ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರವಾದ ನೀರು ಸಂಗ್ರಹ ಬಾಗಿಲು

Last Updated 11 ಜನವರಿ 2017, 6:06 IST
ಅಕ್ಷರ ಗಾತ್ರ

ಚಿಟಗುಪ್ಪ: ಸಮೀಪದ ಹುಮನಾಬಾದ್ ತಾಲ್ಲೂಕಿನ ಮಾಡಗೂಳ್ ಗ್ರಾಮದಿಂದ ಕಂದಗೂಳ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿಯ ಸೇತುವೆಗೆ ಸರ್ಕಾರ ಅಳವಡಿಸಿರುವ ನೀರು ಸಂಗ್ರಹ ಬಾಗಿಲು ಸೇತುವೆಯ ಎರಡು ಬದಿಗಳಲ್ಲಿ ಇರುವ ನೂರಾರು ರೈತರಿಗೆ ವರವಾಗಿದೆ.

ಕೆರೆ, ಜಲಾಶಯಗಳಿಗೆ ಕೋಡಿ ಬಾಗಿಲು (ಗೇಟ್‌)ಗಳು ನಿರ್ಮಿಸುವ ಮೂಲಕ ಹರಿಯುವ ನೀರು ಸಂಗ್ರಹಿ ಸಲು ಸರ್ಕಾರ ವಿವಿಧ ಯೋಜನೆಗಳಲ್ಲಿ ಹಣ ವಿನಿಯೋಗಿಸುವ ಮೂಲಕ ನೀರು ತಡೆ ಹಿಡಿಯಲಾಗುತ್ತದೆ.

ಹುಮನಾ ಬಾದ್ ತಾಲ್ಲೂಕಿನ ಬೆಳಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಡಗೂಳ್ ಗ್ರಾಮದಿಂದ ಕಂದ ಗೂಳ್ ಗ್ರಾಮಕ್ಕೆ ಹೋಗುವ ರಸ್ತೆ ಹಳ್ಳದ ಮಧ್ಯದಿಂದ ಹಾದು ಹೋಗುತ್ತದೆ.

ಇದರಿಂದ ನಿರ್ಮಿಸಲಾದ ಸೇತುವೆ ಯಿಂದ ಹರಿಯುವ ನೀರು ತಡೆಯಲು ಸೇತುವೆಯನ್ನೆ ಬಳಸಿಕೊಂಡು ಅದರ ಮೂರು ಕೋಡಿಗಳಿಗೆ ಕಬ್ಬಿಣದ ಬಾಗಿಲು ನಿರ್ಮಿಸುವ ಮೂಲಕ ನೀರು ಸಂಗ್ರಹಿಸಿರುವುದು ವಿಶೇಷವಾಗಿದೆ.

ಹಳ್ಳದ ನೀರು ಸಂಗ್ರಹಕ್ಕೆ ಯಾವ ಅನುದಾನವೂ ಇಲ್ಲದೆ ತೀರ ಕಡಿಮೆ ಖರ್ಚಿನಲ್ಲಿ ಕೃಷಿಕರಿಗೆ ಹೆಚ್ಚು ಲಾಭ ಕಲ್ಪಿಸುವ ಈ ಯೋಜನೆ ರಾಜ್ಯಕ್ಕೆ ಮಾದರಿ ಎಂದು ಗ್ರಾಮದ ವಿಶ್ವನಾಥ ಪಾಟೀಲ ತಿಳಿಸುತ್ತಾರೆ.

ಸೇತುವೆ ಕೋಡಿ ಬಾಗಿಲುಗಳು ಮುಚ್ಚಿರುವುದರಿಂದ ಹಳ್ಳದಲ್ಲಿ ಸಂಗ್ರಹವಾದ ಹಿನ್ನಿರು ಹಳ್ಳದ ಎರಡು ಬದಿಗಳಲ್ಲಿಯ ಹಲವು ರೈತರ ಕೃಷಿ ಭೂಮಿಗೆ ಅನುಕೂಲವಾಗಿದೆ. ಹೊಲ ಗಳಲ್ಲಿಯ ಕೊಳವೆ ಹಾಗೂ ತೆರೆದ ಬಾವಿಗಳಲ್ಲಿಯ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಜಾನುವಾರುಗಳಿಗೂ ಮೇವು ನೀರಿನ ಅನುಕೂಲ ಆಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಅನುಭವಿ ಸುವಂತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇಂತಹ ವ್ಯವಸ್ಥೆ ಎಲ್ಲ ರಸ್ತೆಗಳ ಸೇತುವೆಗಳಿಗೆ ಅಳವಡಿದಲ್ಲಿ ಹೆಚ್ಚು ನೀರು ಸಂಗ್ರಹಿಸಲು ಸಾಧ್ಯ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಪಾಟೀಲ, ಸಿರಾಜೊದ್ದೀನ್, ಸಂಗಮೇಶ ಜಾವಾದಿ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT