ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯ ನಿರೀಕ್ಷೆಯಲ್ಲಿ ಚಿಲ್ಲರೆ ಮಾರುಕಟ್ಟೆ

ನೋಟು ಕೊರತೆ, ಕುಳಿರ್ಗಾಳಿಗೆ ಕುಸಿದ ಹಣ್ಣುಗಳ ಬೇಡಿಕೆ; ವ್ಯಾಪಾರಿಗಳ ತೀವ್ರ ಬೇಸರ; ನಗದು ರಹಿತ ವಹಿವಾಟಿಗೆ ಒತ್ತು
Last Updated 10 ಜನವರಿ 2017, 6:49 IST
ಅಕ್ಷರ ಗಾತ್ರ
-ಮಂಜುನಾಥ ಆರ್‌.ಗೌಡರ
*
 
ಹುಬ್ಬಳ್ಳಿ: ನಗದು ರಹಿತ ವಹಿವಾಟಿಗೆ ದಿನದಿಂದ ದಿನಕ್ಕೆ ವ್ಯಾಪಾರಿ ಹಾಗೂ ಗ್ರಾಹಕರಲ್ಲಿ ಸಣ್ಣದೊಂದು ಪ್ರಯತ್ನ ನಡೆಯುತ್ತಲೆ ಇದೆ. ಆದರೆ ಸಂವಹನ ಕೊರತೆಯು ವ್ಯಾಪಾರಕ್ಕೆ ಅಡ್ಡಿಯಾಗಿದೆ.
 
 ಗ್ರಾಹಕರಲ್ಲಿ ತಂತ್ರಜ್ಞಾನ ತಿಳಿವಳಿಕೆ ಇಲ್ಲ ಎನ್ನುವುದು ವ್ಯಾಪಾರಿಗಳ ಅನಿಸಿಕೆಯಾದರೆ, ಗ್ರಾಹಕರ ಪ್ರಕಾರ, ವ್ಯಾಪಾರಿಗಳು ಸೇವಾ ತೆರಿಗೆ ನೆಪವೊಡ್ಡಿ ನಗದು ರಹಿತ ವಹಿವಾಟಿಗೆ ನಮಗೆ ಹಿಂದೇಟು ಹಾಕುವಂತೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಒಟ್ಟಾರೆ ವಹಿವಾಟು ಕಳೆದ ತಿಂಗಳಿಗಿಂತ ಸ್ವಲ್ಪ ಚೇತರಿಕೆ ಕಂಡರೂ  ಭಾರಿ ಬದಲಾವಣೆ ಕಾಣುವ ಸ್ಥಿತಿಯ­ಲ್ಲಂತೂ ಇಲ್ಲ. ಇದಕ್ಕೆ ನಿದರ್ಶನ ಬಾಳೆ ಹಣ್ಣಿನ ವ್ಯಾಪಾರಿ ಆನಂದ ಅವರ ವಹಿ­ವಾಟು. ಎರಡು ತಿಂಗಳ ಹಿಂದೆ ಇವರು ಪ್ರತಿ ದಿನ 1 ಕ್ವಿಂಟಲ್‌ ಹಣ್ಣು ಮಾರು­ತ್ತಿದ್ದರು. ಈಗ ಕೇವಲ 50 ಕೆ.ಜಿ. ಮಾರಾಟವಾದರೆ ಹೆಚ್ಚು ಎನ್ನುಂತವಾಗಿ. ಪಚ್ಚ ಬಾಳೆ ಹಣ್ಣು ದರ ಕುಸಿದಿದೆ ಆದರೂ ವ್ಯಾಪಾರ ಉತ್ತಮವಾಗಿಲ್ಲ. ಕಳೆದ ತಿಂಗಳ ಡಜಲ್‌ ಬಾಳೆ ಹಣ್ಣಿಗೆ ₹ 30ರಿಂದ ₹ 35 ಇತ್ತು. ಈ ತಿಂಗಳು ಇದು ₹ 20ರಿಂದ ₹ 25ಕ್ಕೆ ಇಳಿದಿದೆ.  ಯಾಲಕ್ಕಿ ಬಾಳೆ  ಇದೇ ಹಾದಿಯಲ್ಲಿದೆ.
 
ಇಲ್ಲಿನ ಕಿರಾಣಿ ಅಂಗಡಿಗಳ ವ್ಯಾಪಾ­ರ­ದಲ್ಲೂ ಅಷ್ಟಾಗಿ ಸುಧಾರಣೆ ಕಂಡು­ಬರು­ತ್ತಿಲ್ಲ. ಇಲ್ಲಿನ ಬಹುತೇಕ ಅಂಗಡಿ­ಗಳಲ್ಲಿ ನಗದು ರಹಿತ ವಹಿವಾಟಿನ ಕುರಿತು ವಿಚಾರಿಸಿದಾಗ ನೀರಸ ಪ್ರತಿಕ್ರಿಯೆ ಕೇಳಿಬಂತು. ದಿನಸಿ ವ್ಯಾಪಾರಿ ಎಂ.ತಲವಾಯಿ ಅವರು ಹೇಳುವಂತೆ ‘ಬ್ಯಾಂಕ್‌ ಸಿಬ್ಬಂದಿ ಹೇಳುವ ಪ್ರಕಾರ ಸೇವಾ ತೆರಿಗೆ ನಾವು ಕಟ್ಟಲೇ ಬೇಕಾಗುತ್ತದೆ. ಇದರ ಖರ್ಚನ್ನು ಯಾರೂ ನೀಡುತ್ತಾರೆ. ಹಾಗಾಗಿ ನಾವು ಇದರ ಗೊಡವೆಗೆ ಹೋಗಿಲ್ಲ’ ಎಂದು ಖಾರವಾಗಿ ಹೇಳಿದರು.
 
 ₹ 100, ₹ 500 ಮುಖ ಬೆಲೆ ನೋಟು ಮಾರುಕಟ್ಟೆಗೆ ಹೆಚ್ಚೆಚ್ಚು ಬರಬೇಕು. ಇನ್ನು ಬ್ಯಾಂಕ್‌ ಹಾಗೂ ಸರ್ಕಾರವು ಜನರಲ್ಲಿರುವ ಗೊಂದಲ, ಪೂರ್ವಾಗ್ರಹ ಗಮನಿಸಿ ಸರಿಪಡಿಸಬೇಕು ಎನ್ನುವುದು ನಿವೃತ್ತ ನೌಕರ ಎಸ್.ಕರಿಕಟ್ಟಿ ಅವರ ಒತ್ತಾಸೆ.  
 
ತೊಗರಿ, ಉದ್ದು ದರ ಇಳಿಕೆ: ಕೆ.ಜಿ.ಗೆ ₹ 120ರ ತನಕ ಇದ್ದ ತೊಗರಿ, ಉದ್ದು ದರವು ₹ 80ಕ್ಕೆ ಬಂದು ನಿಂತಿವೆ. ಉತ್ಪನ್ನ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿರುವುದೇ ಇವುಗಳ ಇಳಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಇನ್ನು ಕಡಲೆ ದರ ದುಬಾರಿಯಾಗಿದೆ.  ಕೆ.ಜಿ.ಗೆ ₹ 120ರ ತನಕ ತಲುಪಿದೆ. ಇನ್ನುಳಿದ ದಿನಸಿ ದರಗಳು ಬಹುತೇಕ ಸ್ಥಿರವಾಗಿವೆ.
 
ತರಕಾರಿ ದರ: ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಮೆಣಸಿನಕಾಯಿ, ಬದನೆ­ಕಾಯಿ ಮತ್ತು ಕೆಲ ಸೊಪ್ಪುಗಳ ದರ ಹೊರತುಪಡಿಸಿದರೆ ಇನ್ನುಳಿದ ಪದಾರ್ಥಗಳ ದರದಲ್ಲಿ ವ್ಯತ್ಯಾಸವಿಲ್ಲ. ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಆವಕ ಉತ್ತಮವಾಗಿದೆ. ಆದರೆ ಚವಳಿಕಾಯಿ ಕಡಿಮೆಯಾಗಿದೆ. ಇದರಿಂದ ಇದಕ್ಕೆ ಹೆಚ್ಚಿನ ಬೆಲೆ ನೀಡಬೇಕಾದ ಅನಿವಾರ್ಯತೆ ಇದೆ. ಚಿಲ್ಲರೆ ಸಮಸ್ಯೆ ಬಿಸಿ ಇಲ್ಲಿಯೂ ಇದೆ.
 
ಸೇಬು ಆವಕ ಹೆಚ್ಚಳ: ಮಾರುಕಟ್ಟೆಯಲ್ಲಿ ಸೇಬು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಆದರೂ ದರದಲ್ಲಿ  ಸೇಬು ಕಡಿಮೆಯಾಗಿಲ್ಲ ಕೆ.ಜಿ.ಗೆ ₹120 ಇದೆ. ಇದರ ಜೊತೆಯಲ್ಲಿ ದಾಳಿಂಬೆ ಹಣ್ಣು  ಮಾರುಕಟ್ಟೆಗೆ ಬರುತ್ತಿದೆ. ಕಳೆದ ತಿಂಗಳಿಗಿಂತ ₹ 20ರಷ್ಟು ಕಡಿಮೆ­ಯಾಗಿದೆ. ಇದರ ಉತ್ಪನ್ನ ಹೆಚ್ಚಳಗೊಂ­ಡಿ­ರುವುದು ದರ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.
 
ಹೂವಿನ ದರವು ಕುಸಿತ:  ಮಲ್ಲಿಗೆ, ದಲಾಟಿ ಮಾರೊಂದಕ್ಕೆ ಈ ವಾರ ₹ 8ರಿಂದ ₹10 ಇತ್ತು. ಇನ್ನು ಗುಲಾಬಿ, ಮಲ್ಲಿಗೆ, ಚೆಂಡು ಕೆ.ಜಿಗೆ  ಕ್ರಮವಾಗಿ ₹ 60, 40, 200 ಇತ್ತು.
 
**
ನೋಟು ರದ್ದತಿ ನಂತರ ನಗದು ರಹಿತ ವಹಿವಾಟಕ್ಕೆ ಸಾಧ್ಯವಾದ ಮಟ್ಟಿಗೆ ಪ್ರಯತ್ನಿಸುತ್ತಿದ್ದೇವೆ. ಆದರೆ ಗ್ರಾಹಕರಲ್ಲಿ ಇನ್ನು ಹೆಚ್ಚಿನ ತಿಳಿವಳಿಕೆ ಮೂಡುವ ಅಗತ್ಯವಿದೆ.
ಬಷೀರ್‌,
ಹಣ್ಣಿನ ವ್ಯಾಪಾರಿ, ಹುಬ್ಬಳ್ಳಿ
 
**
ಹಣ್ಣುಗಳು ಮತ್ತು ತರಕಾರಿ ಹೊರತು ಪಡಿಸಿದರೆ ದಿನಸಿ ದರದಲ್ಲಿ ಇಳಿಕೆ ಕಾಣದಿರುವುದು ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇವುಗಳ ದರ ಇಳಿಕೆ ಕಾಣುವ  ನಿರೀಕ್ಷೆಯಲ್ಲಿದ್ದೇವೆ.
-ಶೈಲಜಾ ಹಿರೇಮಠ
ಗೃಹಿಣಿ, ನವಲೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT