್ಷ ಕೋಟಿ ಸಂಗ್ರಹವಾಗಿ ಶೇಕಡ 23.9ರಷ್ಟು ಹೆಚ್ಚಳವಾಗಿದೆ ಎಂದು ಜೇಟ್ಲಿ ಮೊದಲ ಒಂಬತ್ತು ತಿಂಗಳ ತೆರಿಗೆ ಸಂಗ್ರಹದ ಅಂಕಿಅಂಶಗಳನ್ನು ನೀಡಿದರು.

ಅಬಕಾರಿ ಸುಂಕದ ಸಂಗ್ರಹದಲ್ಲೂ ಹೆಚ್ಚಳವಾಗಿದ್ದು, ₹1.67 ಲಕ್ಷ ಕೋಟಿ ಸಂಗ್ರಹಿಸಲಾಗಿದೆ. ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಶೇಕಡ 4.1ರಷ್ಟು ಹೆಚ್ಚಳವಾಗಿದೆ ಎಂದರು.

ನೋಟು ರದ್ದತಿ ನಂತರದ ತಿಂಗಳುಗಳಲ್ಲಿ ಅಬಕಾರಿ ಸುಂಕ ಸಂಗ್ರಹ ಶೇಕಡ 31.6ರಷ್ಟು ಹೆಚ್ಚಾಗಿದೆ. ಈ ಕ್ಷೇತ್ರಗಳ ಉತ್ಪಾದನೆಯಲ್ಲಿ  ಪ್ರಗತಿ ಆಗಿದೆ ಎಂಬುದು ಇದರಿಂದ ಸ್ಪಷ್ಟ ಎಂದು ಜೇಟ್ಲಿ ಹೇಳಿದರು. 

ಡಿಸೆಂಬರ್‌ನಲ್ಲಿ ಸೇವಾ ತೆರಿಗೆ ಸಂಗ್ರಹದಲ್ಲಿ ಶೇಕಡ 12.4ರಷ್ಟು ಹೆಚ್ಚಳವಾಗಿದೆ. ಆದರೆ ಅಬಕಾರಿ ಸುಂಕದ ಸಂಗ್ರಹ ಇಳಿಮುಖವಾಗಿದೆ. ಅದೇ ರೀತಿ ಚಿನ್ನ ಆಮದು ಪ್ರಮಾಣವೂ ಇಳಿಮುಖವಾಗಿದೆ ಎಂದರು.

ತೆರಿಗೆ ಸಂಗ್ರಹದ ಅಂಕಿಅಂಶಗಳು ನಿಖರ ಆಗಿರುವುದರಿಂದ ನೋಟು ರದ್ದು ಕ್ರಮದಿಂದ ಆರ್ಥಿಕ ಹಿಂಜರಿತ ಉಂಟಾಗಿದೆ ಎಂಬುದು ಸುಳ್ಳು ಎನ್ನುವುದು ಈಗ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಬಹುತೇಕ ರಾಜ್ಯಗಳಲ್ಲಿ ಮೌಲ್ಯ ವರ್ಧಿತ ತೆರಿಗೆ ಸಂಗ್ರಹ ಸಹ ಹೆಚ್ಚಾಗಿದೆ. ನವೆಂಬರ್‌ನಲ್ಲಿ ಹಳೆಯ ನೋಟುಗ ಳಲ್ಲಿಯೇ ತೆರಿಗೆ ಸಂಗ್ರಹಿಸಲಾಗಿದೆ. ಉತ್ತಮ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಟ್ ಸಂಗ್ರಹ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT