ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಅಧಿಕ ಸ್ಥಾನ

ಎಪಿಎಂಸಿ: ಇಬ್ರಾಹಿಂ ಕೋಡಿಜಾಲ್‌ ವಿಶ್ವಾಸ
Last Updated 10 ಜನವರಿ 2017, 7:12 IST
ಅಕ್ಷರ ಗಾತ್ರ
ಮಂಗಳೂರು: ಜಿಲ್ಲೆಯ ಮೂರು ಎಪಿಎಂಸಿಗಳಿಗೆ ಇದೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿ ಜಾಲ್‌ ವಿಶ್ವಾಸ ವ್ಯಕ್ತಪಡಿಸಿದರು. 
 
ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾ ರದ ಅಭಿವೃದ್ಧಿ ಕಾರ್ಯಗಳು, ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗಲಿವೆ ಎಂದರು. 
 
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ರೈತರಿಗೆ ಬಡ್ಡಿರಹಿತ ಕೃಷಿ ಸಾಲ, ಬಾಡಿಗೆ ಆಧಾರಿತ ಕೃಷಿ ಸಲಕರಣೆ, ಕೃಷಿ ಭಾಗ್ಯ, ಸಂತೆ ಕಟ್ಟೆ ನಿರ್ಮಾಣ, ಸರ್ವ ಋತು ರಸ್ತೆ, ಮಣ್ಣು ಆರೋಗ್ಯ ತಪಾಸಣೆ ಯಂತಹ ಯೋಜನೆಗಳನ್ನು ರೈತರಿಗೆ ನೀಡಲಾಗಿದೆ ಎಂದು ತಿಳಿಸಿದರು. 
 
2014 ರಲ್ಲಿ ₹820 ಕೋಟಿ, 2015 ರಲ್ಲಿ ₹ 650 ಕೋಟಿ, 2016 ರಲ್ಲಿ ₹ 652 ಕೋಟಿ ಕೃಷಿ ಸಾಲವನ್ನು ರೈತರಿಗೆ ವಿತರಿಸಲಾಗಿದೆ. ರೈತರ ಅಭ್ಯುದಯಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಸಿದ್ದರಾಮಯ್ಯ ನವರ ಆಡಳಿತವನ್ನು ಮೆಚ್ಚಿರುವ ರೈತಾಪಿ ವರ್ಗ, ಎಪಿಎಂಸಿಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಲಿದ್ದಾರೆ ಎಂದು ಹೇಳಿದರು. 
 
ಹಿಂದಿನ ಯುಪಿಎ ಸರ್ಕಾರ ₹72 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿತ್ತು. ಆದರೆ, ಈಗಿನ ಎನ್‌ಡಿಎ ಸರ್ಕಾರ, ರೈತರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ದೇಶದ ಪ್ರಧಾನಿ ಸಂಸತ್ತಿಗಿಂತ ಹೊರಗಡೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ನೋಟು ರದ್ದತಿಯಂತಹ ಕ್ರಮದಿಂದ ಕೂಲಿ ಕಾರ್ಮಿಕರು, ಕೃಷಿಕರು, ಬಡಜನರು ತೊಂದರೆ ಅನುಭವಿಸುವಂತೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಇಂತಹ ನಿಲುವುಗಳು ಬಿಜೆಪಿಗೆ ಮುಳುವಾಗಲಿವೆ ಎಂದು ತಿಳಿಸಿದರು. 
 
ಜಿಲ್ಲೆಯಲ್ಲಿ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್‌, ಏಳು ಕ್ಷೇತ್ರಗಳ ಶಾಸಕರು, ಎಲ್ಲ ಘಟಕದ ಪದಾಧಿ ಕಾರಿಗಳು ಒಗ್ಗಟ್ಟಿನಿಂದ ಎಪಿಎಂಸಿ ಚುನಾವಣೆ ಎದುರಿಸುತ್ತಿದ್ದು, ರೈತಾಪಿ ವರ್ಗದಿಂದಲೂ ಬೆಂಬಲ ಸಿಗಲಿದೆ ಎಂದರು.
 
ಮೇಯರ್‌ ಹರಿನಾಥ್‌, ಪಾಲಿಕೆ ಸಚೇತಕ ಎಂ. ಶಶಿಧರ್‌ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್‌, ಶಶಿಧರ್‌ ಹೊಳ್ಳ, ಪದ್ಮನಾಭ ನರಿಂಗಾನ, ಸಂತೋಷಕುಮಾರ್‌ ಶೆಟ್ಟಿ, ಇತರರು ಇದ್ದರು.
 
**
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಳೆರೋಗದಿಂದ ತತ್ತರಿಸಿದ 44,850 ಅಡಿಕೆ ಬೆಳೆಗಾರ ರಿಗೆ ₹29 ಕೋಟಿ ಪರಿಹಾರ ನೀಡುವ ಮೂಲಕ ರೈತರ ಬೆಂಬಲಕ್ಕೆ ನಿಂತಿದೆ. 
-ಇಬ್ರಾಹಿಂ ಕೋಡಿಜಾಲ್‌
ಕಾಂಗ್ರೆಸ್‌ ಜಿಲ್ಲಾ ಘಟಕದ ಹಂಗಾಮಿ ಅಧ್ಯಕ್ಷ 
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT