ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕಾಗಿ ಮುಸ್ಲಿಮರ ಕಡೆಗಣನೆ ಸಲ್ಲದು

Last Updated 11 ಜನವರಿ 2017, 5:38 IST
ಅಕ್ಷರ ಗಾತ್ರ

ಹೊಸದುರ್ಗ: ‌‘ಕೆಲವು ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವನ್ನು ರಾಜಕೀಯ ಕಾರಣಕ್ಕಾಗಿ  ಕಡೆಗಣಿಸು ತ್ತಿರುವುದು ಸರಿಯಲ್ಲ’ ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಶದ್‌ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಝಂಡಾ(ಗ್ಯಾರಂವಿ ಶರೀಫ್‌) ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಮುಸ್ಲಿಂ ಸಮುದಾಯ ಅವಕಾಶ ಹಾಗೂ ಸೌಲಭ್ಯಗಳಿಂದ ವಂಚಿತ ವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ಕೆಲವು ರಾಜಕೀಯ ಪಕ್ಷದ ನಾಯಕರು ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ‘ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಬೇಕಿರುವ ಮೂಲಸೌಕರ್ಯ ಒದಗಿಸಲು ಕಾಂಗ್ರೆಸ್‌ ಬದ್ಧ. ಪಟ್ಟಣದ ಮುಸ್ಲಿಮರು ಒಗ್ಗಟ್ಟಿನ ಮನೋ ಭಾವದಿಂದ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವುದು ಶ್ಲಾಘನೀಯ. ತಾಲ್ಲೂಕಿನ ಜಾನಕಲ್ಲು, ಶ್ರೀರಾಂ ಪುರದಲ್ಲಿ ಶಾದಿಮಹಲ್‌ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ  ಸಲ್ಲಿಸಲಾಗಿದೆ.

ಹಾಗೆಯೇ ಪಟ್ಟಣದಲ್ಲಿ ದರ್ಗಾ ನಿರ್ಮಿಸಲು ಹಾಗೂ ಶಾದಿ ಮಹಲ್‌ಗೆ ಕಾಂಪೌಂಡ್‌ ನಿರ್ಮಿಸಲು ₹20 ಲಕ್ಷ ಅನುದಾನ ನೀಡಿದ್ದೇನೆ’ ಎಂದರು.
ಮಾಜಿ ಶಾಸಕ ಇಲ್ಕಲ್‌ ವಿಜಯಕುಮಾರ್‌ ಮಾತನಾಡಿ, ‘ಶಾಂತಿ, ಸೌಹಾರ್ದ ಬದುಕಿಗೆ ಧಾರ್ಮಿಕ ಹಬ್ಬಗಳು ಸಹಕಾರಿಯಾಗಿವೆ’ ಎಂದರು.

ಮೆರವಣಿಗೆ: ಝಂಡಾ ಹಬ್ಬದ ಅಂಗವಾಗಿ ಪಟ್ಟಣದ ಜಾಮಿಯಾ ಮಸೀದಿಯಿಂದ ಆರಂಭವಾದ ಮುಸ್ಲಿಂ ಧರ್ಮ ಸಂಕೇತಗಳ ಮೆರವಣಿಗೆ ಕೊಬರಿಪೇಟೆ, ಹುಳಿಯಾರು ವೃತ್ತ, ಹಿರಿಯೂರು ವೃತ್ತ, ಹಳೇ ಬಸ್‌ ನಿಲ್ದಾಣ, ಗಾಂಧಿ ವೃತ್ತದ ಮಾರ್ಗವಾಗಿ ಈದ್ಗಾ ಮೈದಾನದವರೆಗೆ ಸಾಗಿತ್ತು. ಬಿಗಿ ಬಂದೋಬಸ್ತ್‌ ಒದಗಿಸಲಾಯಿತು.

ಹಬ್ಬದ ವಿಶೇಷತೆ: ಮುಸ್ಲಿಂ ಧರ್ಮದ ಮುಖಂಡ ಹಜರತ್‌ ಮಹಬೂಬ್‌ ಸುಬಾನಿ ಅವರ ಜನ್ಮ ದಿನದ ಅಂಗವಾಗಿ 57 ವರ್ಷಗಳಿಂದ  ಹೊಸದುರ್ಗದಲ್ಲಿ ಈ ಝಂಡಾ(ಗ್ಯಾರಂವಿ ಶರೀಫ್‌) ಹಬ್ಬವನ್ನು ಆಚರಿಸುತ್ತಾರೆ.  ಇಷ್ಟಾರ್ಥ ಸಿದ್ಧಿಗಾಗಿ ಸುಬಾನಿ ಅವರ ಹೆಸರಿನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ. ಇಷ್ಟಾರ್ಥ ಈಡೇರಿದ ಪ್ರತೀಕವಾಗಿ  ಹಸಿರು ಧ್ವಜ ಗಳನ್ನು ಹಿಡಿದು  ಮೆರವಣಿಗೆಯಲ್ಲಿ ಸಾಗುತ್ತಾರೆ.

ಪುರಸಭೆ ಅಧ್ಯಕ್ಷ ಎಚ್‌.ಪಿ. ಉಮೇಶ್‌, ಸದಸ್ಯರಾದ ವಜೀರ್‌, ದಸ್ತಗಿರಿ ಸಾಬ್‌, ಜಾಮಿಯಾ ಮಸೀದಿ ಅಧ್ಯಕ್ಷ ಫಯಾಜ್‌, ಉಪಾಧ್ಯಕ್ಷ ಮಹಬೂಬ್‌ ಪಾಷಾ, ಕಾರ್ಯದರ್ಶಿ ಬಿ.ಸೈಫುಲ್ಲಾ, ಫಾರೂಕ್‌ ಸಾಬ್‌, ಅನ್ವರ್‌ ಸಾಬ್‌, ಸೈಯದ್‌ ರಫಿಕ್‌, ಮಹಮ್ಮದ್‌ ಪಾಷಾ,  ಇನಾಮ್‌ ಸಾಬ್‌, ಮಹಮ್ಮದ್‌ ಇಸ್ಮಾಯಿಲ್‌, ನಿಸಾರ್‌ ಅಹಮ್ಮದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT