ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಪಂದ್ಯ : 6 ಮಂದಿ ಬಂಧನ

Last Updated 10 ಜನವರಿ 2017, 9:53 IST
ಅಕ್ಷರ ಗಾತ್ರ
ಸಿರವಾರ: ಸಮೀಪದ ಕಸನದೊಡ್ಡಿ ಗ್ರಾಮದ ಗುಡ್ಡದಲ್ಲಿ ಭಾನುವಾರ ಕೋಳಿ ಪಂದ್ಯದ ಜೂಜಾಟವಾಡುತ್ತಿದ್ದ 6 ಜನರನ್ನು ಬಂಧಿಸಿ ₹5,200 ನಗದು, 4 ಕೋಳಿ ಹುಂಜಗಳು ಮತ್ತು 35 ದ್ವಿಚಕ್ರ ವಾಹನಗಳನ್ನು ವಶಪಡಿಕೊಳ್ಳಲಾಗಿದೆ.
 
ಜೂಜಾಟದ ಖಚಿತ ಮಾಹಿತಿ ಪಡೆದ ಪಟ್ಟಣದ ಪೊಲೀಸರು ಜೂಜಾಟದ ಗುಂಪಿನ ಮೇಲೆ ದಾಳಿ ಮಾಡಿ ಪಟ್ಟಣದ ಹನುಮಂತ್ರಾಯ ಚಿಂಚಲಕುಂಟಿ(50), ದುರುಗಣ್ಣ(48), ಬಲ್ಲಟಗಿ ಗ್ರಾಮದ ಚಂದ್ರಪ್ಪ (38), ತೊಪ್ಪಲದೊಡ್ಡಿ ಗ್ರಾಮದ ಬಾಲಪ್ಪ (32), ಆಕಳಕುಂಪಿಯ ಮಹಾದೇವಪ್ಪ (55), ತಿಮ್ಮಯ್ಯ(31) ಎಂಬುವವರನ್ನು  ಬಂಧಿಸಿದ್ದಾರೆ.ಈ ಕುರಿತು ಸಿರವಾರ   ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT