ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆಗೆ ಇನ್ನೆರಡು ದಿನ ಬಾಕಿ

ಅಭ್ಯರ್ಥಿಗಳ ಪರವಾಗಿ ಬಸವಾಪಟ್ಟಣ, ಮಾಯಕೊಂಡ, ತ್ಯಾವಣಿಗೆ, ಹರಪನಹಳ್ಳಿಯಲ್ಲಿ ಬಿರುಸಿನ ಪ್ರಚಾರ
Last Updated 10 ಜನವರಿ 2017, 8:45 IST
ಅಕ್ಷರ ಗಾತ್ರ
ದಾವಣಗೆರೆ: ಎಪಿಎಂಸಿ ಚುನಾವಣೆ ಕೊನೆಯ ಹಂತಕ್ಕೆ ಬರುತ್ತಿದ್ದು, ಎಲ್ಲೆಡೆ ಪ್ರಚಾರ ಬಿರುಸುಗೊಂಡಿದೆ.
 
ಬಸವಾಪಟ್ಟಣ ವರದಿ: ಎಪಿಎಂಸಿ ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸ್ವಇಚ್ಛೆಯಿಂದ ಮತದಾನ ಮಾಡು ವಂತೆ  ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಶಿವಯೋಗಿ ಸ್ವಾಮಿ ಮನವಿ ಮಾಡಿದರು.
 
ಸೋಮವಾರ ದಾಗಿನಕಟ್ಟೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಿ.ಬಿ.ಜಗನ್ನಾಥ್‌ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.
 
ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಅಭ್ಯರ್ಥಿ ಜಿ.ಬಿ. ಜಗನ್ನಾಥ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಎನ್‌. ಲೋಕೇಶಪ್ಪ, ತಾಲ್ಲೂಕು ಪಂಚಾಯ್ತಿ  ಸದಸ್ಯ ಎಚ್‌.ಎಸ್‌.ಮಂಜುನಾಥ್‌, ಜಿಲ್ಲಾ ಬಿಜೆಪಿಕಾರ್ಯದರ್ಶಿ ಸುರೇಶ್‌ ರಾವ್‌ ಶಿಂಧೆ, ಉಪಾಧ್ಯಕ್ಷ ಎಚ್‌.ಹೊನ್ನಪ್ಪ, ಎಸ್‌.ಟಿ.ಮೋರ್ಚಾ ಕಾರ್ಯದರ್ಶಿ ಎಸ್‌.ಪಿ.ಫಕ್ಕೀರಪ್ಪ, ಮುಖಂಡರಾದ ಎಚ್‌.ಕೆ. ಬಸವರಾಜ್‌, ಎಚ್‌. ಶಾಂತರಾಜ್‌ ಎಂ.ಜಿ.ರಂಗಪ್ಪ ಇದ್ದರು.
 
ಮಾಯಕೊಂಡ ವರದಿ: ಮಾಯಕೊಂಡ ವಿಧಾನಸಭಾ  ಕ್ಷೇತ್ರ ವ್ಯಾಪ್ತಿಯ ಎಲ್ಲಾ ಎಪಿಎಂಸಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.
 
ಆನಗೋಡು ಮತ್ತು ಅಣಜಿ ಮತ್ತು ಮಾಯಕೊಂಡ ಎಪಿಎಂಸಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸಿ  ಮಾತನಾಡಿದರು. 
 
ಬಾವಿಹಾಳ್, ನೇರ್ಲಿಗೆ, ಗಂಗನ ಕಟ್ಟೆ, ನರಗನಹಳ್ಳಿ, ಹೊನ್ನನಾಯ್ಕನ ಹಳ್ಳಿ, ಆನಗೋಡು, ಗಿರಿಯಾಪುರ, ಜಮ್ಮಾಪುರ, ಕಂದನಕೋವಿ, ಸುಲ್ತಾನಿಪುರ, ಕಬ್ಬೂರು ಸೇರಿ ವಿವಿಧ ಗ್ರಾಮಗಳಲ್ಲಿ ಮತ ಯಾಚಿಸಲಾಯಿತು. 
 
ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಕಾರ್ಯಕರ್ತರು ಇದ್ದರು.
 
ಮಾಯಕೊಂಡ ಬಿಜೆಪಿ ಪ್ರಚಾರ: ಎಪಿಎಂಸಿ ಚುನಾವಣೆಯಲ್ಲಿ ಅಣಜಿ, ಆನಗೋಡು ಮತ್ತು ಮಾಯಕೊಂಡ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಮತನೀಡಿ ಅಭಿವೃದ್ಧಿಗೆ ಸಹಕರಿಸಲು ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಜಿ. ನಟರಾಜ್ ಮನವಿ ಮಾಡಿದರು. 
 
ಆನಗೋಡು ಎಪಿಎಂಸಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಫಾಲಾಕ್ಷಮ್ಮ ಸಂಗಪ್ಪ ಪರ ಭಾನುವಾರ ಪ್ರಚಾರ ನಡೆಸಿ ಅವರು ಮಾತನಾಡಿದರು. 
 
ತ್ಯಾವಣಿಗೆ ವರದಿ: ಎಪಿಎಂಸಿ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರ ಇದ್ದು,  ಮಾಯಕೊಂಡ ಕ್ಷೇತ್ರದ 11 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಎಂ. ಬಸವರಾಜನಾಯ್ಕ ಹೇಳಿದರು.
 
ಎಪಿಎಂಸಿಯ ತ್ಯಾವಣಿಗೆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಮ್ಮ ಕಂಬಜ್ಜಿ ರುದ್ರಪ್ಪ ಅವರ ಪರ ಸೋಮವಾರ ಪ್ರಚಾರ ಮಾಡಿದರು.
 
ಮಾಜಿ ಸಚಿವ ಎಸ್.ಎ. ರವೀಂದ್ರ ನಾಥ್, ಡಾ.ಎಂ.ವಿ. ಶಿವಯೋಗಿಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನರೇಂದ್ರರೆಡ್ಡಿ, ಕೆ.ಎಸ್.ಕೃಷ್ಣಕುಮಾರ್,  ಕಾಕನೂರು ಮಂಜುನಾಥ, ಶಿವಣ್ಣ, ಶ್ಯಾಮನೂರು ಗುಮ್ಮನೂರು ಕಲ್ಲೇಶ್, ತ್ಯಾವಣಿಗೆ ತಾಂಡದ ಉಮಾಪತಿ, ಬಸವರಾಜ, ಬೆಳಲಗೆರೆ ಪೂಜಾರ್ ಶೇಖರಪ್ಪ, ಎಂ.ಆರ್.ಹನುಮಂತಪ್ಪ, ಬೆಳ್ಳೂಡಿ ಬಸಪ್ಪ, ಗಣೇಶ್ ಇತರರು ಭಾಗವಹಿಸಿದ್ದರು.
 
ಹರಪನಹಳ್ಳಿ ವರದಿ: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಎಪಿಎಂಸಿ ಚುನಾ ವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮತ ಯಾಚನೆ ಮಾಡಿದರು. 
 
ಪುಣಭಗಟ್ಟ, ಕಮ್ಮತ್ತಹಳ್ಳಿ, ಕ್ಯಾರ ಕಟ್ಟೆ, ಹೊಸಕೋಟೆ, ಬೂದಿಹಾಳ್ ಗ್ರಾಮಗಳಲ್ಲಿ ಪ್ರಚಾರ ನಡೆಯಿತು.
 
ಅಭ್ಯರ್ಥಿ ಬೂದಿಹಾಳ್ ಉಮೇಶ್, ಜಿ.ಪಂ. ಉಪಾಧ್ಯಕ್ಷ ಡಿ. ಸಿದ್ದಪ್ಪ, ಮಹಾಬಲೇಶ್ವರಗೌಡ, ದ್ಯಾಮನಗೌಡ, ಚಟ್ನಿಹಳ್ಳಿ ರಾಜಪ್ಪ, ಹೊಸಕೋಟೆ ಜಾತಪ್ಪ, ಶರಣಪ್ಪ, ಎಂ.ಸುರೇಶ್, ಕೆ.ಆನಂದ, ಬಿ.ಲೋಕೇಶ್, ಪ್ರಶಾಂತ, ನಾಗೇಂದ್ರಪ್ಪ ಭಾಗವಹಿಸಿದ್ದರು.
 
**
ಅಭ್ಯರ್ಥಿಗಳಿಂದ ಮನೆ ಮನೆ ಭೇಟಿ
ಕುಳಗಟ್ಟೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ  ಜನಪರ ಯೋಜನೆಗಳ ಭಾಗ್ಯವನ್ನು ಘೋಷಿಸಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿ ಯಾಗಿ ರೈತಪರ ಯೋಜನೆಗಳಿಗೆ ಕೋಟಿಗಟ್ಟಲೆ ಅನುದಾನವನ್ನು ಬಿಡುಗಡೆಗೊಳಿಸಿ ಉತ್ತಮ ಆಡಳಿತ ನಡೆಸುತ್ತಿದೆ. ಅವರ ಸಹಕಾರದಲ್ಲಿ ಕೃಷಿ ವಲಯದಲ್ಲಿ ಜನಸೇವೆ ಮಾಡಲು ಸಾಸ್ವೆಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿರುವುದಾಗಿ  ಹೊಸಹಳ್ಳಿ ಪಿ.ಟಿ.ಹಾಲೇಶ್ ಹೇಳಿದರು.
 
ಸೋಮವಾರ ಕುಳಗಟ್ಟೆ ಗ್ರಾಮದಲ್ಲಿ ಮತಯಾಚನೆ ಸಂದರ್ಭದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದರು.  ರಾಜ್ಯ ಸರ್ಕಾರ ಕೃಷಿವಲಯಕ್ಕೆ ಪ್ರಾಶಸ್ತ್ಯವನ್ನು ನೀಡಿದ್ದು, ಹಾಲು ಉತ್ಪಾದಕರಿಗೆ  ಪ್ರೋತ್ಸಾಹಧನ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಗ್ರಾಮಗಳಲ್ಲಿ ಎಸ್.ಸಿ.ಪಿ- ಟಿ.ಎಸ್.ಪಿ. ಸಿಸಿ ರಸ್ತೆಗಳು, ಸಹಕಾರ ಸಂಘಗಳ ಮೂಲಕ ಅಗತ್ಯ ಸಾಲ ಸೌಲಭ್ಯ ಕೊಟ್ಟಿದ್ದಾರೆ ಎಂದರು.
 
ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಗದ್ದಿಗೇಶ್, ರುದ್ರೇಶಪ್ಪ, ಎಂ.ಆರ್. ಹನುಮಂತಪ್ಪ, ದೇವರಾಜಪ್ಪ, ಎಚ್.ಚಂದ್ರಪ್ಪ, ಎ.ಪಿ.ಹಾಲೇಶಪ್ಪ, ಶಿವಮೂರ್ತಪ್ಪ, ಶೇಖರಪ್ಪ, ಡಿ.ಸಿ. ಕೃಷ್ಣಪ್ಪ, ಮಂಜುನಾಥ್ ಪಟೇಲ್, ರಮೇಶ್ ಟಿಂಗಲ್, ಈಶಣ್ಣ, ಹಾಲಪ್ಪ, ಬಾಗೂಡಿ ಮಂಜಪ್ಪ, ಲೋಕಪ್ಪ, ವೀರೇಶಪ್ಪ, ಕೃಷ್ಣೋಜಿರಾವ್, ಶೇಖರಪ್ಪ ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT